ನವದೆಹಲಿ :ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ ನಾಯಕಿ ಹಾಗೂ ಸಿಎಂ ಮಮತಾ ಬ್ಯಾನರ್ಜಿ ಅವರು ನಂದೀಗ್ರಾಮದಲ್ಲಿ ಗೆದ್ದಿದ್ದು, ಅವರ ಪಕ್ಷ ರಾಜ್ಯದ 200 ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. ಈ ಸಮಯದಲ್ಲಿ ಪ್ರಮುಖ ಪ್ರತಿಸ್ಪರ್ಧಿಯಾದ ಬಿಜೆಪಿಯ ಹಿರಿಯ ನಾಯಕರಾದ ರಕ್ಷಣಾ ಸಚಿವ ರಾಜ್​ನಾಥ್​ ಸಿಂಗ್​ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ದೀದಿಗೆ ಗೆಲುವಿನ ಶುಭಾಶಯ ಕೋರಿದ್ದಾರೆ.
ಬ್ಯಾನರ್ಜಿ ಅವರಿಗೆ ಟ್ವಿಟರ್ ಮೂಲಕ ಶುಭಾಶಯ ಕೋರಿದ ಮೊದಲ ಬಿಜೆಪಿ ನಾಯಕರಾದ ರಾಜ್​ನಾಥ್​ ಸಿಂಗ್, ‘ಬಂಗಾಳದ ಸಿಎಂ ದೀದಿಗೆ ಅವರ ಪಕ್ಷದ ಗೆಲುವಿನ ಶುಭಾಶಯಗಳು. ಅವರ ಮುಂದಿನ ಅಧಿಕಾರಾವಧಿಗೆ ನನ್ನ ಹಾರೈಕೆಗಳು’ ಎಂದು ಬರೆದಿದ್ದಾರೆ. ಮತ್ತೊಂದು ಟ್ವೀಟ್​​ನಲ್ಲಿ ಸಿಂಗ್​ ಅವರು ಕೇರಳದಲ್ಲಿ ಎಲ್​ಡಿಎಫ್​ ಪುನಃ ಗೆಲುವು ಸಾಧಿಸಿದ್ದಕ್ಕೆ ಸಿಎಂ ಪಿಣರಾಯಿ ವಿಜಯನ್​ ಅವರಿಗೂ ಶುಭಾಶಯ ಕೋರಿದ್ದಾರೆ.
ಇದನ್ನೂ ಓದಿ:ಬೆಳಗಾವಿಯಲ್ಲಿ ಜಯಭೇರಿ ಭಾರಿಸಿದ ಮಂಗಲಾ ಅಂಗಡಿ, ಕಡಿಮೆ ಅಂತರದಲ್ಲಿ ಸೋಲುಂಡ ಸತೀಶ್​ ಜಾರಕಿಹೊಳಿ
ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಮಮತಾ ಬ್ಯಾನರ್ಜಿ, ತಮಿಳುನಾಡಿನಲ್ಲಿ ಗೆಲುವು ಪಡೆದ ಡಿಎಂಕೆಯ ಎಂ.ಕೆ.ಸ್ಟಾಲಿನ್ ಮತ್ತು ಕೇರಳದ ವಿಜಯನ್ ಅವರಿಗೆ ಶುಭಾಶಯ ಕೋರಿ ಟ್ವೀಟ್ ಮಾಡಿದ್ದಾರೆ.(ಏಜೆನ್ಸಿಸ್)
ಕೋವಿಡ್ ವಾರಿಯರ್​​ಗಳ ಸೇವೆಗೆ ‘ಚೈತನ್ಯ ಕೇಂದ್ರ’ ಆರಂಭ

ಟ್ವಿಟರ್​ ತುಂಬಾ ’12ನೇ ತರಗತಿ ಸಿಬಿಎಸ್​ಇ ಪರೀಕ್ಷೆ ರದ್ದುಗೊಳಿಸಿ’ ಎಂಬ ಕೂಗು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − 2 =
Remember me
