ಮುಂಬೈ:ಪ್ರತಿದಿನ ಮೀನು ಸೇವಿಸುವುದರಿಂದ ನೀವು ಐಶ್ವರ್ಯ ರೈ ಅವರಂತೆ ಕಾಣುತ್ತೀರಾ ಎಂದು ಹೇಳುವ ಮೂಲಕ ಬಿಜೆಪಿ ಸಚಿವರೊಬ್ಬರು ಹೊಸ ವಿವಾದ ಒಂದನ್ನು ಹುಟ್ಟುಹಾಕಿದ್ದಾರೆ.
ಮಹಾರಾಷ್ಟ್ರ ಸರ್ಕಾರದ ಬುಡಕಟ್ಟು ಖಾತೆ ಸಚಿವ ವಿಜಯ್​ಕುಮಾರ್​ ಗವಿತ್​ ನಟಿಯ ಕುರಿತಾಗಿ ಹೇಳಿಕೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಸಾಕಷ್ಟು ಖಂಡನೆ ವ್ಯಕ್ತವಾಗುತ್ತಿದೆ.
ಮಹಾರಾಷ್ಟ್ರದ ನಂದೂರ್​ಬಾರ್​ ಜಿಲ್ಲೆಯಲ್ಲಿ ಕಾರ್ಯಕ್ರವನ್ನು ಉದ್ದೇಶಿಸಿ ಮಾತನಾಡಿದ ಸಚಿವ ವಿಜಯ್​ಕುಮಾರ್​ ಪ್ರತಿದಿನ ಮೀನುಗಳನ್ನು ಸೇವಿಸುವುದರಿಂದ ಜನರು ನಯವಾದ ಚರ್ಮ ಹಾಗೂ ಹೊಳೆಯುವ ಕಣ್ಣುಗಳನ್ನು ಹೊಂದಿರುತ್ತಾರೆ. ಆಗ ಜನ ನಿಮ್ಮತ್ತ ಹೆಚ್ಚು ಆಕರ್ಷಿತರಾಗುತ್ತಾರೆ.
ವಿಡಿಯೋ ಕೃಪೆ: ಮ್ಯಾಕ್ಸ್​ ಮಹಾರಾಷ್ಟ್ರ
म्हणून ऐश्वर्या रॉयचे Aishwarya Rai डोळे आणि त्वचा सुंदर आहे – आदिवासी विकास मंत्री VijayKumar Gavit#vijaykumargavit#aishwaryaraibachchan#aishwaryarai#adiwasi#maxmaharashtra@AishwaryaWeb@DrVijayKGavitpic.twitter.com/2kFhmgSRBk
ಇದನ್ನೂ ಓದಿ:ತೆಲಂಗಾಣ ವಿಧಾನಸಭೆ ಚುನಾವಣೆ; ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಆರ್​ಎಸ್​
ಮಂಗಳೂರಿನ ಕಡಲತೀರದಲ್ಲಿ ವಾಸಿಸುತ್ತಿದ್ದ ನಟಿ ಐಶ್ವರ್ಯ ರೈ ಅವರು ಪ್ರತಿನಿತ್ಯ ಮೀನುಗಳನ್ನು ಸೇವಿಸುತ್ತಿದ್ದರು. ನೀವು ಅವರ ಹೊಳೆಯುವ ಕಣ್ಣು ಹಾಗೂ ಚರ್ಮವನ್ನು ನೋಡಿದ್ದೀರಾ. ಅವರಂತಾಗಲು ನೀವು ಪ್ರತಿನಿತ್ಯ ಮೀನುಗಳನ್ನು ಸೇವಿಸಿ. ಮೀನಿನಲ್ಲಿ ಹಲವು ತರಹದ ಪೌಷ್ಟಿಕಾಂಶವಿದ್ದು ಅದರ ಸೇವನೆಯಿಂದ ನಿಮ್ಮ ಚರ್ಮ ಮೃದುಗೊಳ್ಳುತ್ತದೆ ಎಂದು ಸಚಿವರು ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
ಇತ್ತ ವಿಡಿಯೋ ವೈರಲ್​ ಆಗುತ್ತಿದ್ದಂತೆ ಕಿಡಿಕಾರಿರುವ ನೆಟ್ಟಿಗರು, ಸಚಿವರು ಈ ರೀತಿಯ ಕ್ಷುಲಕ ಹೇಳಿಕೆಗಳನ್ನು ಕೊಡುವ ಬದಲು ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗ ಹೆಚ್ಚಿನ ಗಮನ ಹರಿಸಬೇಕು. ಪ್ರತಿನಿತ್ಯ ಮೀನು ಸೇವಿಸುವವರ ಕಣ್ಣು ಹಾಗೂ ಚರ್ಮ ಸಚಿವರು ಹೇಳಿದ ಹಾಗೆ ಹೊಳೆಯಬೇಕಿತ್ತು. ಆದರೆ, ಅವರು ಹೇಳಿದ ಹಾಗೆ ಯಾಕಿಲ್ಲ. ಈ ಬಗ್ಗ ಅವರೇನಾದರೂ ಸಂಶೋಧನೆ ನಡೆಸಿದ್ದಾರಾ ಎಂದು ಹಲವರು ಪ್ರಶ್ನಿಸಿದ್ದಾರೆ.
ಇತ್ತ ಸಚಿವ ಹೇಳಿಕೆ ವೈರಲ್​ ಆಗುತ್ತಿದ್ದಂತೆ ವಿಪಕ್ಷ ನಾಯಕರು ಮುಗಿಬಿದ್ದಿದ್ದು, ಯಾವ ಆಧಾರದ ಮೇಲೆ ಈ ರೀತಿಯ ಹೇಳಿಕೆಗಳನ್ನು ನೀವು ಕೊಡುತ್ತೀರಾ. ಸಮಾಜದ ದಿಕ್ಕು ತಪ್ಪಿಸುವ ಕೆಲಸ ಮಾಡುವ ಬದಲು ನೈಜ ಸಮಸ್ಯೆಗಳತ್ತ ಗಮನ ಹರಿಸಿ ಎಂದು ವಿಪಕ್ಷ ನಾಯಕರು ಚಾಟಿ ಬೀಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
