ಚಂಡೀಗಢ :ಪಂಜಾಬಿನಲ್ಲಿ 32 ಕರೊನೇತರ ರೋಗಿಗಳಲ್ಲಿ ಬ್ಲ್ಯಾಕ್ ಫಂಗಸ್​ ಖಾಯಿಲೆ ಕಂಡುಬಂದಿದೆ. ಈ ಜನರಿಗೆ ಅನ್ಯ ರೋಗಗಳ ಚಿಕಿತ್ಸೆಗಾಗಿ ಸ್ಟಿರಾಯ್ಡ್​ಗಳನ್ನು ನೀಡಲಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.
ರಾಜ್ಯದಲ್ಲಿ 158 ಮ್ಯೂಕರ್​ಮೈಕೋಸಿಸ್(ಬ್ಲ್ಯಾಕ್​ ಫಂಗಸ್​) ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ 32 ರೋಗಿಗಳಿಗೆ ಕರೊನಾ ಸೋಂಕಿನ ಇತಿಹಾಸವಿಲ್ಲ. ಇದು ಕರೊನಾದಿಂದಾಗಿ ಈ ಖಾಯಿಲೆ ಉಂಟಾಗುತ್ತಿದೆ ಎಂಬ ಅಭಿಪ್ರಾಯಕ್ಕೆ ವಿರುದ್ಧವಾಗಿದ್ದು, ಅತಿಯಾದ ಸ್ಟಿರಾಯ್ಡ್​ ಬಳಕೆಯೇ ಮುಖ್ಯ ಕಾರಣ ಎಂಬುದಕ್ಕೆ ಪುಷ್ಟಿ ನೀಡುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ಇದನ್ನೂ ಓದಿ:ಕೋವಿಡ್​ ಸೋಂಕಿತರ ಕುಟುಂಬಸ್ಥರಿಗೆ ಸ್ಥಳೀಯರ ಕಿರುಕುಳ.. ಬೆಂಕಿ ಹಚ್ಚಿಕೊಂಡು ಸಾಯ್ತೀವಿ… ಕಣ್ಣೀರಿಟ್ಟ ಮಹಿಳೆಯರು
ರೋಗನಿರೋಧಕ ಶಕ್ತಿಯು ಕಡಿಮೆಯಾಗಿರುವ ಯಾವುದೇ ವ್ಯಕ್ತಿಗೆ ಬ್ಲ್ಯಾಕ್​ ಫಂಗಸ್​ನ ಸೋಂಕು ತಗುಲಬಹುದು ಎಂದು ನೋಡಲ್ ಅಧಿಕಾರಿ ಡಾ. ಗಗನ್​ದೀಪ್​ ಸಿಂಗ್ ಹೇಳಿದ್ದಾರೆ. “ಬ್ಲ್ಯಾಕ್ ಫಂಗಸ್​ ಸಾಂಕ್ರಾಮಿಕವಲ್ಲ ಮತ್ತು ಮುಂಚಿನ ಹಂತಗಳಲ್ಲಿ ವರದಿಯಾಗಿ ರೋಗಿಗಳು ಚಿಕಿತ್ಸೆ ಪಡೆಯಲಾರಂಭಿಸಿದರೆ ಅದನ್ನು ಗುಣಪಡಿಸಬಹುದು. ಯಾವುದೇ ರೋಗಕ್ಕಾಗಿ ಅತಿಯಾದ ಸ್ಟಿರಾಯ್ಡ್​ ಡೋಸ್​ಗಳನ್ನು ಪಡೆದಿರುವ ವ್ಯಕ್ತಿಗಳು ಈ ಫಂಗಸ್​ಗೆ ತುತ್ತಾಗಬಹುದು” ಎಂದಿದ್ದಾರೆ.
ಪಂಜಾಬ್‌ನ ಕೋವಿಡ್ ಎಕ್ಸ್‌ಪರ್ಟ್ ತಂಡದ ಮುಖ್ಯಸ್ಥ ಡಾ.ಕೆ.ಕೆ.ತಲ್ವಾರ್ ಅವರು ಕೋವಿಡ್ ಚಿಕಿತ್ಸೆಯಲ್ಲಿ ಅತಿಯಾದ ಸ್ಟೀರಾಯ್ಡ್‌ಗಳ ಬಳಕೆಯು ಸಮಸ್ಯೆ ಉಂಟುಮಾಡುತ್ತಿರುವುದರಿಂದ ರಾಜ್ಯದಲ್ಲಿ ಪರ್ಯಾಯ ಚಿಕಿತ್ಸೆಯ ಪ್ರಯತ್ನಗಳು ನಡೆಯುತ್ತಿವೆ ಎಂದಿದ್ದಾರೆ.(ಏಜೆನ್ಸೀಸ್)
ಮಾಸ್ಕ್​ ಧರಿಸದೆ ಮುಂಬೈ ಜನ ಎಷ್ಟು ಕೋಟಿ ದಂಡ ಕಟ್ಟಿದ್ದಾರೆ ಗೊತ್ತ ?!

ಮಾಂಸ ಕಡಿಯುವ ಕತ್ತಿಯಿಂದ ಅಣ್ಣ ಅತ್ತಿಗೆಯನ್ನು ಕೊಚ್ಚಿದ; ಪುಟ್ಟ ಕಂದಮ್ಮನನ್ನೂ ಬಿಡಲಿಲ್ಲ…

ಕರೊನಾ ಕಾಲದಲ್ಲಿ ಮನೆಗಳಲ್ಲೇ ಗಟ್ಟಿಮೇಳ ! ತುಮಕೂರು ಜಿಲ್ಲೆಯಲ್ಲಿ 2 ದಿನಗಳಲ್ಲಿ 500 ಮದುವೆ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 14 =
Remember me
