ಕಾಂಗ್ರೆಸ್​ನಿಂದ ಬಿಜೆಪಿಗೆ ಬಂದಿರುವ ಜ್ಯೋತಿರಾದಿತ್ಯ ಸಿಂಧಿಯಾ ಎಡವಟ್ಟು ಮಾಡಿದ್ದಾರೆ. ಮಧ್ಯಪ್ರದೇಶ ಉಪಚುನಾವಣೆಯ ಪ್ರಚಾರದ ವೇಳೆ ಕಾಂಗ್ರೆಸ್​ಗೆ ಮತ ಹಾಕಿ ಎಂದು ಹೇಳುವ ಮೂಲಕ ಟ್ರೋಲ್​ಗೆ ಒಳಗಾಗಿದ್ದಾರೆ.
ಡಬ್ರಾದಲ್ಲಿ ಬಿಜೆಪಿ ಅಭ್ಯರ್ಥಿ ಇಮಾರ್ತಿ ದೇವಿ ಪರ ಮತ ಯಾಚನೆ ಮಾಡಿದ ಸಿಂಧಿಯಾ, ಉತ್ಸಾಹದಿಂದ ಭಾಷಣವನ್ನು ಮಾಡುತ್ತಾರೆ. ಆದರೆ ಕೊನೆಯಲ್ಲಿ ಬಾಯ್ತಪ್ಪಿ ಕೈ ಗುರುತಿಗೆ ಮತ ಹಾಕಿ ಎನ್ನುತ್ತಾರೆ. ಆ ವಿಡಿಯೋ ಇದೀಗ ಎಲ್ಲಕಡೆ ವೈರಲ್​ ಆಗಿದೆ.ಇದನ್ನೂ ಓದಿ:ಪಂಜರ ಮುರಿದು ಸಫಾರಿ ಪಾರ್ಕ್​ನಿಂದ ಹುಲಿ ಎಸ್ಕೇಪ್​: ಸ್ಥಳೀಯರಲ್ಲಿ ಹೆಚ್ಚಿದ ಆತಂಕ..!
ಅಷ್ಟೇ ಅಲ್ಲ, ಮಧ್ಯಪ್ರದೇಶ ಕಾಂಗ್ರೆಸ್​ ತನ್ನ ಟ್ವಿಟರ್​ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಿಕೊಂಡು, ಖಂಡಿತ ನವೆಂಬರ್ 3ರಂದು ಕಾಂಗ್ರೆಸ್​ಗೆ ಮತ ಹಾಕುವುದಾಗಿ ಮಧ್ಯಪ್ರದೇಶದ ಜನರು ನಿಮಗೆ ಭರವಸೆ ಕೊಡುತ್ತಾರೆ ಎಂದು ಕಾಲೆಳೆದಿದೆ.  ಆದರೆ ನಂತರ ಸಿಂಧಿಯಾ ತಮ್ಮ ತಪ್ಪನ್ನು ಸರಿಪಡಿಸಿಕೊಂಡಿದ್ದಾರೆ. ಕೈ ಗುರುತನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ಕಮಲಕ್ಕೆ ಮತ ಹಾಕಿ ಎಂದು ಹೇಳಿದ್ದಾರೆ.
ಮಧ್ಯಪ್ರದೇಶದ 28 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್​ 3ರಂದು ಉಪಚುನಾವಣೆ ನಡೆಯಲಿದ್ದು, ರಾಜಕೀಯ ಪಕ್ಷಗಳ ಪ್ರಚಾರವೂ ಭರ್ಜರಿಯಾಗಿ ಸಾಗುತ್ತಿದೆ.
सिंधिया जी,मध्यप्रदेश की जनता विश्वास दिलाती है कि तीन तारीख़ को हाथ के पंजे वाला बटन ही दबेगा।pic.twitter.com/dGJWGxdXad
— MP Congress (@INCMP)October 31, 2020

ತಾಯಿಯ ಅಳುವ ಧ್ವನಿ ಕೇಳಿ ರಕ್ಷಣೆಗೆ ಓಡೋಡಿ ಬಂದ ಮಗಳ ಬರ್ಬರ ಹತ್ಯೆ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − sixteen =
Remember me
