ಹೊಸದಿಲ್ಲಿ:ನಮ್ಮ ಏಳು ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕರನ್ನು ಬೇಟೆಯಾಡಲು ಬಿಜೆಪಿ ಪ್ರಯತ್ನಿಸಿದೆ ಎಂದು ನೇರವಾಗಿ ಆರೋಪಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಕ್ಷವನ್ನು ಬದಲಾಯಿಸಲು 25 ಕೋಟಿ ರೂ. ನೀಡುತ್ತೇವೆ ಎಂದು ಆಮಿಷ ಒಡ್ಡಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:BBKS10 ಫಿನಾಲೆ: ವಿನ್ನರ್​ ಯಾರು? ಇದು ವೀಕ್ಷಕರದ್ದಲ್ಲ! ಎಲಿಮಿನೇಟ್​ ಆದ ಸ್ಪರ್ಧಿಗಳ ಊಹೆ
ಈ ಕುರಿತಂತೆ ಟ್ವೀಟ್​ ಮಾಡಿದ ಕೇಜ್ರಿವಾಲ್, “ಇತ್ತೀಚೆಗೆ ನಮ್ಮ ದೆಹಲಿಯ ಏಳು ಶಾಸಕರನ್ನು ಬಿಜೆಪಿಗರು ಸಂಪರ್ಕಿಸಿ, ಕೆಲವು ದಿನಗಳ ಬಳಿಕ ನಾವು ಕೇಜ್ರಿವಾಲ್ ಅವರನ್ನು ಬಂಧಿಸುತ್ತೇವೆ. ನಂತರ ನಿಮ್ಮ ಶಾಸಕರನ್ನು ಒಡೆಯುತ್ತೇವೆ. 21 ಶಾಸಕರೊಂದಿಗೆ ಮಾತುಕತೆಯೂ ಸಹ ನಡೆಸಲಾಗಿದೆ ಎಂದು ಹೇಳಿದ್ದಾರೆ. ಇತರರೊಂದಿಗೂ ಮಾತನಾಡುತ್ತೇವೆ. ಆದಾದ ಮೇಲೆ ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರವನ್ನು ಉರುಳಿಸುತ್ತೇವೆ” ಎಂದಿದ್ದಾರೆ.
पिछले दिनों इन्होंने हमारे दिल्ली के 7 MLAs को संपर्क कर कहा है – “कुछ दिन बाद केजरीवाल को गिरफ़्तार कर लेंगे। उसके बाद MLAs को तोड़ेंगे। 21 MLAs से बात हो गयी है। औरों से भी बात कर रहे हैं। उसके बाद दिल्ली में आम आदमी पार्टी की सरकार गिरा देंगे। आप भी आ जाओ। 25 करोड़ रुपये देंगे…
— Arvind Kejriwal (@ArvindKejriwal)January 27, 2024

“ನೀವೂ ಕೂಡ ಬರಬಹುದು. 25 ಕೋಟಿ ರೂ. ನೀಡ್ತೇವೆ, ಬಿಜೆಪಿ ಟಿಕೆಟ್‌ನಲ್ಲಿ ಚುನಾವಣೆಗೆ ಸ್ಪರ್ಧಿಸಿ ಎಂದು ಹೇಳಿದ್ದಾರೆ. ಅವರ ಪ್ರಕಾರ, ನಾವು 21 ಶಾಸಕರನ್ನು ಸಂಪರ್ಕಿಸಿದ್ದೇವೆ ಎಂದು ತಿಳಿಸಿದ್ದಾರೆ. ಆದ್ರೆ, ನಮ್ಮ ಮಾಹಿತಿಯ ಪ್ರಕಾರ ಕೇವಲ 7 ಶಾಸಕರನ್ನು ಮಾತ್ರ ಸಂಪರ್ಕಿಸಲಾಗಿದ್ದು, ಅವರೆಲ್ಲರೂ ನಿರಾಕರಿಸಿದ್ದಾರೆ” ಎಂದು ಸಿಎಂ ಹೇಳಿದ್ದಾರೆ.
BBKS10 ಫಿನಾಲೆ: ವಿನ್ನರ್​ ಯಾರು? ಇದು ವೀಕ್ಷಕರದ್ದಲ್ಲ! ಎಲಿಮಿನೇಟ್​ ಆದ ಸ್ಪರ್ಧಿಗಳ ಊಹೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
