ಪಟ್ನಾ :ಬಿಹಾರದ ಕೈಗಾರಿಕಾ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ವಕ್ತಾರರಾದ ಸಯೆದ್ ಶಹನವಾಜ್ ಹುಸೇನ್ ಅವರು ಸೆಲ್ಫ್​ ಐಸೋಲೇಷನ್​ಗೆ ಒಳಗಾಗಿದ್ದಾರೆ. ತಮ್ಮ ಸಿಬ್ಬಂದಿಯೊಬ್ಬರಿಗೆ ಕರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸಿದ್ದಾರೆ ಎನ್ನಲಾಗಿದೆ.
“ನನ್ನ ಕಛೇರಿಯ ಸಿಬ್ಬಂದಿಗಳಲ್ಲೊಬ್ಬರಿಗೆ ನಿನ್ನೆ ಕರೊನಾ ಪಾಸಿಟೀವ್ ಬಂದಿದೆ. ಅವರು ನನ್ನ ನಿಕಟ ಸಂಪರ್ಕದಲ್ಲಿದ್ದರು. ಆದ್ದರಿಂದ ಮುನ್ನೆಚ್ಚರಿಕೆಯಾಗಿ ಮತ್ತು ಕೋವಿಡ್ 19 ಪ್ರೊಟೋಕಾಲ್​​ಗೆ ಅನುಸಾರವಾಗಿ, ನಾನು ಐಸೋಲೇಟ್​ ಮಾಡಿಕೊಂಡಿದ್ದೇನೆ” ಎಂದು ಹುಸೈನ್ ಅವರು ಟ್ವೀಟ್ ಮಾಡಿದ್ದಾರೆ. ತಮ್ಮ ಕೆಲಸಗಳನ್ನು ವರ್ಚುವಲ್​ ಆಗಿ ಮತ್ತು ದೂರವಾಣಿ ಮೂಲಕ ನಿಭಾಯಿಸುತ್ತಿರುವುದಾಗಿ ತಿಳಿಸಿದ್ದಾರೆ.
ಹುಸೈನ್​ ಅವರಿಗೆ ಈಗಾಗಲೇ ಒಮ್ಮೆ ಕರೊನಾ ಸೋಂಕು ತಗುಲಿ ಗುಣಮುಖರಾಗಿದ್ದರು. ಕಳೆದ ವರ್ಷ ಅಕ್ಟೋಬರ್​ನಲ್ಲಿ ಅವರಿಗೆ ಕರೊನಾ ಪಾಸಿಟೀವ್ ಬಂದಿದ್ದು ವರದಿಯಾಗಿತ್ತು.
ಡಿಸ್ಕೋ ಡ್ಯಾನ್ಸ್​ ಸ್ಟೈಲಲ್ಲಿ ಮಾಸ್ಕ್​ ! ವೈರಲ್ ಆಗ್ತಿದೆ ಈ ಫೋಟೋ

ಕರೊನಾ ರೋಗಿಗಾಗಿ ಮದುವೆ ಮಂಟಪವಾದ ಆಸ್ಪತ್ರೆ… ಪಿಪಿಇ ಕಿಟ್​ನಲ್ಲಿ ವಧು !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + fifteen =
Remember me
