ನವದೆಹಲಿ:ಕರೊನಾ ಸೋಂಕಿನ ತೀವ್ರತೆ ಕಡಿಮೆಯಾಗುತ್ತಿದ್ದರೂ, ಕಳೆದ ಮೂರು ವಾರಗಳಲ್ಲಿ ಕಪ್ಪು ಶಿಲೀಂಧ್ರ ಕೇಸ್​ಗಳ ಸಂಖ್ಯೆ ಶೇಕಡ 150 ಹೆಚ್ಚಳವಾಗಿದೆ. 31,216 ಮಂದಿ ಬ್ಲ್ಯಾಕ್​ ಫಂಗಸ್​​ ​ ಕಾಣಿಸಿಕೊಂಡಿದೆ. 2,109 ಜನರು ಮರಣಿಸಿರುವುದು ಕಳವಳ ಮೂಡಿಸಿದೆ.
ಸೋಂಕು ಹೆಚ್ಚಾಗಿರುವ ಕಾರಣ ಇದರ ಚಿಕಿತ್ಸೆಗೆ ಅಗತ್ಯವಿರುವ ಆ್ಯಂೋಟೆರಿಸಿನ್​ ಬಿ ಕೊರತೆ ಕಾಣಿಸಿಕೊಂಡಿದೆ. ಕಪ್ಪು ಶಿಲೀಂಧ್ರ ಸೋಂಕಿಗೆ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 7.057 ಜನ ಬಳಲಿದ್ದು, 609 ಜನ ಪ್ರಾಣ ಕಳೆದುಕೊಂಡಿದ್ದಾರೆ. ಗುಜರಾತ್​ನಲ್ಲಿ 5,418 ಕೇಸ್​, 323 ಸಾವು, ರಾಜಸ್ಥಾನದಲ್ಲಿ 2,976 ಕೇಸ್​ 150ಕ್ಕೂ ಹೆಚ್ಚು ಸಾವು ಸಂಭವಿಸಿದೆ. ಉತ್ತರ ಪ್ರದೇಶದಲ್ಲಿ 1,744 ಕೇಸ್​, 142 ಸಾವು ಸಂಭವಿಸಿದೆ. ದೆಹಲಿಯಲ್ಲಿ 1,200 ಕೇಸ್​ 125 ಸಾವು ಸಂಭವಿಸಿದೆ.
ಅಮೆರಿಕದಲ್ಲಿ ಕೊವ್ಯಾಕ್ಸಿನ್​ಗೆ ಅನುಮತಿ ಇಲ್ಲ: ಅಮೆರಿಕ ದಲ್ಲಿ ಕೊವ್ಯಾಕ್ಸಿನ್​ ತುರ್ತುಬಳಕೆಗೆ ಅನುಮತಿ ಸಿಕ್ಕಿಲ್ಲ. ಹೈದರಾಬಾದ್​ ಮೂಲದ ಭಾರತ್​ ಬಯೋಟೆಕ್​ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್​ ಬಳಕೆಗೆ ಬಯಾಲಾಜಿಕ್ಸ್​ ಲೈಸೆನ್ಸ್​ ಅಪ್ಲಿಕೇಶನ್​ (ಬಿಎಲ್​ಎ) ಸಲ್ಲಿಸಿ ಅನುಮತಿ ಪಡೆಯುವಂತೆ ಅಮೆರಿಕದ ುಡ್​ ಆ್ಯಂಡ್​ ಡ್ರಗ್​ ಅಡ್ಮಿನಿಸ್ಟ್ರೆಶನ್​ ಸೂಚಿಸಿದೆ. ಅಮೆರಿಕದಲ್ಲಿ ಕೊವ್ಯಾಕ್ಸಿನ್​ ಅನ್ನು ಅಲ್ಲಿನ ಪಾಲುದಾರ ಕಂಪನಿ ಒಕುಜೆನ್​ ಮಾರ್ಕೆಟಿಂಗ್​ ಮಾಡುತ್ತಿದ್ದು ಈಗ ಬಿಎಲ್​ಎ ಮೂಲಕ ಪರವಾನಗಿ ಪಡೆಯಲು ಪ್ರಯತ್ನ ನಡೆಸಬೇಕಾಗಿದೆ ಎಂದು ಮೂಲಗಳು ತಿಳಿಸಿವೆ.
100 ಕೋಟಿ ಲಸಿಕೆ ನೀಡಲಿವೆ ಜಿ&7 ರಾಷ್ಟ್ರಗಳುಜಗತ್ತಿಗೆ 100 ಕೋಟಿ ಲಸಿಕೆ ಪೂರೈಸುವುದಕ್ಕೆ ಜಿ&7 ರಾಷ್ಟ್ರಗಳು ಬದ್ಧತೆ ವ್ಯಕ್ತಪಡಿಸಿವೆ. ಇದರಲ್ಲಿ 50 ಕೋಟಿ ಲಸಿಕೆಯನ್ನು ಅಮೆರಿಕ, 10 ಕೋಟಿ ಲಸಿಕೆಯನ್ನು ಬ್ರಿಟನ್​ ಪೂರೈಸಲಿದೆ. ಇನ್ನು ಉಳಿದ ಲಸಿಕೆಯನ್ನು ಕೆನಡಾ, ್ರಾನ್ಸ್​, ಜರ್ಮನಿ, ಇಟಲಿ ಮತ್ತು ಜಪಾನ್​ಗಳು ಪೂರೈಸಲಿವೆ.
| ಡಾ.ಎನ್​.ಕೆ.ಅರೋರಾ ನ್ಯಾಷನಲ್​ ಟೆಕ್ನಿಕಲ್​ ಅಡ್ವೆ$ಸರಿ ಗ್ರೂಪ್​ ಆನ್​ ಇಮ್ಯೂನೈಸೇಷನ್​ ಇನ್​ ಇಂಡಿಯಾದ ಮುಖ್ಯಸ್ಥ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − eight =
Remember me
