ಚೆನ್ನೈ:ಪ್ರತಿಭಟನೆ ನಡೆಸುವ ವೇಳೆ ಕಾಂಗ್ರೆಸ್ ಕಾರ್ಯರ್ತರು ಮೈಕೈಗೆ ಬೆಂಕಿ ತಗುಲಿಸಿಕೊಂಡ ಪ್ರಕರಣ ಬೆಂಗಳೂರಿನಲ್ಲಿ ಈ ಹಿಂದೆ ವರದಿಯಾಗಿತ್ತು. ಇದೀಗ ಬಿಜೆಪಿಯ ಸುಮಾರು 30 ಕಾರ್ಯಕರ್ತರು ಖುಷಿಯಲ್ಲಿ ಮೈಸುಟ್ಟುಕೊಂಡ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನಾಚರಣೆ ಆಚರಿಸುವ ಜೋಶ್​ನಲ್ಲಿ ತಮಿಳುನಾಡಿನಲ್ಲಿ ಇಂಥದ್ದೊಂದು ಅನಾಹುತ ಸಂಭವಿಸಿದೆ. ಸೆ. 17ರಂದು ಚೆನ್ನೈನ ಅಂಬತ್ತೂರು ಸಮೀಪದ ಪಡಿ ಎಂಬಲ್ಲಿ ಈ ಘಟನೆ ನಡೆದಿದೆ.
ಸಂಭ್ರಮಾಚರಣೆ ವೇಳೆ ಪಟಾಕಿಯಿಂದ ಸಿಡಿದ ಬೆಂಕಿಯ ಕಿಡಿ ಹೀಲಿಯಂ ತುಂಬಿದ ಬಲೂನ್​ಗಳ ಮೇಲೆ ಬಿದ್ದು ಅದು ಒಡೆದಿದೆ. ಪರಿಣಾಮ ಬೆಂಕಿ ಉಂಟಾಗಿದ್ದು, ಬಲೂನ್​ಗಳ ಬಳಿ ಇದ್ದ ಕಾರ್ಯಕರ್ತರಿಗೆ ಬೆಂಕಿ ತಗುಲಿದೆ. ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಅದೃಷ್ಟವಶಾತ್ ಎಲ್ಲರೂ ಸಣ್ಣಪುಟ್ಟ ಗಾಯಕ್ಕೊಳಗಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. (ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
