ನವದೆಹಲಿ:ಕಾಶ್ಮೀರಿ ಪಂಡಿತರು ಕಾಶ್ಮಿರದ ತಮ್ಮ ಮನೆಗಳಿಂದ ಬಲವಂತವಾಗಿ ಹೊರದೂಡಲ್ಪಟ್ಟ ಕಥೆಯನ್ನೊಳಗೊಂಡ ‘ಶಿಕಾರಾ: ದಿ ಅನ್​ಟೋಲ್ಡ್ ಸ್ಟೋರಿ ಆಫ್​ ಕಾಶ್ಮೀರಿ ಪಂಡಿತ್ಸ್’​ ಸಿನಿಮಾವನ್ನು ನೋಡಿದ ಬಿಜೆಪಿ ಹಿರಿಯ ನಾಯಕ ಕಣ್ಣೀರು ಸುರಿಸಿದ್ದಾರೆ.
ಶಿಕಾರಾ ಸಿನಿಮಾವನ್ನು ವಿಧು ವಿನೋದ್ ಚೋಪ್ರಾ ನಿರ್ದೇಶನ ಮಾಡಿದ್ದಾರೆ. ಕಾಶ್ಮೀರಿ ಪಂಡಿತರನ್ನು 1990ಕ್ಕೂ ಮೊದಲು ಸಾಮೂಹಿಕವಾಗಿ ಅಲ್ಲಿಂದ ಹೊರದೂಡಿದ ಕಥಾಸಾರವನ್ನು ಈ ಸಿನಿಮಾ ಒಳಗೊಂಡಿದೆ. ಇದು ಫೆಬ್ರವರಿ 7ರಂದು ಬಿಡುಗಡೆಯಾಗಿದ್ದು ಹೊಸಬರಾದ ಸಾದಿಯಾ ಹಾಗೂ ಅದಿಲ್ ಖಾನ್ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ.
ಸಿನಿಮಾವನ್ನು ವೀಕ್ಷಿಸಿದ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಕಣ್ಣಲ್ಲಿ ನೀರು ಹಾಕಿದ್ದಾರೆ. ಚಿತ್ರ ಮುಗಿದ ಬಳಿಕ ಅವರು ತುಂಬ ಭಾವನಾತ್ಮಕವಾಗಿ, ಕಣ್ಣೀರನ್ನು ತಡೆಯುವ ಪ್ರಯತ್ನ ಮಾಡುವ ವಿಡಿಯೋವೊಂದು ವೈರಲ್ ಆಗಿದೆ. ವಿಧು ವಿನೋದ್​ ಚೋಪ್ರಾ ಆಡ್ವಾಣಿಯವರ ಬಳಿ ಕುಳಿತು ಅವರೊಂದಿಗೆ ಮಾತನಾಡಿದ್ದನ್ನು, ಆಡ್ವಾಣಿಯವರ ಪಕ್ಕದಲ್ಲಿ ಕುಳಿತಿದ್ದವರೂ ಭಾವನಾತ್ಮಕವಾಗಿದ್ದನ್ನು ವಿಡಿಯೋದಲ್ಲಿ ನೋಡಬಹುದು.
ವಿಧು ವಿನೋದ್​ ಚೋಪ್ರಾ ಮೂಲತಃ ಕಾಶ್ಮೀರದವರೇ ಆಗಿದ್ದು, ಶಿಕಾರಾ ಸಿನಿಮಾವನ್ನು 2007ರಲ್ಲಿ ನಿಧನರಾದ ತಮ್ಮ ತಾಯಿಗೆ ಸಮರ್ಪಿಸಿದ್ದಾರೆ.(ಏಜೆನ್ಸೀಸ್)
https://twitter.com/VVCFilms/status/1225778399659978752?s=20
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 8 =
Remember me
