ಲಖನೌ:ಆರೋಗ್ಯ ಶಿಬಿರವೊಂದಕ್ಕೆ ನೆರೆದಿದ್ದ ಜನರು ಬಿಜೆಪಿ ಸಂಸದ ಸಂಗಂ ಲಾಲ್​ ಗುಪ್ತ ಅವರನ್ನು ಥಳಿಸಿ, ಪಕ್ಷದ ಇತರ ಕಾರ್ಯಕರ್ತರನ್ನು ತಳ್ಳಾಡಿರುವ ಘಟನೆ ಉತ್ತರಪ್ರದೇಶದ ಪ್ರತಾಪಗಡದಲ್ಲಿ ಶನಿವಾರ ನಡೆದಿದೆ. ಥಳಿತಕ್ಕೊಳಗಾಗಿ ತಮ್ಮ ಕಾರಿನಲ್ಲಿ ಸ್ಥಳದಿಂದ ತೆರಳುತ್ತಿದ್ದ ಸಂಸದರ ವಾಹನದ ಮೇಲೆ ಹಲವು ಜನರು ಕಲ್ಲು ತೂರಿದ್ದಾರೆ ಎನ್ನಲಾಗಿದೆ.
ಈ ಘಟನೆಗೆ ಹಿರಿಯ ಕಾಂಗ್ರೆಸ್​ ನಾಯಕ ಪ್ರಮೋದ್​ ತಿವಾರಿ ಮತ್ತು ಅವರ ಮಗಳು ಶಾಸಕಿ ಆರಾಧನಾ ಮಿಶ್ರ ಅವರೇ ಚಿತಾವಣೆ ನೀಡಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದು, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಧರಣಿ ನಡೆಸಿದರು. ಸಂಜೆಯ ವೇಳೆಗೆ ಲಾಲ್​ಗಂಜ್​ ಪೊಲೀಸರು ಮಾಜಿ ಸಂಸದ ತಿವಾರಿ, ಶಾಸಕಿ ಮಿಶ್ರ ಮತ್ತು ಇನ್ನೂ 25 ಜನರ ವಿರುದ್ಧ ಕೊಲೆ ಯತ್ನ ಮತ್ತು ಇತರ ಆರೋಪಗಳೊಂದಿಗೆ ಎಫ್​ಐಆರ್​ ದಾಖಲಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಕುಪ್ಪೂರು ಸಂಸ್ಥಾನಕ್ಕೆ ಉತ್ತರಾಧಿಕಾರಿಯಾಗಿ ಬಾಲಕ ತೇಜಸ್: ಕಣ್ಣೀರಲ್ಲಿ ಅಪ್ಪ-ಅಮ್ಮ
ಸರ್ಕಾರಿ ಕಾರ್ಯಕ್ರಮದಲ್ಲಿ ವ್ಯವಸ್ಥೆಗಳು ಸರಿಯಾಗಿಲ್ಲದ್ದರಿಂದ ಸಿಟ್ಟಿಗೆದ್ದು ಜನರೇ ಬಿಜೆಪಿ ಸಂಸದರ ವಿರುದ್ಧ ಘೋಷಣೆ ಕೂಗಿ ಓಡಿಸಿದ್ದಾರೆ ಎಂದು ಕಾಂಗ್ರೆಸ್​ ನಾಯಕರು ಹೇಳಿದ್ದಾರೆ. ಮತ್ತೊಂದೆಡೆ, ರಾಜ್ಯದ ಡೆಪ್ಯುಟಿ ಸಿಎಂ ಕೇಶವಪ್ರಸಾದ್​ ಮೌರ್ಯ ಅವರು, ಒಬ್ಬರು ತಪ್ಪಿತಸ್ಥರನ್ನೂ ನಾವು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.(ಏಜೆನ್ಸೀಸ್)
ಕರೊನಾ ವಿರುದ್ಧದ ಹೋರಾಟದಲ್ಲಿ ಟೀಂ ಇಂಡಿಯ ದಾಖಲೆಗಳನ್ನು ಸೃಷ್ಟಿಸುತ್ತಿದೆ: ಪ್ರಧಾನಿ ಮೋದಿ

ಅಫ್ಘನ್​ ಮಹಿಳೆಯರು ಹಿಜಾಬ್​ ತೊಡುವುದಿಲ್ಲ! ತಾಲಿಬಾನ್​​ ಕಟ್ಟಾವಾದಕ್ಕೆ ಟ್ರೆಂಡಿಂಗ್ ಉತ್ತರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
