ಕೋಲ್ಕತ:ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಇನ್ನೂ ಕೆಲ ತಿಂಗಳುಗಳು ಬಾಕಿಯಿರುವಾಗಲೇ ಟಿಎಂಸಿ ಮತ್ತು ಬಿಜೆಪಿ ಪಕ್ಷಗಳು ಭರ್ಜರಿ ಪ್ರಚಾರ ಆರಂಭಿಸಿವೆ. ರಾಜ್ಯದಲ್ಲಿ 200 ಸೀಟು ಗೆದ್ದೇ ಗೆಲ್ಲುವುದಾಗಿ ಬಿಜೆಪಿ ಹೇಳಿದ್ದರೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಜೆಪಿಗೆ ಸವಾಲೊಂದನ್ನು ಎಸೆದಿದ್ದಾರೆ.
ಇದನ್ನೂ ಓದಿ:ಹೆಂಡತಿಯ ಕಾಟ ತಾಳಲಾರದೆ ಮಗನೊಂದಿಗೆ ಬಾವಿಗೆ ಹಾರಿದ ಪತಿ! ಮಲತಾಯಿ ಧೋರಣೆಗೆ ಬಾಲಕ ಬಲಿ
ಬಿಜೆಪಿ ನಮ್ಮ ಪಶ್ಚಿಮ ಬಂಗಾಳದ 294 ಸೀಟುಗಳ ಪೈಕಿ 200 ಸೀಟು ಗೆಲ್ಲುವುದಾಗಿ ಹೇಳಿಕೊಂಡಿದೆ. 200 ಸೀಟು ಬದಿಗಿರಲಿ ಮೊದಲು ಅವರು 30 ಸೀಟು ಗೆದ್ದು ತೋರಿಸಲಿ ಎಂದು ಅವರು ಹೇಳಿದ್ದಾರೆ. ಬಿಜೆಪಿ ಹೊರಗಿನ ಪಕ್ಷ. ಇದೀಗ ಅವರು ಹೊರಗಿನ ಪಕ್ಷಗಳನ್ನು ಕರೆದುಕೊಂಡು ನಮ್ಮ ರಾಜ್ಯ ಗೆಲ್ಲುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಇಲ್ಲಿನ ಜನ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ:ಒಂದೇ ತಿಂಗಳಲ್ಲಿ 49 ಲವ್​ ಜಿಹಾದಿಗಳು ಅರೆಸ್ಟ್​! ಬಾಯಿಬಿಡಲು ಹೆದರುತ್ತಿರುವ ಯುವತಿಯರು
ಹಲವು ರಾಜ್ಯಗಳಲ್ಲಿ ಬಿಜೆಪಿ ಆಡಳಿತದಲ್ಲಿದೆ. ಆದರೆ ಅಲ್ಲಿ ಏನು ಅಭಿವೃದ್ಧಿ ಆಗಿದೆ. ದೇಶದ ರೈತರು ಬೀದಿಯಲ್ಲಿ ನಿಂತು ಹೋರಾಟ ನಡೆಸುತ್ತಿದ್ದಾರೆ. ಬಿಜೆಪಿ ನಮ್ಮ ಟಿಎಂಸಿಯ ಶಾಸಕರನ್ನು ಕೊಂಡುಕೊಳ್ಳುವುದರಲ್ಲಿ ನಿರತವಾಗಿದೆ. ನಮ್ಮ ಶಾಸಕರನ್ನು ಅವರ ಬಳಿ ಸೆಳೆದುಕೊಂಡ ಮಾತ್ರಕ್ಕೆ ಗೆದ್ದರೆಂದು ಅವರು ಭಾವಿಸಿದ್ದಾರೆ. ಆದರೆ ನಮ್ಮ ಪಕ್ಷ ಇನ್ನೂ ಶಕ್ತಿಯುತವಾಗುತ್ತಲೇ ಇರುತ್ತದೆ ಎಂದು ಮಮತಾ ಬ್ಯಾನರ್ಜಿ ನುಡಿದಿದ್ದಾರೆ. ಮಂಗಳವಾರದಂದು ಬೋಲ್​ಪುರದಲ್ಲಿ ನಡೆದ ಪಕ್ಷದ ಪ್ರಚಾರ ಮೆರವಣಿಗೆಯಲ್ಲಿ ಭಾಗವಹಿಸಿದ ಅವರು ಈ ಮಾತನ್ನು ಹೇಳಿದ್ದಾರೆ. (ಏಜೆನ್ಸೀಸ್​)
ಸರ್ಪೈಸ್​ ನೀಡಲು ಮನೆಗೆ ಬಂದ ಗಂಡನಿಗೆ ಕಾದಿತ್ತು ಬಿಗ್​ ಶಾಕ್​! ಹೆಂಡತಿಯ ಇನ್ನೊಂದು ರೂಪ ನೋಡಿದ ಗಂಡ ಮಾಡಿದ್ದೇನು?

ಮಕ್ಕಳನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಂಡು ವಿಡಿಯೋ ಮಾರಾಟ- ಜಾಲದ ಹಿಂದೆ ಇಂಜಿನಿಯರ್​ ಪತ್ನಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + eleven =
Remember me
