ಅಹಮದಾಬಾದ್​: ವಿಶ್ವದ ಅತಿದೊಡ್ಡ ಮೊಟೇರಾ ಕ್ರಿಕೆಟ್​ ಕ್ರೀಡಾಂಗಣ ಉದ್ಘಾಟಿಸಲು ಫೆ.24ರಂದು ಗುಜರಾತಿನ ಅಹಮದಾಬಾದ್​ಗೆ ಆಗಮಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೆ ಕಾನ್ಪುರದ ವಿಶೇಷ ಹಾಗೂ ಸಾಂಪ್ರದಾಯಿಕ ಸ್ವೀಟ್ಸ್​ ಅನ್ನು ಉಡುಗೊರೆಯಾಗಿ ನೀಡಲು ಬಿಜೆಪಿ ಕಾರ್ಯಕರ್ತರು ಯೋಜನೆ ಹಾಕಿಕೊಂಡಿದ್ದಾರೆ.
ಇದಕ್ಕಾಗಿ ಈಗಾಗಲೇ ತಯಾರಿ ಮಾಡಿಕೊಂಡಿರುವ ಕಾರ್ಯಕರ್ತರು ಕಾನ್ಪುರದ ರೈಲ್​ ಬಜಾರ್​ನಲ್ಲಿರುವ ಶಾಂತಿ ಸ್ವೀಟ್​ ಹೌಸ್​ಗೆ ಆರ್ಡರ್​ ನೀಡಿದ್ದಾರೆ. ಆರ್ಡರ್​ ಸ್ವೀಕರಿಸಿದ್ದಕ್ಕೆ ಹೆಮ್ಮೆ ಇದೆ ಎಂದು ಶಾಪ್​ ಮಾಲೀಕ ಅಜಯ್​ ಗುಪ್ತಾ(ರಾಜು) ಅವರು ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಗುಪ್ತಾ, ಯುಎಸ್​ ಅಧ್ಯಕ್ಷ ಟ್ರಂಪ್​ ಅವರಿಗೆ ಗಿಫ್ಟ್​ ನೀಡಲು ಬಿಜೆಪಿ ಕಾರ್ಯಕರ್ತರು ನೀಡಿರುವ ಆರ್ಡರ್​ ಅನ್ನು ಸ್ವೀಕರಿಸಿದ್ದೇನೆ. ನಾವು ಸಾಂಪ್ರದಾಯಿಕ ಕಾನ್ಪುರ ಸ್ವೀಟ್ಸ್ ಅನ್ನು ತಯಾರಿಸುತ್ತಿದ್ದೇವೆ. ಇದಕ್ಕಾಗಿ ನಮಗೆ ಹೆಮ್ಮೆ ಇದೆ. ಅಲ್ಲದೆ, ಸ್ವೀಟ್ಸ್​ ಬಾಕ್ಸ್​ ಮೇಲೆ “ನಮಸ್ತೆ ಟ್ರಂಪ್​” ಎಂಬ ಘೋಷಣೆಯನ್ನು ಹಾಕಲಾಗಿದೆ ಎಂದು ಮಾಹಿತಿ ನೀಡಿದರು.​
ಸ್ಥಳೀಯ ಬಿಜೆಪಿ ಮುಖಂಡ ಜ್ಞಾನೇಶ್ ಮಿಶ್ರಾ ಮಾತನಾಡಿ, ನಾನು ಅಹಮದಾಬಾದ್​ನಲ್ಲಿರುವ ಮೊಟೇರಾ ಕ್ರೀಡಾಂಗಣಕ್ಕೆ ತೆರಳಿ ಡೊನಾಲ್ಡ್​ ಟ್ರಂಪ್​ ಅವರಿಗೆ ಕಾನ್ಪುರ ಸ್ವೀಟ್ಸ್​ ಅನ್ನು ಉಡುಗೊರೆಯಾಗಿ ನೀಡುತ್ತೇನೆ ಎಂದು ತಿಳಿಸಿದ್ದಾರೆ.
ಟ್ರಂಪ್​ ತಮ್ಮ ಪತ್ನಿ ಮೆಲೆನಿಯಾ ಟ್ರಂಪ್​ ಮಗಳು ಇವಾಂಕ ಹಾಗೂ ಅಳಿಯ ಜರೇದ್​ ಕುಶ್ನರ್​ರೊಂದಿಗೆ ಫೆ. 24ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಅಹಮದಾಬಾದ್​ನಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಮೊಟೇರಾ ಕ್ರೀಡಾಂಗಣದಲ್ಲಿ “ನಮಸ್ತೆ ಟ್ರಂಪ್​” ಕಾರ್ಯಕ್ರಮ ನಡೆಯಲಿದ್ದು, ಪ್ರಧಾನಿ ಮೋದಿ ಮತ್ತು ಟ್ರಂಪ್ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.​(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − eleven =
Remember me
