ನವದೆಹಲಿ :ದೆಹಲಿಯಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್​ ಕಾಳದಂಧೆ ಮಾಡುತ್ತಿದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಬಿಸಿನೆಸ್​ಮನ್ ನವನೀತ್ ಕಾಲ್ರಾಗೆ ಜಾಮೀನು ಲಭಿಸಿದೆ. ದೆಹಲಿ ಚೀಫ್​ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್​ ಅರುಣ್ ಕುಮಾರ್ ಗಾರ್ಗ್​ ಅವರು 1 ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್​ನ ಮೇಲೆ ಜಾಮೀನು ನೀಡುವ ಆದೇಶ ಹೊರಡಿಸಿದ್ದಾರೆ.
ದೆಹಲಿ ನಗರದಲ್ಲಿ ಹಲವು ರೆಸ್ಟೊರೆಂಟ್​ಗಳನ್ನು ನಡೆಸುವ ಕಾಲ್ರಾ, ಕರೊನಾ ರೋಗಿಗಳ ಚಿಕಿತ್ಸೆಯಲ್ಲಿ ಬಳಸಲಾಗುವ ಆಕ್ಸಿಜನ್​ ಕಾನ್ಸಂಟ್ರೇಟರ್​ಗಳನ್ನು ಶೇಖರಿಸಿಟ್ಟು, ಅಗತ್ಯವಿರುವವರಿಗೆ ದುಬಾರಿ ಬೆಲೆಗೆ ಮಾರುತ್ತಿದ್ದರು ಎಂದು ಆರೋಪಿಸಲಾಗಿದೆ. ಮೇ ಮೊದಲ ವಾರದಲ್ಲಿ ದೆಹಲಿ ಪೊಲೀಸರು ನಡೆಸಿದ ದಾಳಿಗಳಲ್ಲಿ ಕಾಲ್ರಗೆ ಸೇರಿದ ಮೂರು ರೆಸ್ಟೊರೆಂಟ್​ಗಳಲ್ಲಿ ಒಟ್ಟು 524 ಕಾನ್ಸಂಟ್ರೇಟರ್​ಗಳನ್ನು ಜಪ್ತಿಪಡಿಸಿಕೊಳ್ಳಲಾಗಿತ್ತು.
ಇದನ್ನೂ ಓದಿ:ಕರೊನಾ ದೇವಿಗೆ ಹೋಳಿಗೆ ನೈವೇದ್ಯ: ಕೊಟ್ಟೂರು ತಾಲೂಕಿನ ಸುಟ್ಟಕೋಡಿಹಳ್ಳಿ ಗ್ರಾಮಸ್ಥರಿಂದ ಆಚರಣೆ
ಈ ಪ್ರಕರಣದಲ್ಲಿ ಕಾಲ್ರರಿಂದ ಎಲ್ಲಾ ಸಂಬಂಧಿತ ದಾಖಲಾತಿಗಳನ್ನು ತನಿಖಾಧಿಕಾರಿಯು ಪಡೆದುಕೊಂಡಾಗಿರುವುದರಿಂದ, ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ಸಾಕ್ಷ್ಯಾಧಾರಗಳನ್ನು ವ್ಯತ್ಯಾಸ ಮಾಡುವ ಪ್ರಮೇಯ ಕಾಣುವುದಿಲ್ಲ ಎಂದು ಅಭಿಪ್ರಾಯಪಟ್ಟ ಮ್ಯಾಜಿಸ್ಟ್ರೇಟರು ಜಾಮೀನು ನೀಡಿದ್ದಾರೆ.(ಏಜೆನ್ಸೀಸ್)
ಕೋವಿಡ್ ನಿಯಂತ್ರಣಕ್ಕೆ ಹೊಸ ಅಸ್ತ್ರ : ಲಘುವಿಮಾನದಲ್ಲಿ ಔಷಧ ಸಿಂಪಡಣೆ

ಮತ್ತೆ ಏರಿತು ಪೆಟ್ರೋಲ್-ಡೀಸೆಲ್ ದರ: ಈ ಮಹಾನಗರದಲ್ಲಿ ದಾಟಿತು ಶತಕ!

ಭರವಸೆ ಕಳೆದುಕೊಳ್ಳಬೇಡಿ, ಧೈರ್ಯವಾಗಿರಿ : ‘ಆರ್ಮಿ’ಗೆ ಬಿಟಿಎಸ್​​ ಸಂದೇಶ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 10 =
Remember me
