ನವದೆಹಲಿ:ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವನ್ನು ಆತ್ಮಹತ್ಯೆ ಎಂದು ಪೊಲೀಸರು ಈಗಾಗಲೇ ಹೇಳಿದ್ದಾರೆ. ಇದಕ್ಕೆ ಪೂರಕವಾಗಿ ಮರಣೋತ್ತರ ವರದಿ ಕೂಡ ಬಂದಿದೆ. ಹೀಗಿದ್ದರೂ ಇದರಲ್ಲೇನೋ ಷಡ್ಯಂತ್ರ ಅಡಗಿದೆ ಎಂಬ ಅನುಮಾನ ಹಲವರಲ್ಲಿದೆ.ಸುಶಾಂತ್​ ಸಿಂಗ್​ ಚಿಕ್ಕಪ್ಪ ಹಾಗೂ ಹಲವು ರಾಜಕಾರಣಿಗಳು, ಗಣ್ಯರು, ಸೆಲೆಬ್ರಿಟಿಗಳು ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಯಬೇಕೆಂದು ಆಗ್ರಹಿಸಿದ್ದಾರೆ. ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆದಿದ್ದಾರೆ.
ಇದೆಲ್ಲದರ ನಡುವೆ, ಸಾಕ್ಷ್ಯಾಧಾರಗಳು ನಾಶವಾದ ಬಳಿಕ ಸುಶಾಂತ್​ ಸಾವಿನ ತನಿಖೆ ನಡೆಸಲಾಗುತ್ತದೆಯೇ ಎಂದು ಬಿಜೆಪಿ ಸಂಸದೆ ರೂಪಾ ಗಂಗೂಲಿ ಪ್ರಶ್ನಿಸಿದ್ದಾರೆ. ಅವರ ಈ ಅನುಮಾನಕ್ಕೂ ಕಾರಣವೂ ಇಲ್ಲದಿಲ್ಲ.
ಇದನ್ನೂ ಓದಿ;ನಟ ಸುಶಾಂತ್​ ಸಿಂಗ್​ ರಜಪೂತ್​ ಹಾದಿ ತುಳಿದ 16 ವರ್ಷದ ಟಿಕ್​ಟಾಕ್​ ನಟಿಯ ದುರಂತ ಅಂತ್ಯ..!
ಸುಶಾಂತ್​ ಫೋನ್​ನ್ನು ಬೇರೆ ಯಾರಾದರೂ ಬಳಸುತ್ತಿದ್ದಾರಾ? ಎಂದು ರೂಪಾ ಗಂಗೂಲಿ ಕೇಳಿದ್ದಾರೆ. ಏಕೆಂದರೆ, ಕೆಲ ದಿನಗಳಿಂದ ಸುಶಾಂತ್​ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಆತ ಫಾಲೋ ಮಾಡುತ್ತಿದ್ದವರನ್ನು ಅನ್​ಫಾಲೋ ಮಾಡಲಾಗುತ್ತಿದೆ. ಇದು ಹೇಗೆ ಸಾಧ್ಯ? ಆತನ ಖಾತೆಯನ್ನು ಬೇರಾರೋ ನಿರ್ವಹಿಸುತ್ತಿರುವುದರ ಬಗ್ಗೆ ಸುದ್ದಿ ಕೇಳಿದ್ದೆ. ಇದರಿಂದ ಶಾಕ್​ ಆಗಿತ್ತು. ಈಗ ಆತನ ಖಾತೆಯನ್ನು ಇನ್ನೊಬ್ಬರು ನಿರ್ವಹಿಸುತ್ತಿರುವುದು ನನ್ನ ಗಮನಕ್ಕೂ ಬಂದಿದೆ. ಇದು ಸಾಕ್ಷ್ಯಾಧಾರಗಳ ನಾಶವಲ್ಲದೆ ಬೇರೇನು ಎಂದು ಕೇಳಿದ್ದಾರೆ.
ಸುಶಾಂತ್​ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಈ ಹಿಂದೆಯೇ ರೂಪಾ ಗಂಗೂಲಿ ಒತ್ತಾಯಿಸಿದ್ದರು. ಆದರೆ, ಸಿಬಿಐನವರು ಎಲ್ಲ ಸಾಕ್ಷ್ಯಗಳು ನಾಶವಾದ ಬಳಿಕ ಪ್ರಕರಣದ ತನಿಖೆ ನಡೆಸುತ್ತಾರಾ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ;ಮದುವೆಗೆ ಸಜ್ಜಾಗುತ್ತಿದ್ದ ಸುಶಾಂತ್​ ಸಿಂಗ್​; ಹೊಸ ಮನೆ ಹುಡುಕಾಟದಲ್ಲಿದ್ದ ಗೆಳತಿ; ನಿಗೂಢವಾಗುತ್ತಿದೆ ಆತ್ಮಹತ್ಯೆ ಕಾರಣ
ಆತನ ಇನ್​ಸ್ಟಾಗ್ರಾಂ ಅಕೌಂಟ್​ನ ಫಾಲೋವರ್​ಗಳ ಸಂಖ್ಯೆ ದಿನೇದಿನೇ ಕಡಿಮೆಯಾಗುತ್ತಿರುವ ಸ್ಕ್ರೀನ್​ಶಾಟ್​ಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದು ಮತ್ತಷ್ಟು ಅನುಮಾನಗಳಿಗೆ ಪುಷ್ಠಿ ನೀಡಿದೆ.
ಇಲ್ಲಿದೆ ರೂಪಾ ಗಂಗೂಲಿ ಹೇಳಿಕೆಯ ಲಿಂಕ್​….https://www.facebook.com/VVani4U/videos/1647508055425580/
ನಟ ಸುಶಾಂತ್​ ಸಿಂಗ್​ ರಜಪೂತ್​ ತಿಂಗಳಿಗೆಷ್ಟು ಖರ್ಚು ಮಾಡುತ್ತಿದ್ದರು? ಹಳೇ ಮ್ಯಾನೇಜರ್​ ನೀಡಿದ್ದಾರೆ ಪೊಲೀಸರಿಗೆ ಮಾಹಿತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 6 =
Remember me
