ಚೆನ್ನೈ:ಮತಗಟ್ಟೆ ಒಳಗೆ ಅತಿಕ್ರಮ ಪ್ರವೇಶ ಮಾಡಿದ್ದಾರೆಂದು ಆರೋಪಿಸಿ, ಮಕ್ಕಳ್​ ನಿಧಿ ಮೈಯಂ (ಎಂಎನ್​ಎಂ) ಪಕ್ಷದ ಮುಖ್ಯಸ್ಥ ಕಮಲ್​ ಹಾಸನ್​ ಪುತ್ರಿ ಶ್ರುತಿ ಹಾಸನ್​ ವಿರುದ್ಧ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಮಂಗಳವಾರ ನಡೆದ ಮತದಾನದ ವೇಳೆ ಪರಿಶೀಲನೆಗೆಂದು ಕೊಯಮತ್ತೂರಿನ ದಕ್ಷಿಣ ವಿಭಾಗದ ಮತಗಟ್ಟೆಗೆ ಕಮಲ್​ ಹಾಸನ್ ಭೇಟಿ ನೀಡಿದ್ದರು. ಈ ವೇಳೆ ಶ್ರುತಿ ಹಾಸನ್​ ಸಹ ತಂದೆಯ ಜತೆಯಲ್ಲಿ ಮತಗಟ್ಟೆಗೆ ಬಂದಿದ್ದರು. ಹೀಗಾಗಿ ಅತಿಕ್ರಮ ಪ್ರವೇಶ ಎಂದು ಬಿಜೆಪಿ ದೂರು ದಾಖಲಿಸಿದೆ.
ಮಂಗಳವಾರ ನಡೆದ ಮತದಾನದ ವೇಳೆ ಚೆನ್ನೈನಲ್ಲಿ ಪುತ್ರಿಯರಾದ ಶ್ರುತಿ ಹಾಸನ್​ ಮತ್ತು ಅಕ್ಷರ ಹಾಸನ್​ ಜತೆಯಲ್ಲಿ ಮತ ಚಲಾಯಿಸಿದ ಕಮಲ್​ ಹಾಸನ್​, ಅಲ್ಲಿಂದ ನೇರವಾಗಿ ತಮ್ಮ ಕ್ಷೇತ್ರ ದಕ್ಷಿಣ ಕೊಯಮತ್ತೂರಿಗೆ ಭೇಟಿ ನೀಡಿದರು.
ಇದನ್ನೂ ಓದಿರಿ:3 ತಿಂಗಳು ಮನೆಯಲ್ಲಿ ಕೂತಿದ್ರೂ ಸಂಬಳ ಕೊಟ್ಟಿದ್ದಾರೆ, ಆ ನಿಯತ್ತು ಇದ್ದರೆ ನಾವು ಸೇವೆ ಮಾಡಬೇಕು: ಬಸ್ ಚಾಲಕ
ಮತಗಟ್ಟೆ ಪರಿಶೀಲಿಸಿದ ಕಮಲ್​ ಹಾಸನ್​, ತಮಿಳುನಾಡು ಚುನಾವಣೆಯನ್ನು ಗೆಲ್ಲಲು ಬಿಜೆಪಿ ಹಣದ ಹೊಳೆ ಹರಿಸುತ್ತಿದೆ. ಈ ಬಗ್ಗೆ ಗಮನ ಹರಿಸಬೇಕೆಂದು ಚುನಾವಣಾ ಆಯೋಗಕ್ಕೆ ದೂರಿದರು.
ಆದರೆ, ಬಿಜೆಪಿಯು ಕಮಲ್​ ಹಾಸನ್​ ಪುತ್ರಿ ಶ್ರುತಿ ಹಾಸನ್​ ವಿರುದ್ಧ ತಿರುಗಿಬಿದ್ದಿದೆ. ಮತಗಟ್ಟೆಗೆ ಅತಿಕ್ರಮ ಪ್ರವೇಶ ಮಾಡಿದ ಶ್ರುತಿ​ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಕಮಲ್​ ವಿರುದ್ಧ ಇದೇ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಬಿಜೆಪಿ ಅಭ್ಯರ್ಥಿ ಹಾಗೂ ರಾಷ್ಟ್ರೀಯ ಬಿಜೆಪಿ ಮಹಿಳಾ ವಿಭಾಗದ ನಾಯಕಿ ವಾನಥಿ ಶ್ರೀನಿವಾಸನ್​ ಪರವಾಗಿ ಕೊಯಮತ್ತೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷ ನಂದಕುಮಾರ್​ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಮತಗಟ್ಟೆ ಏಜೆಂಟ್​ ಬಿಟ್ಟು ಬೇರೆ ಯಾರು ಸಹ ಕೇಂದ್ರದ ಒಳಗೆ ಹೋಗಬಾರದು ಎಂಬ ನಿಯಮವಿದೆ. ಹೀಗಾಗಿ ಅತಿಕ್ರಮ ಪ್ರವೇಶ ಮಾಡಿದ ಶ್ರುತಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.(ಏಜೆನ್ಸೀಸ್​)
ಮನೆಯ ಫ್ರಿಡ್ಜ್​ನಲ್ಲಿತ್ತು ಮೃತದೇಹ: ನಿಗೂಢ ಕೇಸ್​ ಬೆನ್ನತ್ತಿ ಹೋದ ಪೊಲೀಸರಿಗೆ ಮಹಿಳೆಯ ಕರಾಳ ಮುಖ ಬಯಲು!

‘ಕರೊನಾ ಸೋಂಕು ನಿವಾರಣೆಯಾದವರ ಬೆನ್ನುಹತ್ತುವ ಮೆದುಳು ಸಂಬಂಧಿ ಖಾಯಿಲೆಗಳು’

ತಂಗಿಯ ಮೇಲೆ ಅಣ್ಣನಿಂದಲೇ ರೇಪ್: ನೋವು ಹೇಳಿಕೊಳ್ಳಲು ಅಜ್ಜಿ ಮನೆಗೆ ಹೋದವಳಿಗೆ ಮತ್ತೊಂದು ಶಾಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
