ಲಖನೌ:ಸರ್ಕಾರ ತಮ್ಮದೇ ಇದೆ, ಏನು ಮಾಡಿದರೂ ಅರಗಿಸಿಕೊಳ್ಳಬಹುದೆಂಬ ಬಿಜೆಪಿ ಶಾಸಕನ ಲೆಕ್ಕಾಚಾರ ತಪ್ಪಿಹೋಗಿದೆ. ಕೋರ್ಟ್​ಗೆ ಹಾಜರಾಗಬೇಕಾಗಿದ್ದ ಶಾಸಕ, ಕೋವಿಡ್ 19 ಫೇಕ್ ರಿಪೋರ್ಟ್​ ಸಲ್ಲಿಸಿ ಇದೀಗ ಪೇಚಿಗೆ ಸಿಲುಕಿದ್ದಾರೆ.
ಮೆಂಹದಾವಲ್ ಕ್ಷೇತ್ರದ ಶಾಸಕ ರಾಕೇಶ್​ ಸಿಂಗ್ ಬಘೇಲ್ ಆರೋಪಿ. ಇದೀಗ ಶಾಸಕ ಬಘೇಲ್ ಜತೆಗೆ ನಕಲಿ ವರದಿ ಕೊಟ್ಟ ಸಂತ ಕಬೀರ್​ನಗರದ ಚೀಫ್ ಮೆಡಿಕಲ್ ಆಫೀಸರ್ ಡಾಕ್ಟರ್​ ಹರಗೋವಿಂದ್ ಸಿಂಗ್ ವಿರುದ್ಧವೂ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಇದನ್ನೂಓದಿ:ಜೆಡಿಯುಗೆ ಹೊಸ ಸಾರಥಿ- ನಾಯಕತ್ವದಿಂದ ಹಿಂದೆ ಸರಿದ್ರು ನಿತೀಶ್ ಕುಮಾರ್ !
ಶಾಸಕ ಬಘೇಲ್​ 2010ರಲ್ಲಿ ನಡೆದ ಕೊಲೆಯತ್ನ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ಪ್ರಕರಣಕ್ಕೆ ಸಂಬಂಧಿಸಿ ಎಂಪಿ/ಎಂಎಲ್​ಎ ಕೋರ್ಟ್​ಗೆ ವಿಚಾರಣೆಗೆ ಹಾಜರಾಗಬೇಕಾಗಿತ್ತು. ಆದರೆ, ಶಾಸಕ ಬಘೇಲ್ ಅತಿಬುದ್ಧಿವಂತಿಕೆ ಪ್ರದರ್ಶಿಸಿ ಫೇಕ್ ಕೋವಿಡ್ 19 ರಿಪೋರ್ಟ್​ ಅನ್ನು ಕೋರ್ಟಿಗೆ ಸಲ್ಲಿಸಿದ್ದರು. ಹೆಚ್ಚುವರಿ ಸೆಷನ್ಸ್​ ಜಡ್ಜ್ ದೀಪಂತ್ ಮಣಿ ಸಮನ್ಸ್ ಜಾರಿಗೊಳಿಸಿದ್ದರು.
ಇದನ್ನೂಓದಿ:ದೇವಸ್ಥಾನದ ಮೇಲೆ ದಾಳಿ ನಡೆಸೋದಕ್ಕೆ ಸಿದ್ಧರಾಗಿದ್ರು ಉಗ್ರರು!: ಪಾಕಿಸ್ತಾನದಿಂದ ಕರೆ ಕೂಡ ಬಂದಿತ್ತು ಅವರಿಗೆ!
ಶಾಸಕ ಬಘೇಲ್ ಇದೇ ಮೊದಲ ಬಾರಿ 2017 ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ವಿಧಾನಸಭೆ ಪ್ರವೇಶಿಸಿದವರು. ಲಖನೌನ್​ ಗೋಮತಿ ನಗರದ ನಿವಾಸಿ. ಇದೀಗ ಶಾಸಕ ಬಘೇಲ್ ಮತ್ತು ಸಿಎಂಒ ವಿರುದ್ಧ ಪೋರ್ಜರಿ ಕೇಸ್ ದಾಖಲಾಗಿದೆ. (ಏಜೆನ್ಸೀಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ಮದುವೆಯಾಗಿ ತಿಂಗಳಿಲ್ಲ… ನಗ,ನಗದು ಎತ್ಕೊಂಡು ಓಡಿ ಹೋದ್ಳು ಪಿಂಕುವಿನ ಹೆಂಡ್ತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − one =
Remember me
