ಹೈದಾರಾಬಾದ್​:ಯುವತಿಯರು ಹಾಗೂ ವಿವಾಹಿತ ಮಹಿಳೆಯರು ಸ್ನಾನ ಮಾಡುವಾಗ ಕದ್ದು ಫೋಟೋ ಅಥವಾ ವಿಡಿಯೋ ರೆಕಾರ್ಡ್​ ಮಾಡಿಕೊಂಡು ಬ್ಲ್ಯಾಕ್​ಮೇಲ್​ ಮಾಡುತ್ತಿದ್ದ ಯುವಕನೊಬ್ಬ​ ಸಿಕ್ಕಿಬಿದ್ದಿರುವ ಘಟನೆ ತೆಲಂಗಾಣದ ವಿಕಾರಾಬದ್ ಜಿಲ್ಲೆಯ ಕಲ್ಕಚರ್ಲಾ ಮಂಡಲದ ಬುಡಕಟ್ಟು ಪ್ರದೇಶದಲ್ಲಿ ನಡೆದಿದೆ.
ಆರೋಪಿ ಶ್ರೀನಿವಾಸ್​ ಎಂಬಾತ ಪರಿಚಯವಿದ್ದ ತನ್ನದೇ ಊರಿನ ಮಹಿಳೆಯರು ಹಾಗೂ ಯುವತಿಯರ ಬೆತ್ತಲೆ ದೃಶ್ಯಗಳನ್ನು ಕದ್ದು ಫೋಟೋ ಹಾಗೂ ವಿಡಿಯೋ ಮಾಡಿಕೊಳ್ಳುತ್ತಿದ್ದ. ಬಳಿಕ ಅದನ್ನು ಸ್ನೇಹಿತರಿಗೆ ತೋರಿಸುತ್ತಿದ್ದ. ಅಲ್ಲದೆ, ಕೆಲವರನ್ನು ಬ್ಲ್ಯಾಕ್​ಮೇಲ್​ ಮಾಡಿ ದುಷ್ಕೃತ್ಯ ಎಸಗಿರುವುದು ಸಹ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ರಾಜ್ಯದ ಐಟಿಐಗಳಿಗೆ ಇನ್ನು ಟಾಟಾ ಶಕ್ತಿ; ಟಾಟಾ ಟೆಕ್ನಾಲಜೀಸ್​ನಿಂದ ಉನ್ನತೀಕರಣ
ಹೀಗಿರುವಾಗ ಒಮ್ಮೆ ಸಂತ್ರಸ್ತ ಮಹಿಳೆಯೊಬ್ಬಳಿಗೆ ಕದ್ದು ಫೋಟೋ ತೆಗೆದುಕೊಂಡಿರುವ ವಿಚಾರ ತಿಳಿದು ಆಕೆಯ ಕುಟುಂಬ ಶ್ರೀನಿವಾಸ್​ಗೆ ಚೆನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸುತ್ತಾರೆ. ಪ್ರಕರಣ ದಾಖಲಿಸಿಕೊಳ್ಳುವ ಪೊಲೀಸರು ಶ್ರೀನಿವಾಸ್​ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೂ ಕಳುಹಿಸುತ್ತಾರೆ.
ಈ ಘಟನೆ ಮೂರು ತಿಂಗಳ ಹಿಂದೆ ನಡೆದಿತ್ತು. ಜೈಲಿನಲ್ಲಿದ್ದ ಶ್ರೀನಿವಾಸ್​ ಜಾಮೀನಿನ ಮೇಲೆ ಹೊರಬಂದಿದ್ದಾನೆ. ಇದೀಗ ಶಿಕ್ಷೆ ಅನುಭವಿಸಿದ ಸೇಡಿಗೆ ಶ್ರೀನಿವಾಸ್​ ಹಾಗೂ ಸಂತ್ರಸ್ತ ಮಹಿಳೆಯ ಕುಟುಂಬದ ನಡುವೆ ಮತ್ತೆ ಜಗಳ ನಡೆದಿದ್ದು, ಶ್ರೀನಿವಾಸ್​ ಸಂತ್ರಸ್ತೆಯ ಸಹೋದರನ ಮೇಲೆ ಹಲ್ಲೆ ಮಾಡಿ ಗಂಭೀರವಾಗಿ ಗಾಯಗೊಳಿಸಿದ್ದಾರೆ. ಆರೋಪಿ ಶ್ರೀನಿವಾಸ್​ ವಿರುದ್ಧ ಮತ್ತೆ ಕ್ರಮ ತೆಗೆದುಕೊಳ್ಳುವಂತೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.(ಏಜೆನ್ಸೀಸ್​)
ಮೊಬೈಲ್‌‌‌ ಚಟಕ್ಕೆ ಮತ್ತೊಂದು ಬಲಿ: ಆಟವಾಡಬೇಡ ಎಂದುದಕ್ಕೆ ಬಾಲಕ ಆತ್ಮಹತ್ಯೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 4 =
Remember me
