ಲಖನೌ:ದೇಶದಲ್ಲಿ ಮಹಾಮಾರಿ ಕರೊನಾ ವೈರಸ್ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿರುವ ನಡುವೆಯೇ ಉತ್ತರ ಪ್ರದೇಶದ ಬಿಜೆಪಿ ಶಾಸಕ ಕರೊನಾ ಹೋಗಲಾಡಿರುವ ಗೋಮೂತ್ರ ಸೇವಿಸುವಂತೆ ಕರೆ ನೀಡಿದ್ದಾರೆ.
ಸ್ವತಃ ಗೋಮೂತ್ರ ಕುಡಿಯುತ್ತಿರುವ ವಿಡಿಯೋವನ್ನು ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯ ಬೈರಿಯಾ ಕ್ಷೇತ್ರ ಶಾಸಕ ಸುರೇಂದ್ರ ಸಿಂಗ್​ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದಾರೆ.
ವಿಡಿಯೋದಲ್ಲಿ ಗೋಮೂತ್ರವನ್ನು ಸರಿಯಾಗಿ ಯಾವ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕೆಂಬುದನ್ನು ಪ್ರದರ್ಶಿಸಿದ್ದಾರೆ. ಗೋಮೂತ್ರದಿಂದ ವೈರಸ್​ ಹರಡುವುದನ್ನು ನಿಯಂತ್ರಿಸಬಹುದು. ಒಂದು ದಿನದಲ್ಲಿ 18 ಗಂಟೆ ಕೆಲಸ ಮಾಡಿದರೂ ನಾನು ಆರೋಗ್ಯದಿಂದ್ದೇನೆ ಅಂದ್ರೆ ಅದಕ್ಕೆ ಕಾರಣ ಗೋಮೂತ್ರ ಎಂದು ಸುರೇಂದ್ರ ಸಿಂಗ್​ ಹೇಳಿದ್ದಾರೆ.
ಹೇಗೆ ಸೇವಿಸಬೇಕೆಂದು ಶಾಸಕರು ವಿವರಣೆ ನೀಡಿದ್ದು, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಗೋಮೂತ್ರ ತೆಗೆದುಕೊಳ್ಳಬೇಕು. ಎರಡರಿಂದ ಮೂರು ಮುಚ್ಚಳ​ ಗೋಮೂತ್ರ ತೆಗೆದುಕೊಂಡು ಅದನ್ನು ಒಂದು ಗ್ಲಾಸ್​ ನೀರಿನಲ್ಲಿ ಬೆರೆಸಿ ಕುಡಿಯಬೇಕೆಂದು ತಿಳಿಸಿದ್ದಾರೆ.
ನಾನು ವಿಜ್ಞಾನವನ್ನು ನಂಬುತ್ತೀನೋ, ಇಲ್ಲವೋ. ಆದರೆ, ಹಸುವಿನ ಮೂತ್ರವನ್ನು ನಾನು ಸಂಪೂರ್ಣವಾಗಿ ನಂಬುತ್ತೇನೆ ಎಂದಿರುವ ಸುರೇಂದ್ರ ಸಿಂಗ್, ಗೋಮೂತ್ರ ಸೇವಿಸುವಾಗ ಒಂದು ಮುಂಜಾಗ್ರತ ಕ್ರಮವನ್ನು ತೆಗೆದುಕೊಳ್ಳಲು ಸಲಹೆ ನೀಡಿದ್ದಾರೆ. ಅದೇನೆಂದರೆ, ಗೋಮೂತ್ರ ಸೇವಿಸಿದ ಅರ್ಧ ಗಂಟೆಯವರೆಗೆ ಏನನ್ನು ಸೇವಿಸಬೇಡಿ ಎಂದಿದ್ದಾರೆ. ಕೇವಲ ಕರೊನಾಗೆ ಮಾತ್ರವಲ್ಲ ಬಹುತೇಕ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಗೋಮೂತ್ರಕ್ಕೆ ಇದೆ ಎಂದಿದ್ದಾರೆ. ಇದೇ ವೇಳೆ ಉತ್ತಮ ಆರೋಗ್ಯವನ್ನು ಕಾಪಾಡುವ ಸಲುವಾಗಿ ಹುರಿದ ಅರಿಶಿನ ಪುಡಿಯನ್ನು ಸೇವಿಸುವಂತೆ ಶಿಫಾರಸು ಮಾಡಿದರು.(ಏಜೆನ್ಸೀಸ್​)
ಕರೊನಾ ಸೋಂಕಿತ ಪತ್ನಿಯನ್ನೇ ಕೊಲೆ ಮಾಡಿದ ಪತಿ: ಆರೋಪಿ ಹೇಳಿದ್ದನ್ನು ಕೇಳಿ ಬೆಚ್ಚಿಬಿದ್ದ ಪೊಲೀಸರು!

ಪತಿ ಶಾಸಕ, ಪತ್ನಿ ಅದೇ ಕ್ಷೇತ್ರದ ತಹಸೀಲ್ದಾರ್!

‘ಹನುಮಂತನ ಜನ್ಮಭೂಮಿ ಕುರಿತು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಭಕ್ತರನ್ನು ದಾರಿತಪ್ಪಿಸುತ್ತಿದ್ದಾರೆ’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 12 =
Remember me
