ಗುಜರಾತ್:ದೇವಸ್ಥಾನಕ್ಕೆ ಬಂದಿದ್ದ ಪತ್ನಿಯನ್ನು ಕರೆದೊಯ್ಯಲು ಬಂದ ಬಿಜೆಪಿ ಕಾರ್ಯಕರ್ತನನ್ನು ದುಷ್ಕರ್ಮಿಗಳ ಗುಂಪೊಂದು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಗುಜರಾತ್​ನ ವಲ್ಸದ್ ಜಿಲ್ಲೆಯಲ್ಲಿ ನಡೆದಿದೆ.
ಶೈಲೇಶ್ ಪಟೇಲ್ (45) ಮೃತ. ಈತ ಬಿಜೆಪಿಯ ವಾಪಿ ತಾಲೂಕು ಘಟಕದ ಉಪಾಧ್ಯಕ್ಷರಾಗಿದ್ದರು.ಇವರು ಕೋಚರ್ವ ಗ್ರಾಮದ ನಿವಾಸಿಯಾಗಿದ್ದರು. ಮೋಟಾರ್ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಆತನ ಮೇಲೆ ಮೂರು-ನಾಲ್ಕು ಸುತ್ತು ಗುಂಡು ಹಾರಿಸಿದ್ದಾರೆ.
ಇದನ್ನೂ ಓದಿ:ನಾಲ್ವರು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸಿ SSLC ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ
ನಡೆದಿದ್ದೇನು?:ರಾಟಾ ರಸ್ತೆಯಲ್ಲಿರುವ ಮಹಾದೇವ ದೇವಸ್ಥಾನಕ್ಕೆ ಪೂಜೆಗೆಂದು ತೆರಳಿದ್ದ ಪತ್ನಿ ನಯಾಬೆನ್‌ಗಾಗಿ ಶೈಲೇಶ್ ಕಾರಿನಲ್ಲಿ ಕುಳಿತು ಕಾಯುತ್ತಿದ್ದರು. ಆಗ ಬೈಕಿನಲ್ಲಿ ಆ ಸ್ಥಳಕ್ಕೆ ಬಂದಿರುವ ಅಪರಿಚಿತ ವ್ಯಕ್ತಿಗಳು ಶೈಲೇಶ್ ಎದೆಗೆ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಕೂಡಲೇ ಅಲ್ಲೇ ಇದ್ದ ಸ್ಥಳೀಯರು ಶೈಲೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಪ್ರಾಣ ಬಿಟ್ಟಿದ್ದಾರೆ.
ಶೈಲೇಶ್ ಪತ್ನಿ ಮಾತನಾಡಿ, ಕೆಲವು ಪರಿಚಿತ ವ್ಯಕ್ತಿಗಳೊಂದಿಗಿನ ಹಳೆಯ ಜಗಳ ಕೊಲೆಗೆ ಕಾರಣವಾಗಿರಬಹುದು ಎಂದಿದ್ದಾರೆ. ಪೊಲೀಸರು ಈ ಕುರಿತಾಗಿ ತನಿಖೆ ಕೈಗೊಂಡಿದ್ದಾರೆ.
ಈ ಮಾಯಾ ಚಿತ್ರದಲ್ಲಿ ನಿಮಗೆ ಎಷ್ಟು ಕಾಲುಗಳು ಕಾಣುತ್ತವೆ ಪತ್ತೆ ಮಾಡಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − three =
Remember me
