ಕೋಲ್ಕತ್ತಾ:ಸಂಸದ ಹಾಗೂ ಪಶ್ಚಿಮ ಬಂಗಾಳದ ಉತ್ತರ ಮಾಲ್ಡಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಖಗೇನ್ ಮುರ್ಮು ಪ್ರಚಾರದ ವೇಳೆ ಮಹಿಳೆಯ ಕೆನ್ನೆಗೆ ಮುತ್ತಿಟ್ಟಿದ್ದು, ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದನ್ನು ಅವರು ಸಮರ್ಥಿಸಿಕೊಂಡಿದ್ದರೂ, ವಿವಾದಕ್ಕೆ ಸಿಲುಕಿದ್ದಾರೆ.
ಇದನ್ನೂ ಓದಿ:ಬಿಜೆಪಿಯ 10ನೇ ಅಭ್ಯರ್ಥಿ ಪಟ್ಟಿ ಬಿಡುಗಡೆ: ಮಾಜಿ ಪ್ರಧಾನಿ ಚಂದ್ರಶೇಖರ್ ಪುತ್ರ ಬಲ್ಲಿಯಾದಿಂದ ಸ್ಪರ್ಧೆ..
ಖಗೇನ್ ಮುರ್ಮು ಪ್ರಚಾರದ ಸಲುವಾಗಿ ಕ್ಷೇತ್ರದ ಚಂಚಲ್‌ನ ಶ್ರೀಹಿಪುರ ಗ್ರಾಮಕ್ಕೆ ಬಂದಿದ್ದು, ಈ ಘಟನೆ ನಡೆದಿದೆ.
ಘಟನೆಯ ಕುರಿತು ತೃಣಮೂಲ ಕಾಂಗ್ರೆಸ್ ಪ್ರತಿಕ್ರಿಯಿಸಿದ್ದು, ಬಿಜೆಪಿಯನ್ನು ಖಂಡಿಸಿದೆ. ಪಕ್ಷದ “ಮಹಿಳಾ ವಿರೋಧಿ” ನಿಲುವನ್ನು ಈ ಕೃತ್ಯ ಸೂಚಿಸುತ್ತದೆ ಎಂದು ಟಿಎಂಸಿ ಮಾಲ್ಡಾ ಜಿಲ್ಲಾ ಉಪಾಧ್ಯಕ್ಷ ದುಲಾಲ್ ಸರ್ಕಾರ್ X (ಎಕ್ಸ್​) ನಲ್ಲಿ ಪೋಸ್ಟ್​ ಹಾಕಿ ಟೀಕಿಸಿದ್ದಾರೆ.
ಬಳಿಕ ತೃಣಮೂಲ ಕಾಂಗ್ರೆಸ್ ರಾಜ್ಯ ಘಟಕ ಈ ವಿಷಯದ ಮೇಲೆ ಸ್ಪಂದಿಸಿದ್ದು, “ನೀವು ಈಗ ನೋಡಿದ್ದನ್ನು ನೀವು ನಂಬಲಾಗದಿದ್ದರೆ, ನಾವು ಸ್ಪಷ್ಟಪಡಿಸುತ್ತೇವೆ. ಹೌದು, ಇದು ಬಿಜೆಪಿ ಸಂಸದ ಮತ್ತು ಮಲ್ದಹಾ ಉತ್ತರ ಅಭ್ಯರ್ಥಿ @khagen_murmu ತನ್ನ ಸ್ವಂತ ಇಚ್ಛೆಯಿಂದ ಮಹಿಳೆಯನ್ನು ಚುಂಬಿಸುತ್ತಿದ್ದಾರೆ. ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡುವ ಸಂಸದರಿಂದ ಹಿಡಿದು ಬಂಗಾಳಿ ಮಹಿಳೆಯರ ಬಗ್ಗೆ ಅಶ್ಲೀಲ ಹಾಡುಗಳನ್ನು ಹಾಡುವ ನಾಯಕರವರೆಗೆ, ಬಿಜೆಪಿ ಪಾಳಯದಲ್ಲಿ ಮಹಿಳಾ ವಿರೋಧಿ ರಾಜಕಾರಣಿಗಳೇ ತುಂಬಿಹೋಗಿದ್ದಾರೆ. ಮೋದಿ ಕಾ ಪರಿವಾರ್ ನಾರಿ ಕಾ ಸಮ್ಮಾನ್‌ನಲ್ಲಿ ತೊಡಗಿಸಿಕೊಂಡಿರುವುದು ಹೀಗೆ? ಅವರು ಏನು ಮಾಡುತ್ತಾರೆಂದು ಊಹಿಸಿ..ಇನ್ನು ಅವರು ಅಧಿಕಾರಕ್ಕೆ ಬಂದರೆ ನಿಮ್ಮನ್ನು ಯಾರು ಕಾಪಾಡುತ್ತಾರೆ” ಎಂದು ಜನರನ್ನು ಎಚ್ಚರಿಸಿದೆ.
ಖಗೇನ್ ಮುರ್ಮು ಇದನ್ನು ಸಮರ್ಥಿಸಿಕೊಂಡಿದ್ದು, ಆ ಮಹಿಳೆ “ತನ್ನ ಮಗು” ಇದ್ದಂತೆ ಎಂದು ಪ್ರತಿಪಾದಿಸಿದ್ದಾರೆ. ರಾಜಕೀಯ ವಿರೋಧಿಗಳು ತಮ್ಮ ವಿರುದ್ಧ ಕಟ್ಟುಕಥೆ ರೂಪಿಸಿದ್ದಾರೆ ಎಂದು ಅವರು ಟೀಕೆಗಳನ್ನು ತಳ್ಳಿಹಾಕಿದರು.
ವಿವಾದದಲ್ಲಿ ಸಿಲುಕಿರುವ ಮಹಿಳೆ ಕೂಡ ಮುರ್ಮು ಅವರನ್ನು ಬೆಂಬಲಿಸಲು ಮುಂದಾದರು, ಅವರ ಪ್ರೀತಿಯ ಭಾವವನ್ನು ತಂದೆ-ಮಗಳ ಸಂಬಂಧಕ್ಕೆ ಹೋಲಿಸಿದರು.
ಪುಷ್ಪ 2 ನಲ್ಲಿ ಅಲ್ಲು ಅರ್ಜುನ್ ಕಟ್ಟಿದ್ದ ಸೀರೆಗಿದೆ ಭಾವನಾತ್ಮಕ ಸಂಬಂಧ..ಇದರ ವಿಶೇಷತೆಯಾದರೂ ಏನು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + thirteen =
Remember me
