ಪಟನಾ:ಬಿಹಾರದಲ್ಲಿ ವಿಧಾನಸಭಾ ಚುನಾವಣೆಯ ಕಾವು ಏರುತ್ತಿರುವಂತೆಯೇ ಎನ್​ಡಿಎ ಮೈತ್ರಿ ಕೂಟದ ರಾಜಕೀಯ ಚಟುವಟಿಕೆಗಳಲ್ಲೂ ಬಿರುಸುಕಾಣಿಸಿದೆ. ಬಿಹಾರದ ಮಟ್ಟಿಗೆ ಮೈತ್ರಿಯಿಂದ ದೂರ ಉಳಿದಿರುವ ರಾಮವಿಲಾಸ್ ಪಾಸ್ವಾನ್ ಅವರ ಲೋಕಜನಶಕ್ತಿ ಪಾರ್ಟಿ (ಎಲ್​ಜೆಪಿ)ಗೆ ಪ್ರಧಾನಿ ನರೇಂದ್ರ ಮೋದಿಯವರ ಫೋಟೋವನ್ನು ಪ್ರಚಾರಕ್ಕೆ ಬಳಸುವಂತಿಲ್ಲ ಎಂದು ಬಿಜೆಪಿ ವಾರ್ನಿಂಗ್ ನೀಡಿದೆ.
ಬಿಹಾರದಲ್ಲಿ ಜೆಡಿಯು ಜತೆಗಿನ ಮೈತ್ರಿ ಬಲವಾಗಿದ್ದು, ಬಿಜೆಪಿ ಅದರಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಎಲ್​ಜೆಪಿ ನಮಗೆ ಕೇಂದ್ರದಲ್ಲಿ ಮಿತ್ರಪಕ್ಷ. ಅದು ಹಾಗೆಯೇ ಮುಂದುವರಿಯಲಿದೆ. ಆದರೆ, ಈ ಸಲದ ಚುನಾವಣೆಯಲ್ಲಿ ಎಲ್​ಜೆಪಿಯವರು ಪ್ರಧಾನಿ ಮೋದಿಯವ ಫೋಟೋವನ್ನು ಪ್ರಚಾರಕ್ಕೆ ಬಳಸುವಂತಿಲ್ಲ ಎಂದು ನಿತೀಶ್ ಕುಮಾರ್​ ಅವರೊಂದಿಗೆ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥ ಸಂಜಯ್ ಜೈಸ್ವಾಲ್ ಪರೋಕ್ಷವಾಗಿ ಎಚ್ಚರಿಸಿದ್ದಾರೆ.
ಇದನ್ನು ಓದಿ:ಬಿಹಾರ ಚುನಾವಣೆ: ಯುಪಿಎ ಮೈತ್ರಿಕೂಟದ ಸೀಟುಹಂಚಿಕೆ ಫೈನಲ್​, ಯಾರಿಗೆಷ್ಟು, ಸಿಎಂ ಅಭ್ಯರ್ಥಿ ಯಾರು?
ಪ್ರಧಾನಿ ಮೋದಿ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಫೋಟೋವನ್ನು ಕೆಲವರು ಬಳಸುತ್ತಿರುವುದು ಗಮನಕ್ಕೆ ಬಂದಿದೆ. ಇದು ಮುಂದುವರಿದರೆ ಚುನಾವಣಾ ಆಯೋಗಕ್ಕೆ ದೂರು ಕೊಡಬೇಕಾಗುತ್ತದೆ. ಪಕ್ಷೇತರರು ಮತ್ತು ಇತರರ ಈ ನಡೆ ಚುನಾವಣಾ ನಿಯಮ ಉಲ್ಲಂಘನೆ ಎಂದು ಪರಿಗಣಿಸಲ್ಪಡುತ್ತದೆ ಎಂದು ಅವರು ಹೇಳಿದರು. (ಏಜೆನ್ಸೀಸ್)
ಬಿಹಾರ ಚುನಾವಣೆ: ಜೆಡಿಯು 122ರಲ್ಲಿ 7 ಮಾಂಜಿ ಪಾರ್ಟಿಗೆ, ಪ್ರಗತಿಯಲ್ಲಿದೆ ಬಿಜೆಪಿಯ 121 ಸೀಟುಗಳ ಪಾಲುಪಂಚಾಯ್ತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 7 =
Remember me
