ಬುಲಂದ್​ಶಹರ್​:ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಧ್ಯಪ್ರದೇಶದ ಹಿರಿಯ ಬಿಜೆಪಿ ನಾಯಕ ಕೈಲಾಶ್​ ಸಾರಂಗ್ (85) ಶನಿವಾರ ರಾತ್ರಿ ಮುಂಬೈ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕೈಲಾಶ್​ ಅವರನ್ನು ಮುಂಬೈನ ಆಸ್ಪತ್ರೆಯೊಂದಕ್ಕೆ 12 ದಿನಗಳ ಹಿಂದೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗಿದೇ ನಿನ್ನೆ ರಾತ್ರಿ ವಿಧಿವಶರಾಗಿದ್ದಾರೆ. ಮೃತರು ಇಬ್ಬರು ಗಂಡು ಮತ್ತು ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಕೈಲಾಶ್​ ಅವರ ಮಗ ವಿಶ್ವಾಸ್​ ಸಾರಂಗ್​ ಮಧ್ಯಪ್ರದೇಶ ಸರ್ಕಾರ ಸಚಿವರಾಗಿದ್ದಾರೆ.
ಇದನ್ನೂ ಓದಿ:ಕೆಪಿಎಸ್ಸಿಯನ್ನೇ ರದ್ದುಪಡಿಸುವುದಕ್ಕೆ ಇದು ಸಕಾಲ: ಅಕ್ರಮಗಳ ಬಗ್ಗೆ ಹೈಕೋರ್ಟ್ ತೀವ್ರ ಅಸಮಾಧಾನ
ಕೈಲಾಶ್​ ಅವರ ಸಾವಿಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದು, ಮಧ್ಯಪ್ರದೇಶದಲ್ಲಿ ಬಿಜೆಪಿ ಬಲವರ್ಧನೆಗೆ ಕೈಲಾಶ್​ ಸಾರಂಗ್​ ಜೀ ಅವರು ಅವಿರತ ಶ್ರಮ ವಹಿಸಿದ್ದರು. ಮಧ್ಯಪ್ರದೇಶದ ಏಳಿಗೆಗೆ ಸಹಾನುಭೂತಿ ಮತ್ತು ಕಠಿಣ ಕೆಲಸ ಮಾಡುವ ನಾಯಕರಾಗಿಯೇ ನಮ್ಮ ನಡುವೆ ಅವರು ಉಳಿಯಲ್ಲಿದ್ದಾರೆ ಎಂದು ಪ್ರಧಾನಿ ಟ್ವೀಟ್​ ಮಾಡಿದ್ದಾರೆ.
Shri Kailash Sarang Ji made stupendous efforts to strengthen the BJP across Madhya Pradesh. He will be remembered as a compassionate and hardworking leader, committed to MP’s progress. Anguished by his demise. Condolences to his family and well-wishers. Om Shanti.
— Narendra Modi (@narendramodi)November 14, 2020

ಕುಟುಂಬ ಹಾಗೂ ಬಂಧುಬಳಗದವರಿಗೆ ಓಂ ಶಾಂತಿ ಎನ್ನುವ ಮೂಲಕ ಪ್ರಧಾನಿ ಮೋದಿ ಸಾಂತ್ವಾನ ಹೇಳಿದ್ದಾರೆ.(ಏಜೆನ್ಸೀಸ್​)
ಮದುವೆಯಾದ ಹತ್ತೇ ದಿನದಲ್ಲಿ ಹಬ್ಬದ ದಿವಸದಂದೇ ದುರಂತ ಸಾವಿಗೀಡಾದ ನವದಂಪತಿ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + fourteen =
Remember me
