ಇಂಫಾಲ:ಮಣಿಪುರ ವಿಧಾನಸಭೆಯಲ್ಲಿ ಸೋಮವಾರ ಸಂಜೆ ನಡೆದ ವಿಶ್ವಾಸಮತ ಯಾಚನೆಯಲ್ಲಿ ಭಾರತೀಯ ಜನತಾ ಪಕ್ಷ ನೇತೃತ್ವದ ಮೈತ್ರಿ ಸರ್ಕಾರ ಗೆಲುವು ಸಾಧಿಸಿದೆ.
ಒಟ್ಟು 60 ಸದಸ್ಯರಿದ್ದ ವಿಧಾನಸಭೆಯಲ್ಲಿ ನಾಲ್ವರು ಪಕ್ಷಾಂತರ ಕಾಯ್ದೆ ಅನ್ವಯ ಅನರ್ಹತೆಗೊಳಗಾಗಿದ್ದರೆ, ಮೂವರು ಬಿಜೆಪಿ ಸದಸ್ಯರು ರಾಜೀನಾಮೆ ನೀಡಿದ್ದರು. ಪರಿಣಾಮ ಸದನದ ಬಲ 53ಕ್ಕೆ ಇಳಿದಿತ್ತು.
ಸಿಎಂ ನೋಂಗ್ತೊಂಬಮ್ ಬಿರೇನ್​ ಸಿಂಗ್​ ನೇತೃತ್ವದ ಮೈತ್ರಿ ಸರ್ಕಾರದ ಪರವಾಗಿ​ ಧ್ವನಿಮತದ ಮೂಲಕ ಅಂಗೀಕರಿಸಲಾದ ಗೊತ್ತುವಳಿಯಲ್ಲಿ ಬಿಜೆಪಿಯ 28 ಸದಸ್ಯರು ಮತ ಚಲಾಯಿಸಿದರು. ವಿರೋಧ ಪಕ್ಷವಾದ ಕಾಂಗ್ರೆಸ್​ 24 ಶಾಸಕರನ್ನು ಹೊಂದಿದ್ದರೂ, ಮಾಜಿ ಸಿಎಂ ಇಬೋಬಿ ಸಿಂಗ್​ ನೇತೃತ್ವದಲ್ಲಿ ಕೇವಲ 16 ಶಾಸಕರು ಹಾಜರಿದ್ದರು.
ಇದನ್ನೂ ಓದಿ;ದೀಪಾವಳಿ ವೇಳೆಗೆ 70 ಸಾವಿರ ರೂ.ಗೆ ತಲುಪುತ್ತೆ ಚಿನ್ನದ ಬೆಲೆ; ಬೇಡಿಕೆ ಕುಸಿದಿದ್ದರೂ ಆಗಸಕ್ಕೇಕೆ ಮುಖ ಮಾಡಿದೆ ಹಳದಿ ಲೋಹ
ಜುಲೈ 28ರಂದು ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಕಾಂಗ್ರೆಸ್​ ನೋಟಿಸ್​ ಜಾರಿಗೊಳಿಸಿತ್ತು. ಸ್ಪೀಕರ್​ ಯಮ್ನಾಮ್​ ಖೇಮ್​ಚಂದ್​ ಸದನದ ಅಧ್ಯಕ್ಷತೆ ವಹಿಸಿದ್ದರು. ಅಲ್ಲದೇ, 2018ರ ಔಷಧ ಹಗರಣವನ್ನು ಸಿಬಿಐಗೆ ಒಪ್ಪಿಸಿಲ್ಲ ಎಂದು ಕಾಂಗ್ರೆಸ್​ ಆರೋಪಿಸಿತ್ತು.
ಅವಿಶ್ವಾಸ ಗೊತ್ತುವಳಿಗೂ ಮುನ್ನ ಸಿಎಂ ಎನ್​. ಬಿರೇನ್​ ಸಿಂಗ್​ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಜಲಸಂಪನ್ಮೂಲ ಯೋಜನೆಗಳು ಪೂರ್ಣಗೊಂಡ ಬಳಿಕ ರಾಜ್ಯದಲ್ಲಿ ಸಾಗುವಳಿ ಪ್ರಮಾಣ ದುಪ್ಪಟ್ಟಾಗಲಿದೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ;ಬೈರುತ್​ ಸ್ಫೋಟಕ್ಕೆ ಸರ್ಕಾರವೂ ಪತನ; ಸಂಪುಟ ಸಭೆ ಬಳಿಕ ಎಲ್ಲ ಸಚಿವರ ರಾಜೀನಾಮೆ
ವಿಧಾನಸಭೆಯಲ್ಲಿ ಬಿಜೆಪಿ ಕೇವಲ 18 ಸ್ಥಾನಗಳನ್ನು ಹೊಂದಿದ್ದರೂ, ಎನ್​ಪಿಪಿಯ 4, ಎನ್​ಪಿಎಫ್​ನ-4, ಎಲ್​ಜೆಪಿ-1, ಎಐಟಿಸಿ-1 ಹಾಗೂ ಒಬ್ಬ ಪಕ್ಷೇತರ ಸೇರಿ 11 ಶಾಸಕರ ಬಲದೊಂದಿಗೆ ಅಧಿಕಾರ ಉಳಿಸಿಕೊಂಡಿದೆ. ಕಾಂಗ್ರೆಸ್​ ನಿನ್ನೆ ನಡೆಸಿದ್ದ ಶಾಸಕಾಂಗ ಪಕ್ಷ ಸಭೆಯಿಂದ 12ಕ್ಕೂ ಹೆಚ್ಚು ಶಾಸಕರು ದೂರವುಳಿದಿದ್ದರು. ಈ ಕಾರಣಕ್ಕೆ ವಿಶ್ವಾಸಮತ ಯಾಚನೆಯಲ್ಲಿ ಸರ್ಕಾರಕ್ಕೆ ಗೆಲುವು ಎಂಬುದು ಖಚಿತವಾಗಿತ್ತು.
ನೂರು ದಿನಗಳಿಂದ ಒಂದೂ ಕರೊನಾ ಕೇಸಿಲ್ಲ; ಜಗತ್ತೇ ನಿಬ್ಬೆರಗಾಗಿದೆ ಈ ಸಾಧನೆಗೆ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + two =
Remember me
