ಚೆನ್ನೈ:ಬೈಕ್​ನಲ್ಲಿ ಡ್ರಾಪ್​ ಕೊಡುವ ನೆಪದಲ್ಲಿ ಅಪ್ರಾಪ್ತ ವಯಸ್ಕ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಿಜೆಪಿ ಮುಖಂಡನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಘಟನೆಯೂ ತಮಿಳುನಾಡಿನ ತಿರುವಳ್ಳೂರ್​ ಜಿಲ್ಲೆಯ ವಿಲ್ಲಿವಕ್ಕಂನಲ್ಲಿ ನಡೆದಿದ್ದು ಪ್ರಕರಣ ಸಂಬಂಧ ಬಿಜೆಪಿ ಮುಖಂಡ ಬಾಲಚಂದ್ರನ್​(47)ನನ್ನು ಬಾಲಕನ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಬಂಧಿಸಿದ್ದಾರೆ.
ಅಪ್ರಾಪ್ತ ವಯಸ್ಕ ಬಾಲಕನಿಗೆ ಬಂಧಿತ ಆರೋಪಿ ಬಾಲಚಂದ್ರನ್​ ಲಿಫ್ಟ್​ ಕೊಡುವ ನೆಪದಲ್ಲಿ ಮೊದಲಿಗೆ ಬೈಕ್​ ಹತ್ತುವಂತೆ ಹೇಳಿದ್ದಾನೆ. ಬಳಿಕ ಆತನನ್ನು ಪಾಡಿ ಎಂಬ ಪ್ರದೇಶದಲ್ಲಿರುವ ಸೇತುವೆ ಬಳಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ಧಾನೆ.
ಇದನ್ನೂ ಓದಿ:ಯಾರನ್ನು ತೃಪ್ತಿಪಡಿಸಲು ಸಚಿವರು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ?: ಆರಗ ಜ್ಞಾನೇಂದ್ರ
ಇದಾದ ಕೆಲ ಹೊತ್ತಿನ ಬಳಿಕ ಬಾಲಕ ಹೇಳಿದ ಜಾಗಕ್ಕೆ ಆರೋಪಿ ಲಿಫ್ಟ್​ ನೀಡಿದ್ದಾನೆ. ಈ ವೇಳೆ ಅಪ್ರಾಪ್ತ ವಯಸ್ಕ ಜೋರಾಗಿ ಅಳುತ್ತಿದ್ದನ್ನು ಗಮನಿಸಿದ ಸ್ಥಳೀಯರು ಏನಾಯಿತು ಎಂದು ವಿಚಾರಿಸಿದಾಗ ನಡೆದ ಘಟನೆಯನ್ನು ಸಂತ್ರಸ್ತ ಬಾಲಕ ಹೇಳಿಕೊಂಡಿದ್ದಾನೆ.
ಈ ವೇಳೆ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ಆರೋಪಿಯನ್ನು ಹಿಡಿದ ಸಾರ್ವಜನಿಕರು ಗಾಡಿಯನ್ನು ಪರಿಶೀಲಿಸಿದಾಗ ಬಿಜೆಪಿ ಪಕ್ಷದ ಶಾಲು ಹಾಗೂ ಐಡಿ ಕಾರ್ಡ್​ ದೊರೆತಿದೆ. ಬಳಿಕ ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಲಕನ ತಾಯಿ ನೀಡಿದ ದೂರಿನ ಮೇರೆಗೆ ಬಾಲಚಂದ್ರನ್​ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
