ನವದೆಹಲಿ:ನೂರಾರು ಜನರು ನೆರೆದಿದ್ದ ಸಮಯದಲ್ಲಿ ಕ್ಯಾಮರಾ ಮುಂದೆಯೇ ಒಂದು ಸಮುದಾಯವನ್ನು ಸಂಪೂಣರ್ವಾಗಿ ನಿಷೇಧಿಸಬೇಕು ಎಂಬ ಹೇಳಿಕೆಯನ್ನು ದೆಹಲಿಯ ಬಿಜೆಪಿ ಶಾಸಕ ಪರ್ವೇಶ್ ಸಾಹಿಬ್​ ಸಿಂಗ್​ ವರ್ಮಾ ನೀಡಿದ್ದಾರೆ.
‘ಅವರ ತಲೆಯನ್ನು ಹೇಗೆ ಸರಿ ಮಾಡಬೇಕು’ ಎನ್ನುವ ಬಗ್ಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಶಾಸಕರು ಮಾತನಾಡಿದ್ದಾರೆ.ಅಲ್ಲೇ ಪ್ರತಿಜ್ಞೆಯನ್ನೂ ಮಾಡಿಸಿದ್ದಾರೆ. ಮಳೆಯ ನಡುವೆಯೂ ಕಾರ್ಯಕರ್ತರು ಅವರ ಭಾಷಣ ಕೇಳಿದ್ದಾರೆ.
‘ಅವರ ತರಕಾರಿ, ಮೀನು-ಮಾಂಸಗಳ ಅಂಗಡಿಗಳು ತಲೆ ಎತ್ತುತ್ತಲೇ ಇರುತ್ತವೆ. ಆದರೆ ನಾವು ಅವರಿಂದ ಏನನ್ನೂ ಖರೀದಿಸಬೇಕಿಲ್ಲ. ಅಂಗಡಿಗೆ ಪರವಾನಗಿ ಇಲ್ಲದೇ ಹೋದಲ್ಲಿ ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಬೇಕು. ಇದಕ್ಕೆ ಸಹಮತ ಇದ್ದರೆ ಕೈ ಎತ್ತಿ’ ಎಂದು ಹೇಳಿದ್ದಾರೆ. ಇದಕ್ಕೆ ಬೆಂಬಲ ಸೂಚಿಸುತ್ತಾ ಕಾರ್ಯಕರ್ತರು ಕೈ ಎತ್ತಿದ್ದಾರೆ.
ವರ್ಮಾರ ಭಾಷಣಕ್ಕೆ ಪರ-ವಿರೋಧ ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿವೆ. ಹೈದರಾಬಾದ್ ಶಾಸಕ ಅಸದುದ್ದೀನ್ ಓವೈಸಿ, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ ಮುಂತಾದವರು ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − 1 =
Remember me
