ತಿರುವನಂತಪುರ:ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಭಾಗವಹಿಸಲಿದ್ದಾರೆ ಎಂಬ ಒಂದೇ ಕಾರಣಕ್ಕೆ ಅವರು ಉಪಸ್ಥಿತರಿರುವ ಕಾರ್ಯಕ್ರಮಕ್ಕೆ ಆಗಮಿಸುವವರು ಯಾರೂ ಕಪ್ಪು ಬಣ್ಣದ ಉಡುಪು, ಕಪ್ಪು ಮಾಸ್ಕ್ ಧರಿಸುವಂತಿಲ್ಲ ಎಂದು ಸೂಚನೆ ನೀಡಲಾಗಿದೆ. ಮಾತ್ರಲ್ಲ, ಕಪ್ಪು ಬಣ್ಣದ ಕೊಡೆ ಕೂಡ ತರುವಂತಿಲ್ಲ ಎಂದು ನಿರ್ದೇಶನ ನೀಡಲಾಗಿದೆ.
ಅಂದಹಾಗೆ ಇದೊಂಥರ ‘ಕಾಗೆ-ಬಂಗಾರ’ ಪ್ರಕರಣ. ಏಕೆಂದರೆ ಈ ಕಪ್ಪು ಬಣ್ಣ ನಿಷೇಧಕ್ಕೂ ಬಂಗಾರಕ್ಕೂ ಸಂಬಂಧವಿದೆ. ಅಂದರೆ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿರುವ ಸಪ್ನಾ ಸುರೇಶ್​, ಸಿಎಂ ಪಿಣರಾಯಿ ವಿಜಯನ್ ಪುತ್ರಿ ಮತ್ತು ಪತ್ನಿ ಸೇರಿ ಕುಟುಂಬಸ್ಥರ ಪಾತ್ರವಿದೆ ಎಂದು ಆರೋಪಿಸಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.
ಇಂದು ಕೇರಳದ ಕೊಝಿಕೋಡ್​ನ ಕೆಥೊಲಿಕ್ ಚರ್ಚ್​​ನಲ್ಲಿನ ಶತಮಾನೋತ್ಸವ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಆಗಮಿಸುವವರಿಗೆ ಚರ್ಚ್​ನಿಂದ ಈ ಸೂಚನೆ ನೀಡಲಾಗಿದೆ. ಸಪ್ನಾ ಸುರೇಶ್ ಪ್ರಕರಣದಲ್ಲಿ ವಿಜಯನ್ ವಿರುದ್ಧ ತೀವ್ರ ಪ್ರತಿಭಟನೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆ ಈ ಕ್ರಮಕೈಗೊಂಡಿದೆ ಎನ್ನಲಾಗಿದೆ. ಅದಕ್ಕೆ ಅನುಸಾರವಾಗಿ ಚರ್ಚ್​ನ ವಾಟ್ಸ್​ಆ್ಯಪ್​ ಗ್ರೂಪ್​ಗಳಲ್ಲಿ ಈ ಸೂಚನೆ ಹರಿದಾಡಿದೆ. ಕೊಚ್ಚಿಯಲ್ಲಿ ಶನಿವಾರ ಸಿಎಂ ಭಾಗವಹಿಸಿದ್ದ ಕಾರ್ಯಕ್ರಮದಲ್ಲೂ ಕಪ್ಪು ಬಟ್ಟೆ ಧರಿಸಿ ಬಂದಿದ್ದವರನ್ನು ಪೊಲೀಸರು ತಡೆದ ಪ್ರಸಂಗ ನಡೆದಿತ್ತು.
ರಾಜ್ಯಸಭೆ ‘ಅಡ್ಡ’ಪರಿಣಾಮ: ಶಾಸಕರ ತಿಥಿ ಪೋಸ್ಟರ್​ಗೆ ಪ್ರತಿಯಾಗಿ ಮಾಜಿ ಸಿಎಂ ಕೈಲಾಸ ಸಮಾರಾಧನೆ ಪೋಸ್ಟರ್!

ಪರಿಷತ್ ಚುನಾವಣೆ; ಶಿಕ್ಷಕರಿಗೆ ಹಂಚಲು ಕಾಂಗ್ರೆಸ್​ನವರು ಕೊಂಡೊಯ್ಯುತ್ತಿದ್ದ ಹಣ ವಶ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 12 =
Remember me
