ಲಖನೌ:ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯನ್ನು ಸಂಸತ್ತಿನಲ್ಲಿ ಶೀಘ್ರದಲ್ಲೇ ಮಂಡಿಸಲಿದೆ ಎನ್ನಲಾಗಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಮುಸ್ಲಿಮರ ಬಗ್ಗೆ ಬಿಜಪಿಯ ಚಿಂತನೆಯೂ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ವಿರೋಧಿಯಾಗಿದೆ. ಮುಸ್ಲಿಂ ಸಹೋದರರ ಹಕ್ಕುಗಳನ್ನು ಕಸಿದುಕೊಳ್ಳುವುದನ್ನು ಬಿಟ್ಟರೆ ಬಿಜೆಪಿಗೆ ಯಾವುದೇ ಕೆಲಸವಿಲ್ಲ ಎಂದು ಸೋಮವಾರ (ಆಗಸ್ಟ್​​ 5) ಆರೋಪಿಸಿದ್ದಾರೆ.
ಇದನ್ನು ಓದಿ:ವಕ್ಫ್ ಕಾಯ್ದೆ ತಿದ್ದುಪಡಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ; ಅಸಾದುದ್ದೀನ್ ಓವೈಸಿ
ಬಿಜೆಪಿಯು ಚುನಾವಣೆಗೂ ಮುನ್ನ ಷಡ್ಯಂತ್ರ ಪ್ರಾರಂಭಿಸಲು ಬಯಸಿದೆ. ಮೊದಲ ದಿನದಿಂದಲೂ ಅವರ ಗುರಿ ಸಮಾಜವಾದಿಗಳನ್ನು ದೂಷಿಸುವುದು ಮತ್ತು ವಿಶೇಷವಾಗಿ ಮುಸ್ಲಿಮರ ಬಗ್ಗೆ ಅವರ ಚಿಂತನೆಯು ಪ್ರಜಾಪ್ರಭುತ್ವ ವಿರೋಧಿ ಮತ್ತು ಸಂವಿಧಾನ ವಿರೋಧಿಯಾಗಿದೆ. ಒಬ್ಬ ‘ಯೋಗಿ’ ಪ್ರಜಾಪ್ರಭುತ್ವ ಅಥವಾ ಸಂವಿಧಾನದಲ್ಲಿ ನಂಬಿಕೆಯಿಲ್ಲದಿದ್ದರೆ, ಅವರು ‘ಯೋಗಿ’ ಆಗಲು ಸಾಧ್ಯವಿಲ್ಲ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್​ ವಿರುದ್ಧ ವಾಗ್ದಾಳಿ ನಡೆಸಿದರು.
ನಾನು ನಿಮಗೆ 3 ಘಟನೆಗಳ ಉದಾಹರಣೆಗಳನ್ನು ನೀಡಲು ಬಯಸುತ್ತೇನೆ ಎಂದು ಹೇಳಿದ ಅಖಿಲೇಶ್​ ಯಾದವ್​​, ಹತ್ರಾಸ್​​ ಕಾಲ್ತುಳಿತ, ಲಕ್ನೋ ಕಿರುಕುಳ ಪ್ರಕರಣ, ಅಯೋಧ್ಯೆ ಅತ್ಯಾಚಾರ ಪ್ರಕರಣದ ಬಗ್ಗೆ ಮಾತನಾಡಿದರು. ಮೊದಲ ಘಟನೆ, ಬಿಜೆಪಿ ಶಾಸಕರು ಹತ್ರಾಸ್​​​ನಲ್ಲಿ ಪ್ರವಚನ ಆಯೋಜಿಸುವಂತೆ ಪತ್ರ ಬರೆದಿದ್ದರೂ ಆಡಳಿತ ಅಧಿಕಾರಿಗಳು ಅಗತ್ಯ ಕ್ರಮಕೈಗೊಂಡಿಲ್ಲ. ಇದರಿಂದಾಗಿ ಕಾಲ್ತುಳಿತದಲ್ಲಿ 100ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಎಷ್ಟೋ ಜನ ಕೈಕಾಲು ಮುರಿದುಕೊಂಡರು ಅವರಿಗೆ ಈ ಸರ್ಕಾರದಿಂದ ಸಹಾಯ ಸಿಕ್ಕಿಲ್ಲ.
