ನವದೆಹಲಿ:ಎರಡನೇ ಬಾರಿಗೆ ಕೇಂದ್ರದ ಗದ್ದುಗೆ ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮೇ 30ಕ್ಕೆ ಒಂದು ವರ್ಷ ಪೂರೈಸಲಿದ್ದು, ಮೊದಲ ವಾರ್ಷಿಕೋತ್ಸವವನ್ನು ಸ್ಮರಣೀಯವಾಗಿಸಲು ಜೂನ್​ ಆರಂಭದಿಂದ ಒಂದು ತಿಂಗಳು ಬಿಜೆಪಿ ಮೆಗಾ ಅಭಿಯಾನ ಹಮ್ಮಿಕೊಳ್ಳಲಿದೆ.
ಇದನ್ನೂ ಓದಿ:ಕರೊನಾ ಅಂತ್ಯಗೊಳಿಸಲು ಭಕ್ತನ ಶಿರಚ್ಛೇದ ಮಾಡಿದ ಅರ್ಚಕ!
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಪ್ರಧಾನಿ ಕಾರ್ಯದರ್ಶಿ ಭೂಪೇಂದ್ರ ಯಾದವ್​, ದೇಶಾದ್ಯಂತ ಎಲ್ಲ ಜಿಲ್ಲೆಗಳಲ್ಲೂ ಡಿಜಿಟಲ್​ ರ‍್ಯಾಲಿಗಳನ್ನು ನಡೆಸುತ್ತೇವೆ ಎಂದರು. ಕರೊನಾ ವೈರಸ್​ ಸಂಕಷ್ಟದ ಸಮಯದಲ್ಲಿ ಪಕ್ಷವೂ ಸಾರ್ವಜನಿಕರ ಜತೆ ನಿಂತಿದೆ. ನಮ್ಮ ಕಾರ್ಯಕರ್ತರು 19 ಕೋಟಿ ಆಹಾರ ಪೊಟ್ಟಣಗಳನ್ನು ವಿತರಿಸಿದ್ದಾರೆ. 4 ಕೋಟಿಗೂ ಅಧಿಕ ರೇಷನ್​ ಕಿಟ್​ಗಳನ್ನು ದೇಶಾದ್ಯಂತ ನೀಡಿದೆ ಎಂದು ತಿಳಿಸಿದರು.
ಆರೋಗ್ಯ ಬಿಕ್ಕಟ್ಟಿನ ನಡುವೆ ಬಿಜೆಪಿ ಕಾರ್ಯಕರ್ತರು ಹಗಲಿರುಳು ಶ್ರಮಿಸುತ್ತಿದ್ದಾರೆ. ದೇಶದ ಎಲ್ಲಾ ಜಿಲ್ಲೆಗಳಲ್ಲಿ 909 ಸಂಘಟನೆಗಳ ಮೂಲಕ ಜನರಿಗೆ ಸೇವೆ ನೀಡುತ್ತಿದ್ದು, ಎಲ್ಲರಿಗೂ ಅಗತ್ಯವಾದ ನೆರವನ್ನು ನೀಡುತ್ತಿದ್ದಾರೆ. ಆಹಾರವನ್ನು ಹೊರತುಪಡಿಸಿ 5 ಕೋಟಿ ಮಾಸ್ಕ್​ ಕೂಡ ವಿತರಿಸಿದ್ದಾರೆ. ಆರೋಗ್ಯ ಸೇತು ಆ್ಯಪ್​ ಮೂಲಕ ಜನರಿಗೆ ಅರಿವು ಮೂಡಿಸಿದ್ದಾರೆ. ಅಲ್ಲದೆ, ಪ್ರಧಾನಿ ನಿಧಿಗೆ ದೇಣಿಗೆ ನೀಡಲು ಉತ್ತೇಜಿಸಿದ್ದಾರೆ ಎಂದರು.
ಇದನ್ನೂ ಓದಿ:VIDEO| ಸಾವಿಗೂ ನಾಲ್ಕು ದಿನದ ಹಿಂದೆ ಮೆಬಿನಾ ಆಡಿದ್ದ ಮಾತು ನಿಜಾ ಆಗೋಯ್ತಲ್ಲ
ಮೋದಿ ಸರ್ಕಾರದ ಮೊದಲ ವಾರ್ಷಿಕೋತ್ಸವದ ಬಗ್ಗೆ ಮಾತನಾಡಿ, ಪಕ್ಷವೂ ದೇಶಾದ್ಯಂತ ಎಲ್ಲ ಜಿಲ್ಲೆಗಳಲ್ಲೂ ಡಿಜಿಟಲ್​ ರ‍್ಯಾಲಿಗಳನ್ನು ನಡೆಸಲಿದೆ. ನಮ್ಮ ಏಳು ವಿಭಾಗಗಳು ಸುಮಾರು 500 ಡಿಜಿಟಲ್​ ರ‍್ಯಾಲಿಗಳನ್ನು ಆಯಾ ಕ್ಷೇತ್ರಗಳಲ್ಲಿ ಹಮ್ಮಿಕೊಳ್ಳಲಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಫೇಸ್​ಬುಕ್​ ಲೈವ್​ ಮೂಲಕ ಮಾತನಾಡಿದ ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ಮೋದಿ ಹಸ್ತಾಕ್ಷರವುಳ್ಳ ಸ್ವಾವಲಂಬಿ ಭಾರತ ಹಾಗೂ ಸರ್ಕಾರದ ಸಾಧನೆಗಳನ್ನು ಸಾರುವ ಪತ್ರವನ್ನು ಪ್ರತಿ ಮನೆಗೂ ತಲುಪಿಸಬೇಕು. ಸುಮಾರು 10 ಕೋಟಿ ಕುಟುಂಬಗಳಿಗೆ ವಿತರಿಸಲಿದ್ದೇವೆ. ಹೀಗಾಗಿ ಒಂದು ತಿಂಗಳ ದೀರ್ಘಾವಧಿ ಅಭಿಯಾನ ನಡೆಸಲಾಗುವುದು ಎಂದರು.(ಏಜೆನ್ಸೀಸ್​)
ಭಾರತದ 30 ಗುಂಪುಗಳು ಕರೊನಾ ಲಸಿಕೆ ಸಂಶೋಧನೆಯಲ್ಲಿ ತೊಡಗಿವೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 4 =
Remember me
