ರಾಂಚಿ:ರಾಜಸ್ಥಾನದಲ್ಲಿ ಅಶೋಕ್​ ಗೆಹ್ಲೋಟ್​ ನೇತೃತ್ವದ ಕಾಂಗ್ರೆಸ್​ ಸರ್ಕಾರವನ್ನು ಕೆಳಗಿಳಿಸುವ ಪ್ರಯತ್ನದಲ್ಲಿ ಒಂದಷ್ಟು ಹಿನ್ನಡೆಗೆ ಒಳಗಾಗಿದ್ದರೂ ಬಿಜೆಪಿ ಮತ್ತೊಂದು ರಾಜ್ಯ ಸರ್ಕಾರವನ್ನು ಉರುಳಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಆರಂಭಿಸಿದೆಯೇ? ಕಾಂಗ್ರೆಸ್​ ಮುಖಂಡರ ಹೇಳಿಕೆಯನ್ನು ನಂಬುವುದಾದರೆ ಹೌದು ಎಂಬ ಉತ್ತರ ದೊರೆಯುತ್ತದೆ.
ಜಾರ್ಖಂಡ್​ನಲ್ಲಿ ಹೇಮಂತ್​ ಸೊರೇನ್​ ನೇತೃತ್ವದ ಕಾಂಗ್ರೆಸ್​ ಸರ್ಕಾರ ಆಡಳಿತದಲ್ಲಿದೆ. ಈ ಸರ್ಕಾರವನ್ನು ಕೆಳಗಿಳಿಸಿ, ತನ್ನ ಸರ್ಕಾರವನ್ನು ಸ್ಥಾಪಿಸಲು ಬಿಜೆಪಿ ರಾಜಕೀಯ ಆಟ ಶುರುವಿಟ್ಟಿದೆ ಎಂದು ಜಾರ್ಖಂಡ್​ ಕಾಂಗ್ರೆಸ್​ ಅಧ್ಯಕ್ಷ ರಾಮೇಶ್ವರ್​ ಒರಾನ್​ ಆರೋಪಿಸಿದ್ದಾರೆ.
ಕಾಂಗ್ರೆಸ್​ನ ಶಾಸಕರ ಪಕ್ಷನಿಷ್ಠೆ ಪ್ರಶ್ನಾತೀತವಾಗಿದೆ. ಆದ್ದರಿಂದ, ಸೊರೇನ್​ ಸರ್ಕಾರವನ್ನು ಕೆಳಗಿಳಿಸುವ ಬಿಜೆಪಿಯ ಆಟ ಜಾರ್ಖಂಡ್​ನಲ್ಲಿ ನಡೆಯುವುದಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿಗೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ ಎಂಬುದನ್ನು ಪದೇಪದೆ ಸಾಬೀತುಪಡಿಸುತ್ತಿದೆ. ಮೊದಲಿಗೆ ಕರ್ನಾಟಕದಲ್ಲಿ ಜೆಡಿಎಸ್​-ಕಾಂಗ್ರೆಸ್​ ಮೈತ್ರಿ ಸರ್ಕಾರವನ್ನು ಉರುಳಿಸಿದರು. ನಂತರ ಮಧ್ಯಪ್ರದೇಶ ಆಯಿತು. ರಾಜಸ್ಥಾನದಲ್ಲಿ ಸರ್ಕಾರ ಉರುಳಿಸುವ ಪ್ರಯತ್ನದಲ್ಲಿ ರಾಜಕೀಯ ಅಸ್ಥಿರತೆ ಉಂಟು ಮಾಡಿದ್ದಾರೆ. ಇದೀಗ ಜಾರ್ಖಂಡ್​ನ ಮೇಲೆ ಅವರ ಕಣ್ಣು ಬಿದ್ದಿದೆ. ಇಲ್ಲಿನ ಸರ್ಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ನಂಬಲರ್ಹ ಮೂಲಗಳು ನಮಗೆ ಮಾಹಿತಿ ನೀಡಿವೆ ಎಂದು ಒರಾನ್​ ಹೇಳಿದ್ದಾರೆ.
ಇದನ್ನೂ ಓದಿ:ಕುಖ್ಯಾತ ಕಾಡುಗಳ್ಳ ವೀರಪ್ಪನ್​ ಪುತ್ರಿ ತಮಿಳುನಾಡು ಬಿಜೆಪಿ ಯುವ ಮೋಚಾ ಉಪಾಧ್ಯಕ್ಷೆ
ಕಾಂಗ್ರೆಸ್​ನ ಅಪಪ್ರಚಾರ:ಜಾರ್ಖಂಡ್​ನಲ್ಲಿ ಹೇಮಂತ್​ ಸೊರೇನ್​ ನೇತೃತ್ವದ ಸರ್ಕಾರವನ್ನು ಉರುಳಿಸಲು ಬಿಜೆಪಿ ಯಾವುದೇ ಪ್ರಯತ್ನಗಳನ್ನು ಮಾಡುತ್ತಿಲ್ಲ. ಬಿಜೆಪಿಯ ಹೆಸರಿಗೆ ಮಸಿ ಬಳಿಯಲು ಕಾಂಗ್ರೆಸ್​ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದೆ ಎಂದು ಜಾರ್ಖಂಡ್​ ಬಿಜೆಪಿಯ ಅಧ್ಯಕ್ಷ ದೀಪಕ್​ ಪ್ರಕಾಶ್​ ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಕರೊನಾ ಸೋಂಕು ನಿಯಂತ್ರಿಸುವಲ್ಲಿ ಸೊರೇನ್​ ನೇತೃತ್ವದ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಹೀಗಾಗಿ ಅದು ರಾಜ್ಯದ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಇದರಿಂದ ಪಾರಾಗಲು ಕಾಂಗ್ರೆಸ್​ ಅಡ್ಡಮಾರ್ಗ ತುಳಿಯುತ್ತಿದೆ ಎಂದು ಹೇಳಿದ್ದಾರೆ.
ಇನ್ನೊಂದೆಡೆ ಜಾರ್ಖಂಡ್​ ಕಾಂಗ್ರೆಸ್​ಗೆ ತನ್ನ ಶಾಸಕರ ಪಕ್ಷನಿಷ್ಠೆಯ ಬಗ್ಗೆ ಶಂಕೆ ಮೂಡಿದೆ. ಅವರು ಪಕ್ಷಾಂತರ ಮಾಡುವ ಭೀತಿಗೆ ಒಳಗಾಗಿ, ಬಿಜೆಪಿಯ ಮೇಲೆ ಗೂಬೆ ಕೂರಿಸಲು ಯತ್ನಿಸುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸುರಕ್ಷತೆ ಜತೆಗೆ ಆಕರ್ಷಣೆಯನ್ನೂ ಹೆಚ್ಚಿಸುವ ಪಾರದರ್ಶಕ ಬಯೋಸೆಕ್ಯೂರಿಟಿ ರೇನ್​ಕೋಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 4 =
Remember me