ಎರಡನೆಯದಾಗಿ, ಬಿಜೆಪಿ ಮುಖ್ಯಮಂತ್ರಿ ಉತ್ತರಪ್ರದೇಶ ಪೊಲೀಸರು ತಮ್ಮ ಕಾರ್ಯಕರ್ತರಾಗಬೇಕೆಂದು ಬಯಸುತ್ತಾರೆ. ಲಕ್ನೋದ ಗೋಮತಿ ನಗರದಲ್ಲಿ ಕೆಲ ಯುವಕರು ಬೈಕ್‌ನಲ್ಲಿ ಹೋಗುತ್ತಿದ್ದ ಪುರುಷ ಮತ್ತು ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಪೊಲೀಸರು ಅನೇಕ ಆರೋಪಿಗಳನ್ನು ಬಂಧಿಸಿದರು ಆದರೆ ಮುಖ್ಯಮಂತ್ರಿ ವಿಧಾನಸಭೆಯಲ್ಲಿ ಯಾದವ್ ಮತ್ತು ಮುಸ್ಲಿಂ ಯುವಕರ ಹೆಸರನ್ನು ಮಾತ್ರ ತೆಗೆದುಕೊಂಡರು. ಸಿಕ್ಕಿಬಿದ್ದ ಯಾದವ ಹುಡುಗ ಆ ಘಟನೆಯಲ್ಲಿ ಭಾಗಿಯಾಗಿಲ್ಲ ಎಂದು ಹೇಳಲಾಗುತ್ತಿದೆ. ಟೀ ಕುಡಿಯಲು ಹೋಗಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ. ಕಾನೂನು ಉಲ್ಲಂಘಿಸುವವರು ಹಾಗೂ ಬಿಜೆಪಿ ಕಾರ್ಯಕರ್ತರಂತೆ ಕೆಲಸ ಮಾಡುವವರ ವಿರುದ್ಧ ಎಸ್‌ಪಿ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಕ್ರಮಕೈಗೊಳ್ಳುವುದು ಎಂದು ಹೇಳಿದರು.
ಅಯೋಧ್ಯೆ ಅತ್ಯಾಚಾರ ಪ್ರಕರಣ, ಡಿಎನ್ಎ ಪರೀಕ್ಷೆ ನಡೆಸಬೇಕೆಂಬ ಮನವಿ ಇದೆ. ಆದರೆ ಯುಪಿ ಸರ್ಕಾರವು 2023ರಲ್ಲಿ ಏಳು ವರ್ಷಗಳಿಗಿಂತ ಹೆಚ್ಚು ಶಿಕ್ಷೆಯ ನಿಬಂಧನೆ ಇದ್ದರೆ, ನಂತರ ಡಿಎನ್ಎ ಪರೀಕ್ಷೆಯನ್ನು ನಡೆಸಬೇಕು ಎಂದು ಕಾನೂನಿಗೆ ತಿದ್ದುಪಡಿ ಮಾಡಿದೆ ಎಂದು ಹೇಳಿದರು. ಮುಸ್ಲಿಂ ಸಹೋದರರ ಹಕ್ಕುಗಳನ್ನು ಕಸಿದುಕೊಳ್ಳುವುದನ್ನು ಬಿಟ್ಟರೆ ಬಿಜೆಪಿಗೆ ಯಾವುದೇ ಕೆಲಸವಿಲ್ಲ ಎಂದು ಆರೋಪಿಸಿದರು.(ಏಜೆನ್ಸೀಸ್​​)

#WATCH| On the Ayodhya gangrape case, Samajwadi Party (SP) chief Akhilesh Yadav says, "BJP wants to start conspiracy before the elections. Their aim from the very first day has been to defame the socialists and especially their thinking about Muslims is undemocratic and…pic.twitter.com/tHR38qzjne
2029ರ ಚುನಾವಣೆಯಲ್ಲೂ ಗೆದ್ದು ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ; ಅಮಿತ್​ ಷಾ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 6 =
Remember me
