ಜೈಪುರ: ಸರ್ಕಾರ ಪತನಕ್ಕೆ ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಸಿಎಂ ಅಶೋಕ್ ಗೆಹ್ಲೋಟ್ ಮಾತಿನಲ್ಲಿ ಹುರುಳಿಲ್ಲ. ಆಡಳಿತಾರೂಢ ಕಾಂಗ್ರೆಸ್ ಪಕ್ಷದೊಳಗೆ ಬಣ ಜಗಳ ತಾರಕಕ್ಕೇರಿದೆ. ಅದನ್ನು ನಿಯಂತ್ರಿಸುವುದಕ್ಕಾಗಿ ಸಿಎಂ ಗೆಹ್ಲೋಟ್​ ಶಾಸಕರು ಮತ್ತು ರಾಜಕೀಯ ಪಕ್ಷಗಳ ವಿರುದ್ಧ ಪೊಲೀಸ್ ಇಲಾಖೆಯ ಸ್ಪೆಷಲ್ ಆಪರೇಷನ್ಸ್​ ಗ್ರೂಪ್​ ಅನ್ನು ಛೂ ಬಿಡುತ್ತಿದ್ದಾರೆ. ಕೇಸ್​ಗಳನ್ನು ದಾಖಲಿಸುತ್ತಿದ್ದಾರೆ.
ಪತ್ರಿಕಾಗೋಷ್ಠಿಯಲ್ಲೂ ಸಿಎಂ ಗೆಹ್ಲೋಟ್ ಲಾಜಿಕಲ್ ಆಗಿ ಮಾತನಾಡಿಲ್ಲ, ಮಾತನಾಡುತ್ತಿಲ್ಲ. ಆಡಳಿತಾರೂಢ ಕಾಂಗ್ರೆಸ್ ಪಕ್ಷದೊಳಗಿನ ಬಣಜಗಳ ನಡೆಯುತ್ತಿದ್ದರೂ. ಸಿಎಂ ಗೆಹ್ಲೋಟ್ ಮಾತ್ರ ಬಿಜೆಪಿ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ದೇಶಾದ್ಯಂತ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಈ ಹಂತದಲ್ಲಿ ಪಕ್ಷದ ಹಿರಿಯ ನಾಯಕರಾದ ಅವರ ನೋವು ಸಮರ್ಥನೀಯವೇ ಆಗಿದೆ ಎಂದು ಬಿಜೆಪಿಯ ರಾಜ್ಯ ಅಧ್ಯಕ್ಷ ಸತೀಶ್ ಪೂರ್ನಿಯಾ ಹೇಳಿದ್ದಾರೆ.
ಇದನ್ನೂ ಓದಿ:ಬೆಂಗಳೂರು ಒಂದು ವಾರ ಲಾಕ್‌ಡೌನ್ ಖಚಿತ; ಮಂಗಳವಾರದಿಂದ ಜಾರಿ
ನನ್ನ ಸರ್ಕಾರವನ್ನು ಪತನಗೊಳಿಸುವ ಕೇಂದ್ರದ ಪ್ರಯತ್ನದಲ್ಲಿ ಪೂರ್ನಿಯಾ, ಗುಲಾಬ್ ಚಾಂದ್ ಕಠಾರಿಯಾ ಮತ್ತು ರಾಜೇಂದ್ರ ರಾಥೋಡ್​ ಅವರು ತೊಡಗಿದ್ದಾರೆ ಎಂದು ಸಿಎಂ ಗೆಹ್ಲೋಟ್ ಆರೋಪ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಪೂರ್ನಿಯಾ ಈ ಹೇಳಿಕೆ ನೀಡಿದ್ದಾರೆ.
ತನ್ನ ಶಾಸಕರ ಮೇಲೆ ನಂಬಿಕೆ ಇಲ್ಲದ ಕಾರಣ ಸಿಎಂ ಗೆಹ್ಲೋಟ್ ಅವರನ್ನು ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ಬಹುದಿನಗಳ ಕಾಲ ರೆಸಾರ್ಟ್​ನಲ್ಲಿ ಇರಿಸಿದ್ದರು. ಗೆಹ್ಲೋಟ್ ಅವರು ಬಕ್ರಾ-ಮಂಡಿಯ ಪ್ರಸ್ತಾಪ ಮಾಡಿದ್ದರು. ರಾಜ್ಯ ರಾಜಕಾರಣವನ್ನು ಬಕ್ರಾ ಮಂಡಿಗೆ ಹೋಲಿಸುವುದಕ್ಕೆ ಹೇಗೆ ಸಾಧ್ಯವಾಯಿತು? ಇದಕ್ಕೆ ಅವರು ಪ್ರತಿಕ್ರಿಯಿಸಬೇಕು ಎಂದು ಕಠಾರಿಯಾ ಆಗ್ರಹಿಸಿದ್ದಾರೆ. (ಏಜೆನ್ಸೀಸ್)
ರಾಜಸ್ಥಾನದಲ್ಲಿ ಪ್ಯಾನಿಕ್ ಆಗಿದೆ ಕಾಂಗ್ರೆಸ್​: ಪತನ ಭೀತಿಯ ಅಲರಾಂ ಮೊಳಗಿಸಿದ್ದಾರೆ ನಾಯಕರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + eighteen =
Remember me
