ಪಶ್ಚಿಮ ಬಂಗಾಳ:ಭಾರತೀಯ ಕ್ರಿಕೆಟ್​ ತಂಡದ ಆಟಗಾರರು ಅಭ್ಯಾಸ ಪಂದ್ಯದಲ್ಲಿ ಧರಿಸುವ ಜೆರ್ಸಿಗೆ ಕೇಸರಿ ಬಣ್ಣವನ್ನು ನೀಡಲಾಗಿದೆ. ಈ ಮೂಲಕ ಬಿಜೆಪಿ ವ್ಯಾಪಕ ಪ್ರಚಾರವನ್ನು ಗಿಟ್ಟಿಸಿಕೊಳ್ಳುತ್ತಿದೆ ಎಂದು ಪ. ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇರ ಆರೋಪ ಎಸಗಿದ್ದಾರೆ.
ಇದನ್ನೂ ಓದಿ:ಜಮೀರ್​​ಗೆ ಮತಿಭ್ರಾಂತಿ ಆಗಿದೆ ಅವರ ರಾಜೀನಾಮೆ ತಗೋಳಿ: ನಳಿನ್ ಕುಮಾರ್ ಕಟೀಲ್
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಭಾರತೀಯ ಕ್ರಿಕೆಟ್ ತಂಡದ ಅಭ್ಯಾಸ ಪಂದ್ಯಗಳಲ್ಲಿ ಧರಿಸುವ ಉಡುಗೆಯಲ್ಲಿ ಕೇಸರಿ ಬಣ್ಣವನ್ನು ತುಂಬಲು ವ್ಯಾಪಕ ಪ್ರಚಾರವನ್ನು ಆಯೋಜಿಸುತ್ತಿದೆ. ಇದರ ಜತೆಗೆ ಮೆಟ್ರೋ ನಿಲ್ದಾಣಗಳಿಗೂ ಕೂಡ ಕೇಸರಿ ಬಣ್ಣವನ್ನು ಬಳಿಯುತ್ತಿದೆ ಎಂದು ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ಆರೋಪಿಸಿದ್ದಾರೆ.
ಸೆಂಟ್ರಲ್ ಕೋಲ್ಕತ್ತಾದ ಪೋಸ್ಟಾ ಬಜಾರ್‌ನಲ್ಲಿ ನಡೆದ ಜಗಧಾತ್ರಿ ಪೂಜೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, “ಆಡಳಿತ ಪಕ್ಷ ಬಿಜೆಪಿ ಉದ್ದೇಶಪೂರ್ವಕ ಮಾದರಿಯ ‘ಕೇಸರಿಕರಣ’ವನ್ನು ಮಾಡುವಲ್ಲಿ ಮುಂದಿದೆ. ಇಡೀ ದೇಶಕ್ಕೆ ಕೇಸರಿ ಬಣ್ಣ ಬಳಿಯಲು ಪ್ರಯತ್ನಿಸುತ್ತಿದ್ದಾರೆ. ನಮ್ಮ ಭಾರತೀಯ ಆಟಗಾರರ ಬಗ್ಗೆ ನಮಗೆ ಹೆಮ್ಮೆಯಿದೆ ಮತ್ತು ಅವರು ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗುತ್ತಾರೆ ಎಂಬುದನ್ನು ಬಲವಾಗಿ ನಂಬಿದ್ದೇನೆ” ಎಂದರು.
ಇದನ್ನೂ ಓದಿ:ನ.19ರಂದು ವಿಶ್ವಕಪ್ ಫೈನಲ್ ಪಂದ್ಯ: ಭಾರತ ಗೆಲುವಿಗೆ ಪ್ರಾರ್ಥಿಸಿ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರಿಂದ ವಿಶೇಷ ಪೂಜೆ
“ಆದ್ರೆ, ಬಿಜೆಪಿ ಅಲ್ಲಿಯೂ ಕೇಸರಿ ಬಣ್ಣಗಳನ್ನು ತಂದಿದ್ದಾರೆ. ಇದರೊಟ್ಟಿಗೆ ಮೆಟ್ರೋ ನಿಲ್ದಾಣಗಳಿಗೆ ಸಹ ಕೇಸರಿ ಬಣ್ಣವನ್ನು ಬಳಿಯಲಾಗಿದೆ. ಇದು ಸ್ವೀಕಾರಾರ್ಹವಲ್ಲ. ಈ ದೇಶವು ರಾಷ್ಟ್ರದ ಜನತೆಗೆ ಸೇರಿದೆಯೇ ಹೊರತು, ಕೇವಲ ಒಂದು ಪಕ್ಷಕಲ್ಲ” ಎಂದರು. ಮಮತಾ ಆರೋಪವನ್ನು ತಳ್ಳಿಹಾಕಿದ ಬಿಜೆಪಿ, ಇದು ಆಧಾರರಹಿತ ಮತ್ತು ದ್ವೇಷದ ಮನಸ್ಥಿತಿಯ ಸೂಚಕ ಎಂದು ಹೇಳಿದೆ,(ಏಜೆನ್ಸೀಸ್).
ನಯನತಾರ ಜನ್ಮದಿನ: ಕಥೆಯ ಸುಳಿವು ಕೊಟ್ಟ ‘ಟೆಸ್ಟ್’​ ಪೋಸ್ಟರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
