ಸೋಮವಾರ:ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಪಶ್ಚಿಮ ಬಂಗಾಳದ ಬಿಜೆಪಿ ಶಾಸಕ ದೇಬೇಂದ್ರನಾಥ್ ರೇ ಅವರದ್ದು ಆತ್ಮಹತ್ಯೆಯೋ, ಕೊಲೆಯೋ ಎಂಬ ಬಗ್ಗೆ ಇದ್ದ ಸಂದೇಹಗಳಿಗೆ ಮರಣೋತ್ತರ ಪರೀಕ್ಷೆ ತೆರೆ ಎಳೆದಿದೆ.
ಇವರು ಆತ್ಮಹತ್ಯೆಯೇ ಮಾಡಿಕೊಂಡಿದ್ದಾರೆ ಎಂದು ವರದಿ ಬಂಧಿದೆ. ರೇ ಅವರ ದೇಹವು ಕುತ್ತಿಗೆ ಮೇಲಿರುವ ಕಲೆಗಳಿಂದ ಇದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಸಾಬೀರಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆದಾಗ್ಯೂ, ರಾಸಾಯನಿಕ ಪರೀಕ್ಷೆಯ ವರದಿಯನ್ನು ಇನ್ನೂ ಕಾಯಲಾಗುತ್ತಿದೆ ಎಂದಿದ್ದಾರೆ ವೈದ್ಯರು.
ಇದನ್ನೂ ಓದಿ:ವಾಪಸ್‌ ಬರುವೆ ಎಂದಿದ್ದ ಬಿಜೆಪಿ ಶಾಸಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!
ನಿನ್ನೆ ಬೆಳಗಿನ ಜಾವ ಇವರ ಶವ ಅಂಗಡಿಯೊಂದರ ಬಳಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಬಗ್ಗೆ ಚರ್ಚೆಗಳು ಶುರುವಾಗಿದ್ದವು.ಇವರಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಯಾವ ಕಾರಣವೂ ಇರಲಿಲ್ಲ. ಇದೊಂದು ಕೊಲೆ ಎಂದು ಅವರು ಕುಟುಂಬಸ್ಥರ ಆರೋಪ. ಕೊಲೆ ಮಾಡಿದ ನಂತರ ನೇಣು ಹಾಕಲಾಗಿದೆ ಎನ್ನುವುದು ಅವರ ಅನಿಸಿಕೆಯಾಗಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರ ಸಹೋದರ ಜಿತೇಶ್ ಚಂದ್ರ ರಾಯ್, ದೇವೇಂದ್ರ ರಾತ್ರಿ ಸಹಿ ತೆಗೆದುಕೊಳ್ಳುವ ಸಂಬಂಧ ಚಹಾದ ಅಂಗಡಿಗೆ ಬಂದಿದ್ದ. ಮಧ್ಯರಾತ್ರಿ ಸುಮಾರು 1 ಗಂಟೆಯಾಗಿತ್ತು. ವಾಪಸ್‌ ಬರುವುದಾಗಿ ಹೇಳಿ ಹೋಗಿದ್ದ. ಅದೇ ವೇಳೆ ಅದೇ ದಾರಿಯಲ್ಲಿ ಒಂದು ಬೈಕ್‌ ಹೋದ ಶಬ್ದವಾಗಿದೆ. ದೇವೇಂದ್ರ ವಾಪಸ್‌ ಬರದ ಕಾರಣ, ಹೋಗಿ ನೋಡುವಷ್ಟರದಲ್ಲಿ ನೇಣು ಬಿಗಿದಿರುವುದು ಕಂಡಿದೆ’ ಎಂದು ಹೇಳಿದ್ದ ಕಾರಣ, ಇದು ಕೊಲೆಯೇ ಎನ್ನಲಾಗಿತ್ತು.
ನಂತರ ಅವರ ಜೇಬಿನಲ್ಲಿ ಡೆತ್‌ನೋಟ್‌ ಸಿಕ್ಕಿರುವುದಾಗಿ ಪೊಲೀಸರು ಹೇಳಿದ್ದರು.
ಬಿಜೆಪಿ ಶಾಸಕನ ಸಾವಿಗೆ ಕಾರಣ ಯಾರು? ಜೇಬಲ್ಲಿ ಸಿಕ್ಕ ರಹಸ್ಯ…!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × 3 =
Remember me
