ಹೈದರಾಬಾದ್​:ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನು ಮನೆ ಕಟ್ಟಲು, ಮಗನ ಮದುವೆಗೆ ಬಳಸಿದ್ದೇನೆ ಎಂದು ಬಿಜೆಪಿ ಸಂಸದರೊಬ್ಬರು ಕಾರ್ಯಕ್ರಮ ಒಂದರಲ್ಲಿ ಮಾತನಾಡುವ ವೇಳೆ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
ತೆಲಂಗಾಣದ ಆದಿಲಾಬಾದ್​ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಸೋಯಂ ಬಾಪು ರಾವ್​ ಪ್ರದೇಶಾಭಿವೃದ್ಧಿ ನಿಧಿಯನ್ನು ತಮ್ಮ ಸ್ವಂತ ಖರ್ಚಿಗೆ ಬಳಸಿಕೊಂಡಿರುವುದಾಗಿ ಹೇಳುವ ಮೂಲಕ ಸುದ್ದಿಯಾಗಿದ್ಧಾರೆ.
ಇದನ್ನೂ ಓದಿ:2 ಸಾವಿರ ರೂ. ಪಾಕೆಟ್​ ಮನಿ ನಿರಾಕರಿಸಿದ್ದಕ್ಕೆ ತಂದೆಯನ್ನೇ ಕೊಂದ ಮಗ!
ಸೋಯಂ ಬಾಪು ರಾವ್ ಸ್ಥಳೀಯ ಬಿಜೆಪಿ ಕಾರ್ಯಕರ್ತರನ್ನು ಉದ್ಧೇಶಿಸಿ ಮಾತನಾಡುವ ವೇಳೆ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನು ಬಹುತೇಕರು ಅಭಿವೃದ್ದಿ ಕಾರ್ಯಗಳನ್ನು ಮಾಡದೆ ನುಂಗಿ ಹಾಕುತ್ತಾರೆ. ಆದರೆ, ನಾನು ನಿಮ್ಮ ಮುಂದೆ ನಿಜ ಹೇಳುತ್ತಿದ್ದೇನೆ. ಅದರಲ್ಲಿನ ಸ್ವಲ್ಪ ಹಣವನ್ನು ನಾನು ಆದಿಲಾಬಾದ್​ನಲ್ಲಿ ಮನೆ ನಿರ್ಮಿಸಲು, ಮಗನ ಮದುವೆಗೆ ಬಳಸಿಕೊಂಡಿದ್ದೇನೆ.
ಉಳಿದ ಸಂಸದರು ತಾವು ಈ ರೀತಿ ಮಾಡಿದ್ದನ್ನು ಧೈರ್ಯವಾಗಿ ಹೇಳುತ್ತಾರ ಎಂದು ಮಾತನಾಡುವ ವೇಳೆ ಕಾರ್ಯಕರ್ತರನ್ನು ಪ್ರಶ್ನಿಸಿದ್ಧಾರೆ. ಬುಡಕಟ್ಟು ಸಮುದಾಯದ ಹೆಣ್ಣು ಮಕ್ಕಳನ್ನು ಫಾಲೋ ಮಾಡುವ ಮುಸ್ಲಿಂ ಯುವಕರ ತಲೆ ಕಡಿಯಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಈ ಹಿಂದೆ ಸುದ್ದಿಯಾಗಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 6 =
Remember me
