ನವದೆಹಲಿ:ಜಾಗತಿಕವಾಗಿ ಸಾವಿರಾರು ಮಂದಿಯನ್ನು ಬಲಿಪಡೆದುಕೊಂಡಿರುವ ಮಾರಕ ಕರೊನಾ ವೈರಸ್​ ಭಾರತದ ಮೇಲೂ ವಕ್ರದೃಷ್ಟಿ ಬೀರಿದೆ. 50 ಮಂದಿಗೆ ಸೋಂಕು ತಗುಲಿರುವುದು ಅಧಿಕೃತವಾಗಿರುವ ಬೆನ್ನಲ್ಲೇ ಇನ್ನಷ್ಟು ಸೋಂಕು ಹರಡದಿರಲು ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಹೀಗಿರುವಾಗ ಪಶ್ಚಿಮ ಬಂಗಾಳದ ಬಿಜೆಪಿ ಸಂಸದರೊಬ್ಬರು ಸಲಹೆಯೊಂದನ್ನು ನೀಡಿದ್ದಾರೆ.
ಸಂಸದ ದಿಲೀಪ್​ ಘೋಷ್ ಮಾಧ್ಯಮಗಳೊಂದಿಗೆ ಮಾತನಾಡಿ, ಯಾರು ಪ್ರಕೃತಿಯಿಂದ ದೂರ ಉಳಿದಿದ್ದಾರೋ ಅಂಥವರ ಮೇಲೆ ಕರೊನಾ ದಾಳಿ ಮಾಡುತ್ತದೆ. ಯಾರು ಪ್ರಕೃತಿ ಜತೆಗೆ ನಿರಂತರ ಸಂಪರ್ಕ ಹೊಂದಿರುತ್ತಾರೋ ಅವರಿಗೆ ಕರೊನಾ ಏನು ಮಾಡುವುದಿಲ್ಲ ಎಂದಿದ್ದರೆ.
ಮುಂದುವರಿದು ಮಾತನಾಡಿ, ಕರೊನಾದಿಂದ ತಪ್ಪಿಸಿಕೊಳ್ಳಲು ನಿಮ್ಮ ಬಟ್ಟೆಗಳನ್ನು ಸುಮಾರು 2 ಗಂಟೆಗಳ ಕಾಲ ಬಿಸಿಲಿನಲ್ಲಿ ಒಣಗಿಸಿ, ಸೂರ್ಯನ ತಾಪ ಕರೊನಾ ವೈರಸ್​ ಅನ್ನು ಕೊಲ್ಲಲಿದೆ ಎಂದು ಹೇಳಿದ್ದಾರೆ.​ಮಿಯಾಂದ್​ಪುರ ಕ್ಷೇತ್ರದ ಸಂಸದರಾಗಿರುವ ದಿಲೀಪ್​ ಘೋಷ್​ ಇತ್ತೀಚೆಗಷ್ಟೇ ಗೋವಿನ ಹಾಲಿನಿಂದ ಚಿನ್ನವನ್ನು ತೆಗೆಯಬಹುದು ಎಂದು ಹೇಳಿಕೆ ನೀಡಿದ್ದರು. ಇದರಿಂದ ಸಾಮಾಜಿಕ ಜಾಲತಾಣದಲ್ಲಿ ಘೋಷ್​ ವಿರುದ್ಧ ಭಾರಿ ಟೀಕೆ ವ್ಯಕ್ತವಾಗಿತ್ತು. ಬಳಿಕ ಘೋಷ ಇದಕ್ಕೆ ಸ್ಪಷ್ಟನೆಯನ್ನು ನೀಡಿದ್ದರು.
ಭಾರತದಲ್ಲಿ ಕೇರಳ, ದೆಹಲಿ, ಜೈಪುರ, ಆಗ್ರಾ, ನೋಯ್ಡಾ, ಜಮ್ಮು, ಪುಣೆ, ಪಂಜಾಬ್​, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕರೊನಾ ಶಂಕಿತರ ಪ್ರಕರಣ ವರದಿಯಾಗಿದೆ.(ಏಜೆನ್ಸೀಸ್​)
ಕರೊನಾ ವೈರಸ್​ನಿಂದಾಗಿ ಕಾಲೇಜುಗಳಿಗೂ ರಜೆ!: ಕರೊನಾ ವೈರಸ್​ ತಡೆಯಲು ಲಡಾಕ್​ ಸರ್ಕಾರದ ಕ್ರಮ

ಅವರಿಗೆಲ್ಲ ರಜೆ ಕೊಟ್ಟು ಮನೆಯಲ್ಲೇ ಕೂರಿಸಿ: ಕರೊನೊ ತಡೆಗೆ ಖಾಸಗಿ ಸಂಸ್ಥೆಗಳಿಗೆ ಸಲಹೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + six =
Remember me
