ನವದೆಹಲಿ:ತನ್ನ ಛಾಯಚಿತ್ರವನ್ನು ಬುಟ್ಟಿಯೊಳಗೆ ಇಟ್ಟು ರಸ್ತೆಯ ಮಧ್ಯೆದಲ್ಲಿ ಮಾಟ ಮಂತ್ರ ಮಾಡಿರುವ ಫೋಟೋವೊಂದನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡ ಬಿಜೆಪಿ ಶಾಸಕ ಲೋಕೇಂದ್ರ ಪ್ರತಾಪ್ ಸಿಂಗ್, “ನಾನು ಶಿವನ ಭಕ್ತ, ಈ ತಂತ್ರಗಳಿಗೆ ಹೆದರುವುದಿಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ:ಬೆಂಗಳೂರು-ಕರ್ನಾಟಕ ಬಂದ್ ಬಳಿಕವೂ ತಮಿಳುನಾಡಿಗೆ ಹರಿಯುತ್ತಿರುವ ಕಾವೇರಿ: ಕೆಆರ್​ಎಸ್ ಡ್ಯಾಮ್​ಗೇ ಮುತ್ತಿಗೆ ಯತ್ನ
ಮಾಟ ಮಂತ್ರದ ಮೂಲಕ ನನ್ನನ್ನು ಕೆಲವರು ಗುರಿಯಾಗಿಸಿಕೊಂಡಿದ್ದಾರೆ ಎಂದ ಉತ್ತರಪ್ರದೇಶದ ಮೊಹಮ್ಮದಿಯ ಬಿಜೆಪಿ ಶಾಸಕರು, ಈ ಬಗ್ಗೆ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಬುಟ್ಟಿಯೊಳಗೆ ಕೆಂಪು ವಸ್ತ್ರದ ಮೇಲೆ ಶಾಸಕನ ಫೋಟೋ ಇರಿಸಿ, ವಾಮಾಚಾರದ ವಸ್ತುಗಳನ್ನು ಬಳಕೆ ಮಾಡಿರುವುದು ಛಾಯಚಿತ್ರದಲ್ಲಿ ಕಾಣಬಹುದಾಗಿದೆ.
ಈ ಬಗ್ಗೆ ಮಾತನಾಡಿದ ಲೋಕೇಂದ್ರ ಪ್ರತಾಪ್ ಸಿಂಗ್, “ನಾನು ಶಿವನ ಭಕ್ತನಾಗಿರುವುದರಿಂದ ಈ ತಂತ್ರಗಳಿಗೆ ಹೆದರುವುದಿಲ್ಲ. ವೈಜ್ಞಾನಿಕ ಪ್ರಗತಿಯು ಜನರು ಚಂದ್ರನನ್ನು ತಲುಪಲು ಅನುವು ಮಾಡಿಕೊಟ್ಟಿರುವ ಯುಗದಲ್ಲಿ, ಇಂತಹ ಅಭ್ಯಾಸಗಳು ಮುಂದುವರಿದಿವೆ. ನಾವು ಚಂದ್ರನನ್ನು ತಲುಪಿದ್ದೇವೆ, ಇನ್ನೂ ಕೆಲವರು ವಾಮಾಚಾರವನ್ನುನಂಬುತ್ತಾರೆ.ದೇವರು ಅವರಿಗೆ ಬುದ್ಧಿಯನ್ನು ನೀಡಲಿ” ಎಂದು ಬರದು ಪೋಸ್ಟ್​ ಮಾಡಿದ್ದಾರೆ,(ಏಜೆನ್ಸೀಸ್).
ತೆನೆ ಹೊತ್ತ ಕಮಲ; ಹೊಂದಾಣಿಕೆಯಿಂದ ಯಾರ ರಾಜಕೀಯ ಭವಿಷ್ಯವನ್ನೂ ಹೊಸಕಿ ಹಾಕಲ್ಲ: ಎಚ್​ಡಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + ten =
Remember me
