ವಿಜಯನಗರ: ಕರೊನಾ ಹಾವಳಿಯಂತಹ ಕಷ್ಟ ಕಾಲದಲ್ಲಿ ಸ್ಥಳೀಯ ಜನರಿಗೆ ಸ್ಯಾನಿಟೈಸಿಂಗ್ ಮತ್ತಿತರ ಕೆಲಸಗಳಲ್ಲಿ ಸಕ್ರಿಯನಾಗಿ ನಿರತನಾಗಿದ್ದ ಎಂಬ ಒಂದೇ ಕಾರಣಕ್ಕೆ ಬಿಜೆಪಿಯ ಹಿರಿಯ ಕಾರ್ಯಕರ್ತರೊಬ್ಬರನ್ನು ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಕಾರ್ಯಕರ್ತರು 41 ಬಾರಿ ಇರಿದು ತೀವ್ರವಾಗಿ ಗಾಯಗೊಳಿಸಿದ ಘಟನೆ ನಡೆದಿದೆ.
ಆಂಧ್ರಪ್ರದೇಶ ಬಿಜೆಪಿಯ ಹಿರಿಯ ಕಾರ್ಯಕರ್ತ ಕೆ. ನಾರಾಯಣರಾವ್ ಗಾಯಗೊಂಡವರು. ಕರೊನಾದಿಂದ ಬಾಧಿತರಾದ ಕುಟುಂಬಗಳಿಗೆ ಕಳೆದ ಕೆಲವು ತಿಂಗಳಿಂದ ಸಹಾಯ ಮಾಡುವಲ್ಲಿ ನಿರತರಾಗಿದ್ದರು. ದಿನಸಿ ವಿತರಣೆ, ಸೋಂಕಿತರನ್ನು ಆಸ್ಪತ್ರೆಗೆ ಸೇರಿಸುವುದು, ಅವರ ಮನೆಗಳನ್ನು ಸ್ಯಾನಿಟೈಸ್ ಮಾಡಿಸುವುದು ಮತ್ತಿತರ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಇದರಿಂದ ಅವರಿಗೆ ಜನ ಹತ್ತಿರವಾಗುತ್ತಿದ್ದಾರೆಂದು ಸ್ಥಳೀಯ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕೆಲ ತಿಂಗಳುಗಳಿಂದ ಅಸಮಾಧಾನಗೊಂಡಿದ್ದರು. ಈ ಹಿನ್ನೆಲೆಯಲ್ಲಿಯೇ ಇಂತಹ ಮಾರಣಾಂತಿಕ ಹಲ್ಲೆ ನಡೆದಿದೆ ಎಂದು ಸ್ಥಳೀಯ ಬಿಜೆಪಿ ನಾಯಕರು ಆರೋಪಿಸಿದ್ದಾರೆ.ಇದನ್ನೂ ಓದಿಆಗಸ್ಟ್​ 15ಕ್ಕೆ ಬಳಕೆಗೆ ದೊರೆಯಲಿದೆ ಕರೊನಾ ಲಸಿಕೆ; ಆದರೆ ಭಾರತದ್ದಲ್ಲ…!
ಸ್ಯಾನಿಟೈಸೇಷನ್ ಮಾಡಿಸುವುದಕ್ಕೆ ಮುನ್ನ ಸ್ಥಳೀಯ ಪಾಲಿಕೆಯ ಆಯುಕ್ತರಿಂದ ಅನುಮತಿಯನ್ನೂ ಪಡೆದುಕೊಂಡಿದ್ದರು. ಆದರೆ ಮಂಗಳವಾರ ಏಕಾಏಕಿ ದಾಳಿ ಮಾಡಿದ ವೈಎಸ್‌ಆರ್ ಕಾರ್ಯಕರ್ತರು ನಾರಾಯಣರಾವ್ ಅವರ ಮೇಲೆ ಚೂರಿ, ತಲ್ವಾರ್‌ಗಳಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ. ತಲೆ, ಮುಖ, ಕಿವಿ, ಭುಜಗಳಿಗೆ ತೀವ್ರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ನೈಜ ಅಯೋಧ್ಯೆ ನೇಪಾಳದಲ್ಲಿದೆ…’ ಓಲಿ ಮಾತಿಗೆ ವಿಎಚ್​ಪಿ ಹೇಳಿದ್ದೇನು?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × two =
Remember me
