ಅಗರ್ತಲ:ತ್ರಿಪುರಾದ ರಾಜಧಾನಿ ಅಗರ್ತಲ ನಗರಪಾಲಿಕೆ ಜತೆ ರಾಜ್ಯದ ಇತರ 13 ನಗರಪಾಲಿಕೆಗಳು ಮತ್ತು ನಗರ ಪಂಚಾಯತ್​ಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಭಾರೀ ವಿಜಯ ಸಾಧಿಸಿದೆ. ಕೇವಲ ಒಂದು ಸೀಟನ್ನು ಮಾತ್ರ ಗೆದ್ದಿರುವ ತೃಣಮೂಲ ಕಾಂಗ್ರೆಸ್​​ಗೆ ಭಾರೀ ನಿರಾಸೆ ಉಂಟಾಗಿದೆ.
ಇಂದು ರಾಜ್ಯದ 8 ಜಿಲ್ಲೆಗಳ 13 ಕೇಂದ್ರಗಳಲ್ಲಿ ಮತ ಎಣಿಕೆ ನಡೆದಿದ್ದು, ಚುನಾವಣೆ ನಡೆದ 222 ಸೀಟುಗಳಲ್ಲಿ 217 ಸೀಟುಗಳು ಬಿಜೆಪಿ ಪಾಲಾದವು. ಸಿಪಿಐ(ಎಂ) 3 ಸೀಟು ಗೆದ್ದರೆ, ಎಐಟಿಸಿ 1 ಸೀಟು ಗೆದ್ದಿತು. ತಿಪ್ರ ಮೋಥಾ ಮತ್ತೊಂದು ಸೀಟು ಗೆದ್ದಿತು. ಇದರೊಂದಿಗೆ ಇನ್ನೂ 112 ಸೀಟುಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರು.
ಇದನ್ನೂ ಓದಿ:9 ವರ್ಷಗಳ ನಂತರ ಜಾತಿ ನೆನಪಾಯ್ತಾ? ಎರಡನೇ ಮದ್ವೇಗೆ ಸಜ್ಜಾದವನ ವಿರುದ್ಧ ಪತ್ನಿ ದೂರ
ಹೀಗೆ ರಾಜ್ಯದ ಒಟ್ಟು 329 ಸೀಟುಗಳು ಬಿಜೆಪಿ ತೆಕ್ಕೆಗೆ ಬಿದ್ದರೆ, ಅಗರ್ತಲಾ ನಗರಪಾಲಿಕೆಯ 51 ವಾರ್ಡ್​ಗಳಲ್ಲಿ 51 ವಾರ್ಡ್​ಗಳೂ ಬಿಜೆಪಿಗೆ ದಕ್ಕಿದ್ದು ವಿಶೇಷವಾಗಿದೆ. ತ್ರಿಪುರಾ ಸ್ಟೇಟ್​ ರೈಫಲ್ಸ್​ ಮತ್ತು ಸೆಂಟ್ರಲ್​ ಪೊಲೀಸ್ ಪಡೆಯನ್ನು ಈ ಸಮಯದಲ್ಲಿ ಹೆಚ್ಚಿನ ಭದ್ರತೆಗಾಗಿ ನಿಯೋಜಿಸಲಾಗಿತ್ತು.(ಏಜೆನ್ಸೀಸ್​)
ಭಾರತದ ಐತಿಹಾಸಿಕ ವಿಜಯದ ಕಥೆ! ’83’ ಚಿತ್ರದ ಟ್ರೇಲರ್​ ಬಿಡುಗಡೆಗೆ ಕ್ಷಣಗಣನೆ

ಲಸಿಕೆಗೆ ಹೆದರಿ ಮನೆ ಮಾಳಿಗೆ ಏರಿದ! ಅಧಿಕಾರಿಗಳೂ ಏಣಿ ಹತ್ತಿದರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 3 =
Remember me
