ಜೈಪುರ:ಕೀಳು ರಾಜಕೀಯ ಮಾಡುತ್ತಿರುವ ಬಿಜೆಪಿ, ರಾಜಸ್ಥಾನ ಸರ್ಕಾರವನ್ನು ಕೆಳಗಿಳಿಸಲು ಕಾಂಗ್ರೆಸ್​ ಶಾಸಕರನ್ನು ಖರೀದಿಸುತ್ತಿದೆ ಎಂದು ಸಿಎಂ ಅಶೋಕ್​ ಗೆಹ್ಲೋಟ್​ ಆರೋಪಿಸಿದ್ದಾರೆ.
ಪಕ್ಷ ನಿಷ್ಠೆ ಬದಲಿಸಲು ಕಾಂಗ್ರೆಸ್​ ಶಾಸಕರಿಗೆ 15 ಕೋಟಿ ರೂ. ನಗದು ಹಾಗೂ ವಿವಿಧ ಆಮಿಷವೊಡ್ಡುತ್ತಿದೆ ಎಂದು ಗೆಹ್ಲೋಟ್​ ನೇರವಾಗಿ ಆರೋಪ ಮಾಡಿದ್ದಾರೆ. ಸರ್ಕಾರ ಕೋವಿಡ್​ ನಿಯಂತ್ರಣಕ್ಕೆ ಎಲ್ಲ ಪ್ರಯ್ನಗಳನ್ನು ಮಾಡುತ್ತಿದ್ದರೆ, ಬಿಜೆಪಿ ತೊಂದರೆಗಳನ್ನು ಉಮಟು ಮಾಡುವಲ್ಲಿ ತೊಡಗಿದೆ ಎಂದು ಗೆಹ್ಲೋಟ್​ ಟೀಕಿಸಿದ್ದಾರೆ.
ಇದನ್ನೂ ಓದಿ;ಮಸೀದಿಯಾಗಿ ಮಾರ್ಪಡುತ್ತಿದೆ 6ನೇ ಶತಮಾನದ ವಿಶ್ವ ಪ್ರಸಿದ್ಧ ವಸ್ತು ಸಂಗ್ರಹಾಲಯ…!
ಕಾಂಗ್ರೆಸ್​ ಎಲ್ಲರನ್ನೂ ತನ್ನೊಂದಿಗೆ ಕೊಂಡೊಯ್ಯಲು ನೋಡುತ್ತಿದ್ದರೆ, ಬಿಜೆಪಿ ತನ್ನೆಲ್ಲ ಮಿತಿಗಳನ್ನು ದಾಟುತ್ತಿದೆ. ಶಾಸಕರನ್ನು ಬಲೆಗೆ ಬೀಳಿಸಿಕೊಳ್ಳುವ ಮೂಲಕ ಕರ್ನಾಟಕ ಹಾಗೂ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್​ ನೇತೃತ್ವದ ಸರ್ಕಾರವನ್ನು ಬಿಜೆಪಿ ಕೆಳಗಿಳಿಸಿದೆ. ಗುಜರಾತ್​​ನಲ್ಲಿ ರಾಜ್ಯಸಭಾ ಚುನಾವಣೆಯಲ್ಲಿ ಜಯಗಳಿಸಲು ಕಾಂಗ್ರೆಸ್​ ಶಾಸಕರನ್ನು ಖರೀದಿಸಿದೆ ಎಂದು ಗೆಹ್ಲೋಟ್​ ಆರೋಪಿಸಿದ್ದಾರೆ.
ಬಿಜೆಪಿಯ ಹಿರಿಯ ನಾಯಕರು ಕಾಂಗ್ರೆಸ್​ ಶಾಸಕರನ್ನು ಸಂಪರ್ಕಿಸುತ್ತಿದ್ದಾರೆ. ವಿವಿಧ ಆಮಿಷಗಳನ್ನು ಒಡ್ಡಿ ಅವರ ದಾರಿ ತಪ್ಪಿಸುತ್ತಿದ್ದಾರೆ. ಆದರೆ, ಅವರ ಯತ್ನ ಯಶಸ್ವಿಯಾಗಲು ಕಾಂಗ್ರೆಸ್​ ಬಿಡುವುದಿಲ್ಲ ಎಂದು ಶಾಸಕರು ಹೊರಡಿಸಿರುವ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಕಳೆದ ತಿಂಗಳು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯ ಕುದುರೆ ವ್ಯಾಪಾರ ಕೈಗೂಡಿಲ್ಲ. ಕಾಂಗ್ರೆಸ್​ ಶಾಸಕರು, ಪಕ್ಷೇತರರು ಹಾಗೂ ಉಳಿದ ಪಕ್ಷಗಳ ಶಾಸಕರು ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಐದು ವರ್ಷಗಳ ಅವಧಿ ಪೂರ್ಣಗೊಳಿಸುತ್ತೇವೆ ಎಂದು ಶಾಸಕರು ಹೇಳಿದ್ದಾರೆ.
ಇದನ್ನೂ ಓದಿ;ಸೋಮವಾರದಿಂದ ದೇಶದ 12 ಕಡೆಗಳಲ್ಲಿ ಕೋವಿಡ್​ ರೋಗಿಗಳಿಗೆ ದೇಶೀಯ ಕರೊನಾ ಲಸಿಕೆ ಪ್ರಯೋಗ
ಶಾಸಕರಾದ ಲಖನ್​ ಸಿಂಗ್​ ಮೀನಾ, ಜೋಗಿಂದರ್​ ಸಿಂಗ್​, ಮುಖೇಶ್​ ಭಾಖರ್​, ವೇದಪ್ರಕಾಶ್​ ಸೋಲಂಕಿ, ಹರೀಶ್​ ಮೀನಾ, ಅಶೋಕ್​ ಭೈರ್ವಾ, ಶಕುಂತಲಾ ರಾವತ್​ ಮೊದಲಾದವರು ಜಂಟಿ ಹೇಳಿಕೆಗೆ ಸಹಿ ಹಾಕಿದ್ದಾರೆ.
ರಾಜಸ್ಥಾನದ 200 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್​ 107 ಶಾಸಕರನ್ನು ಹೊಂದಿದೆ. ಇದರೊಂದಿಗೆ 12 ಪಕ್ಷೇತರರ ಬೆಂಬಲವನ್ನು ಪಡೆದಿದೆ. ಇದಲ್ಲದೇ, ಬಬೇರೆ ಪಕ್ಷಗಳ ಐವರು ಸರ್ಕಾರದ ಬೆಂಬಲಿಸಿದ್ದಾರೆ.
ಒಂದು ಕಾರು ಕೊಂಡರೆ ಮತ್ತೊಂದು ಫ್ರೀ…, ಲಾರಿ ಖರೀದಿಗೆ 13 ಸಾವಿರ ರೂ. ಡೌನ್​ಪೇಮೆಂಟ್​…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − three =
Remember me
