ಪುದುಚೇರಿ :ಬಿಜೆಪಿ ಶಾಸಕ ‘ಎಂಬಲಂ’ ಆರ್​.ಸೆಲ್ವಂ ಅವರನ್ನು ಪುದುಚೇರಿ ವಿಧಾನಸಭೆಯ ಸ್ಪೀಕರ್ ಆಗಿ ಇಂದು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ವಿಧಾನಸಭಾ ಕಲಾಪ ಆರಂಭವಾದಂತೆ, ಪ್ರೊಟೆಮ್ ಸ್ಪೀಕರ್​ ಕೆ.ಲಕ್ಷ್ಮೀನಾರಾಯಣನ್ ಅವರು ಸೆಲ್ವಂ ಅವರನ್ನು ಸಭಾಪತಿಯಾಗಿ ಘೋಷಿಸಿದರು.
ಪುದುಚೇರಿ ಕೇಂದ್ರಾಡಳಿತ ಪ್ರದೇಶದ 21ನೇ ಸ್ಪೀಕರ್ ಆಗಿರುವ ಸೆಲ್ವಂ ಅವರನ್ನು ಮುಖ್ಯಮಂತ್ರಿ ಎನ್​.ರಂಗಸ್ವಾಮಿ ಮತ್ತು ವಿಪಕ್ಷ ನಾಯಕ ಆರ್​.ಶಿವ ಆಸನದೆಡೆಗೆ ಕರೆದೊಯ್ದರು. ಹಿರಿಯ ಶಾಸಕ ಸೆಲ್ವಂ ಅವರು ಮನವೇಲಿ ಕ್ಷೇತ್ರದ ಶಾಸಕರಾಗಿದ್ದಾರೆ. ಸ್ಪೀಕರ್ ಚುನಾವಣೆಗೆ ಬೇರೆ ಯಾರ ನಾಮಪತ್ರವೂ ಸಲ್ಲಿಕೆಯಾಗಿರಲಿಲ್ಲ ಎನ್ನಲಾಗಿದೆ.
ಇದನ್ನೂ ಓದಿ:ಕೇಂದ್ರ ಸರ್ಕಾರದ ಜವಳಿ ಸಚಿವಾಲಯದಲ್ಲಿ ವಿವಿಧ ಹುದ್ದೆಗಳಿಗೆ ಆಹ್ವಾನ- ಕೆಲವೇ ದಿನಗಳು ಬಾಕಿ
ಪುದುಚೇರಿಯಲ್ಲಿ ಎಐಎನ್​ಆರ್​ಸಿ ಮತ್ತು ಬಿಜೆಪಿ ಒಕ್ಕೂಟವಾಗಿರುವ ಎನ್​ಡಿಎ ಸರ್ಕಾರವಿದೆ. ಎಐಎನ್​ಆರ್​ಸಿ ನಾಯಕ ಎನ್​​.ರಂಗಸ್ವಾಮಿ ಅವರು ಮೇ 7 ರಂದು ಸಿಎಂ ಆಗಿ ಅಧಿಕಾರ ಸ್ವೀಕರಿಸಿದರೆ, ಉಳಿದ ಮಂತ್ರಿ ಸಂಪುಟದ ರಚನೆ ಇನ್ನೂ ಬಾಕಿ ಇದೆ.(ಏಜೆನ್ಸೀಸ್)
ಕ್ರೆಡಿಟ್ ಕಾರ್ಡ್ ಹೆಸರಲ್ಲಿ ಜನರಿಗೆ ಟೋಪಿ! ನಕಲಿ ಕಾಲ್ ಸೆಂಟರ್ ಪತ್ತೆ!

ಅಧಿಕಾರಿಗಳಿಗೆ ಐಷಾರಾಮಿ​ ಕಾರು; ಸರ್ಕಾರದ ಮೇಲೆ ವಿಪಕ್ಷಗಳು ಗರಂ!

ಮದ್ಯ ಸೇವಿಸಲು ಹಣ ಕೊಡಲಿಲ್ಲ ಎಂದು ಬಡ ಹೆಂಡತಿಯ ಹತ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 11 =
Remember me
