ಚೆನ್ನೈ:ಪಂಚ ರಾಜ್ಯಗಳ ಚುನಾವಣೆಯ ಪ್ರಯುಕ್ತ ಪಕ್ಷಗಳು ಪ್ರಣಾಳಿಕೆ ಬಿಡುಗಡೆ ಮಾಡಿವೆ. ತಮಿಳುನಾಡಿನ ಚುನಾವಣೆಯ ಪ್ರಯುಕ್ತ ಬಿಜೆಪಿ ಇಂದು ಪ್ರಣಾಳಿಕೆ ಬಿಡುಗಡೆ ಮಾಡಿದೆ. 50 ಲಕ್ಷ ಜನರಿಗೆ ಉದ್ಯೋಗ, ಮನೆ ಬಾಗಿಲಿಗೆ ಪಡಿತರ ವಿತರಣೆ ಸೇರಿ ಅನೇಕ ಭರವಸೆಗಳನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ.
ರಾಜ್ಯದ 50 ಲಕ್ಷ ಜನರಿಗೆ ಉದ್ಯೋಗ ನೀಡಲಾಗುವುದು. ಮೀನುಗಾರರಿಗೆ ವರ್ಷಕ್ಕೆ ಆರು ಸಾವಿರ ರೂಪಾಯಿ ಪ್ರೋತ್ಸಾಹ ಧನ ನೀಡಲಾಗುವುದು. 8 ಮತ್ತು 9 ತರಗತಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ಲೆಟ್​ ವಿತರಿಸಲಾಗುವುದು. 18ರಿಂದ 23 ವಯಸ್ಸಿನವರಿಗೆ ಉಚಿತವಾಗಿ ಡ್ರೈವಿಂಗ್​ ಲೈಸೆನ್ಸ್​, ಪ್ರತಿ ಮನೆಗೆ ಶುದ್ಧ ನೀರು ಸಂಪರ್ಕ ನೀಡಲಾಗುವುದು.
12 ಲಕ್ಷ ಎಕರೆ ಪಂಚಮಿ ಭೂಮಿಯನ್ನು ಪರಿಶಿಷ್ಟ ಜಾತಿಯ ಜನರಿಗೆ ಹಸ್ತಾಂತರಿಸಲಾಗುವುದು. ಹಿಂದು ದೇವಸ್ಥಾನಗಳ ಆಡಳಿತವನ್ನು ಹಿಂದು ವಿದ್ವಾಂಸರು ಮತ್ತು ಸಾಧುಗಳನ್ನೊಳಗೊಂಡ ಪ್ರತ್ಯೇಕ ಮಂಡಳಿಗೆ ನೀಡಲಾಗುವುದು. ಬಿಜಿನೆಸ್​ ಕ್ಷೇತ್ರದಲ್ಲಿ ದಕ್ಷಿಣ ಭಾರತದಲ್ಲಿ ತಮಿಳುನಾಡು ನಂಬರ್​ 1 ಮಾಡಲಾಗುವುದು. ಕೃಷಿಗೆ ಪ್ರತ್ಯೇಕ ಬಜೆಟ್​ ಮಂಡಿಸಲಾಗುವುದು ಎಂದು ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.
ಚೆನ್ನೂ ನಗರಪಾಲಿಕೆಯನ್ನು ಉತ್ತರ, ಕೇಂದ್ರ ಮತ್ತು ದಕ್ಷಿಣ ಚೆನ್ನೈ ಪಾಲಿಕೆಗಳಾಗಿ ವಿಂಗಡಿಸುವುದಾಗಿಯೂ ತಿಳಿಸಲಾಗಿದೆ. (ಏಜೆನ್ಸೀಸ್​)
8 ವರ್ಷದ ಬಾಲಕಿಯನ್ನು ಕಸದ ತೊಟ್ಟಿಯೊಳಗೆ ರೇಪ್​ ಮಾಡಿದ ಕಿರಾತಕ! ಬಾಯಿ ಮುಚ್ಚಿಸಲು ₹5 ಕೊಟ್ಟ!

ಶುಭ ಬಿಗ್​ಬಾಸ್​ನಲ್ಲಿದ್ದರೆ, ಆಕೆಯ ಭಾವಿ ಪತಿ ಏನು ಮಾಡುತ್ತಿದ್ದಾರೆ ಗೊತ್ತಾ? ಸುದೀಪ್​ ಬಿಚ್ಚಿಟ್ಟ ಸತ್ಯ ಏನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + thirteen =
Remember me
