ದೀಸ್ಪುರ್​:ವಿಶ್ವವಿಖ್ಯಾತ ತಾಜ್​ಮಹಲ್ ಮತ್ತು ಕುತುಬ್​ ಮಿನಾರ್​ ಅನ್ನು ನೆಲಸಮ ಮಾಡಿ, ಅವುಗಳ ಬದಲಾಗಿ ಭವ್ಯವಾದ ದೇವಸ್ಥಾನಗಳನ್ನು ನಿರ್ಮಿಸಿ ಎಂದು ಪ್ರಧಾನಿ ಮೋದಿ ಅವರನ್ನು ಅಸ್ಸಾಂ ಜಿಜೆಪಿ ಶಾಸಕ ರುಪ್​ಜ್ಯೋತಿ ಕುರ್ಮಿ ಒತ್ತಾಯಿಸಿದ್ದಾರೆ. ​
ಸ್ಮಾರಕಗಳು ನೆಲಸಮ ಮಾಡುವುದಲ್ಲದೆ, ಮೊಘಲ್ ಚಕ್ರವರ್ತಿ ಶಹಜಹಾನ್ ನಿಜವಾಗಿಯೂ ಮುಮ್ತಾಜ್ ಅನ್ನು ಪ್ರೀತಿಸುತ್ತಿದ್ದನೇ ಎಂಬುದರ ಬಗ್ಗೆ ತನಿಖೆಗೂ ಸಹ ಶಾಸಕ ಒತ್ತಾಯಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.
ಇದನ್ನೂ ಓದಿ:ಬದುಕಿದ್ದಾಗಲೇ ಡೆತ್ ಸರ್ಟಿಫಿಕೆಟ್ ಇಶ್ಯೂ! ತಾಯಿ ಮರಣಪತ್ರ ಕೇಳಿದ್ದ ಮಗಳಿಗೆ ಶಾಕ್
ನಾನು ಪ್ರಧಾನಿ ಮಂತ್ರಿ ಅವರಲ್ಲಿ ಕೇಳಿಕೊಳ್ಳುವುದೇನೆಂದರೆ, ತಕ್ಷಣ ಎರಡು ಸ್ಮಾರಕಗಳನ್ನು ಕೆಡವಿ. ಆ ಜಾಗದಲ್ಲಿ ವಿಶ್ವದ ಅತ್ಯಂತ ಸುಂದರವಾದ ದೇವಸ್ಥಾನಗಳನ್ನು ನಿರ್ಮಾಣ ಮಾಡಿ. ದೇವಾಲಯಗಳ ವಾಸ್ತುಶೈಲಿಯು ಹೇಗಿರಬೇಕೆಂದರೆ, ಬೇರೆ ಯಾವುದೇ ಸ್ಮಾರಕಗಳು ಕೂಡ ಅವುಗಳಿಗೆ ಹತ್ತಿರವಾಗದಂತೆ ಇರಬೇಕು. ದೇವಸ್ಥಾನಗಳನ್ನು ನಿರ್ಮಿಸಿದ್ದೇ ಆದಲ್ಲಿ, ನನ್ನ ಒಂದು ವರ್ಷದ ಸಂಬಳವನ್ನು ದೇಣಿಗೆಯಾಗಿ ನೀಡುವೆ ಎಂದು ಕುರ್ಮಿ ಹೇಳಿದ್ದಾರೆ.
AssamBharatiya Janta Party (BJP) MLA Rupjyoti Kurmi urges Prime Minister Narendra Modi to demolish the#TajMahal, Qutub Minar, and build temples instead.pic.twitter.com/w1LM2AlEci
— Inaya Saba (@InayaSaba)April 5, 2023

ಮಮ್ತಾಜ್ ಸಾವಿನ ಬಳಿಕ ಶಹಜಹಾನ್ ಮೂರು ಬಾರಿ ಏಕೆ ಮದುವೆಯಾದರು ಎಂಬ ಪ್ರಶ್ನೆ ಕೇಳಿರುವ ಕುರ್ಮಿ, ಶಹಜಹಾನ್​ ಮುಮ್ತಾಜ್‌ಳನ್ನು ನಿಜವಾಗಿ ಪ್ರೀತಿಸಿದ್ದರೆ, ಆಕೆಯ ಮರಣದ ನಂತರ ಅವನು ಮೂರು ಬಾರಿ ಏಕೆ ಮದುವೆಯಾದನು. ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದು ಎನಿಸಿಕೊಂಡಿರುವ ತಾಜ್​ಮಹಲ್​ ಅನ್ನು ಹಿಂದು ರಾಜಮನೆತನದ ಸಂಪತ್ತಿನಿಂದ ನಿರ್ಮಿಸಲಾಗಿದೆ ಎಂದು ಅವರು ಕುರ್ಮಿ ಪ್ರತಿಪಾದಿಸಿದ್ದಾರೆ.(ಏಜೆನ್ಸೀಸ್​)
ಕೆ.ಆರ್​. ಪೇಟೆ ಕಾಂಗ್ರೆಸ್​ ಟಿಕೆಟ್​: ಒಂದೇ ಕಲ್ಲಲ್ಲಿ ಮೂರು ಹಕ್ಕಿ ಹೊಡೆದ ಮಾಜಿ ಸಿಎಂ ಸಿದ್ದು!

VIDEO| ಮದ್ಯದ ಅಮಲಿನಲ್ಲಿ ದೇವಸ್ಥಾನದ ಮುಂದೆಯೇ ಡಾನ್ಸ್​ ಮಾಡಿದ ASIಗೆ ಕಾದಿತ್ತು ಆಘಾತ!

‘ಸ್ವಾತಿ ಮುತ್ತಿನ ಮಳೆ‌ಹನಿಯೇ’ ಟೈಟಲ್‌ ವಿವಾದ; ರಮ್ಯಾ ಪರವಾಗಿ ಕೋರ್ಟ್​ ಆದೇಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 2 =
Remember me
