ಜೈಪುರ: ಸಚಿನ್​ ಪೈಲಟ್​ ಅವರನ್ನು ರಾಜಸ್ಥಾನ ಡಿಸಿಎಂ ಸ್ಥಾನ ಮತ್ತು ಪಿಸಿಸಿ ಅಧ್ಯಕ್ಷನ ಸ್ಥಾನದಿಂದ ಕಾಂಗ್ರೆಸ್​ ವಜಾಗೊಳಿಸಿದೆ. ಈ ಬೆನ್ನಲ್ಲೇ ಬಿಜೆಪಿ ಸಚಿನ್​ ಪೈಲಟ್​ ಅವರಿಗೆ ತೆರೆದ ತೋಳಿನ ಆಹ್ವಾನ ನೀಡಿದೆ.
ರಾಜಸ್ಥಾನ ಬಿಜೆಪಿ ನಾಯಕ ಓಂ ಮಾಥುರ್​ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಸಚಿನ್ ಪೈಲಟ್​ ಅವರು ಬಿಜೆಪಿಗೆ ಬರುವುದಾದರೆ ನಾವು ಖುಷಿಯಿಂದಲೇ ಆಹ್ವಾನಿಸುತ್ತೇವೆ ಎಂದು ಹೇಳಿದ್ದಾರೆ.ಇದನ್ನೂ ಓದಿ:ರಾಜಸ್ಥಾನ ರಾಜಕೀಯ: ವಿಶ್ವಾಸಮತ ಯಾಚನೆಗೆ ಆಗ್ರಹಿಸಿದ ಪೈಲಟ್​ ಬೆಂಬಲಿಗರು
ಅಶೋಕ್​ ಗೆಹ್ಲೋಟ್​ ಅವರು ತಮಗೆ ಬಹುಮತ ಇದೆ. ನಮ್ಮ ಸರ್ಕಾರ ಸೇಫ್​ ಎನ್ನುತ್ತಿದ್ದಾರೆ. ಆದರೆ ಅವರು ವಿಶ್ವಾಸಮತ ಯಾಚನೆ ಮಾಡಬೇಕು. ತಮಗಿರುವ ಬಹುಮತವನ್ನು ಸಾಬೀತು ಪಡಿಸಬೇಕು ಎಂದು ಮಾಥುರ್​ ಹೇಳಿದ್ದಾರೆ.ನಮ್ಮ ಪಕ್ಷದ ಬಾಗಿಲು ಸಚಿನ್​ ಪೈಲಟ್​ಗಾಗಿ ತೆರೆದೇ ಇದೆ. ಅವರೂ ಅಂತಲ್ಲ, ಯಾರೇ ಬಿಜೆಪಿ ಸೇರಲು ಇಷ್ಟಪಟ್ಟರೂ ಅವರನ್ನು ಸೇರಿಸಿಕೊಳ್ಳುತ್ತೇವೆ. ಆದರೆ ಅವರು ನಮ್ಮ ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿ ಇರಬೇಕು ಎಂದಿದ್ದಾರೆ.ಇದನ್ನೂ ಓದಿ:ರಾಜಸ್ಥಾನ ರಾಜಕೀಯ: ತುರ್ತುಸಭೆ ಸೇರಿದ ಬಿಜೆಪಿ ನಾಯಕರು
ಸಚಿನ್​ ಪೈಲಟ್​ ಹಾಗೂ ಅಶೋಕ್ ಗೆಹ್ಲೋಟ್​ ನಡುವಿನ ವಿವಾದ ಕಾಂಗ್ರೆಸ್​ನ ಆಂತರಿಕ ವಿಚಾರ. ಆದರೆ ಆ ಪಕ್ಷ ಸಚಿನ್​ ಪೈಲಟ್​ರಂತಹ ನಾಯಕರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ.
ಆದರೆ ಸಚಿನ್​ ಪೈಲಟ್​ ಅವರು ಈಗಾಗಲೇ ತಾವು ಬಿಜೆಪಿಗೆ ಸೇರ್ಪಡೆಯಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.(ಏಜೆನ್ಸೀಸ್​)
ರಾಜಸ್ಥಾನ ಡಿಸಿಎಂ, ಕಾಂಗ್ರೆಸ್​ ಅಧ್ಯಕ್ಷ ಸ್ಥಾನದಿಂದ ಸಚಿನ್​ ಪೈಲಟ್​ಗೆ ಕೊಕ್​; ಕಾಂಗ್ರೆಸ್​ ಘೋಷಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 6 =
Remember me
