ಲಖನೌ:ಉತ್ತರ ಪ್ರದೇಶದ ಹತ್ರಾಸ್​ ಕಾಲ್ತುಳಿತದಲ್ಲಿ 121 ಮಂದಿಯ ಸಾವಿಗೆ ಕಾರಣರಾದ ಭೋಲೆ ಬಾಬಾ ಅಲಿಯಾಸ್ ಸೂರಜ್ ಪಾಲ್ ಬಗ್ಗೆ ಹಲವು ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬರುತ್ತಿವೆ. ಆತನ ವಿರುದ್ಧ ಲೈಂಗಿಕ ಕಿರುಕುಳದಂಥ ಗಂಭೀರ ಪ್ರಕರಣಗಳಿದ್ದರೂ, ತನ್ನ ರಕ್ಷಣೆಗೆ ಖಾಸಗಿ ಮಹಿಳಾ ಬ್ಲಾಕ್​ ಕಮಾಂಡೋ ಪಡೆ ನೇಮಿಸಿಕೊಂಡಿರುವುದು ಪೊಲೀಸರ ತನಿಖೆ ವೇಳೆ ಕಂಡುಬಂದಿದ್ದು, ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ:‘ದರ್ಶನ್‌ಗೆ ಪವಿತ್ರಾ ಗೌಡ ಸ್ನೇಹಿತೆ ನಿಜ, ಆದ್ರೆ ಪತ್ನಿಯಲ್ಲ’ ಕಮಿಷನರ್​​ಗೆ ಪತ್ರ ಬರೆದ ವಿಜಯಲಕ್ಷ್ಮೀ
ಈ ಭೋಲೆ ಬಾಬಾ ಆಶ್ರಮ ಉತ್ತರ ಪ್ರದೇಶದ ಮೊಯಿನ್‌ಪುರಿಯಲ್ಲಿದೆ. ಭಕ್ತರಿಂದ ಕೋಟ್ಯಂತರ ರೂಪಾಯಿ ದೇಣಿಗೆಯಿಂದಲೇ ಅರಮನೆಯಂಹ ಆಶ್ರಮ ಕಟ್ಟಡ ನಿರ್ಮಿಸಿಕೊಂಡು ಅದರಲ್ಲಿ ಬಾಬಾ ವಿಲಾಸಿ ಜೀವನ ನಡೆಸುತ್ತಿದ್ದಾರೆ.
ದೇವಮಾನವ ಭೋಲೆ ಬಾಬಾ ವಿರುದ್ಧ ಉತ್ತರ ಪ್ರದೇಶ, ರಾಜಸ್ಥಾನ ಮತ್ತಿತರ ಕಡೆ ಲೈಂಗಿಕ ಕಿರುಕುಳ ಪ್ರಕರಣಗಳು ದಾಖಲಾಗಿವೆ. ಅವರಿಗೆ ಜೀವ ಬೆದರಿಕೆ ಇರುವ ಕಾರಣ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಭೋಲೆ ಬಾಬಾ ಭದ್ರತಾ ವಿಭಾಗ ಮಹಿಳಾ ಕಮಾಂಡೋಗಳನ್ನು ಹೊಂದಿದೆ. ಆಶ್ರಮ ಕಟ್ಟಡದ ಕೊನೆಯಲ್ಲಿ ಏಳು ಸುತ್ತಿನ ಕೋಟೆಯಂತಹ ರಕ್ಷಣೆಯಲ್ಲಿ ಬಾಬಾ ತಂಗುವ ಕೋಣೆ ಇದೆ. ಆಯ್ದ ಏಳು ಮಂದಿ ಮಹಿಳೆಯರಿಗೆ ಮಾತ್ರ ಆ ಕೋಣೆಗೆ ಅವಕಾಶವಿದೆ. ರಾತ್ರಿ 8 ಗಂಟೆಯ ನಂತರ ಬಾಬಾ ಯಾರನ್ನೂ ಭೇಟಿಯಾಗುವುದಿಲ್ಲ.
ಇನ್ನು ಭದ್ರತಾ ಸಿಬ್ಬಂದಿಗೆ ಕೋಡ್ ಇರುತ್ತದೆ. ಭದ್ರತಾ ವಿಷಯಗಳನ್ನು ಕೋಡ್ ಆಧಾರದ ಮೇಲೆ ನೋಡಿಕೊಳ್ಳಲಾಗುತ್ತದೆ. ನಾರಾಯಣಿ ಮಹಿಳಾ ಕಮಾಂಡೋ ಸೇನಾ, ಗರುಡ ಯೋಧ ಮತ್ತು ಹರಿವಾಖ್ ತಂಡಗಳ ಭದ್ರತಾ ಸಿಬ್ಬಂದಿ ಬಾಬಾಗೆ 24 ಗಂಟೆಗಳ ಕಾಲ ಕಾವಲು ಕಾಯುತ್ತಿದ್ದಾರೆ. ನಾರಾಯಣ ಸೇನಾ ಗುಲಾಬಿ ಬಣ್ಣದ ಉಡುಗೆ ತೊಟ್ಟಿದ್ದಾರೆ. ಗರುಡ ಯೋಧರು ಕಪ್ಪು ಉಡುಪು ಧರಿಸುತ್ತಾರೆ. ಹರಿ ವಾಹಕ್ ಸದಸ್ಯರು ಕಂದು ಬಣ್ಣದ ಉಡುಪು ಧರಿಸುತ್ತಾರೆ.
ಬಾಬಾನ ಬೆಂಗಾವಲು ಪಡೆಯಲ್ಲಿ ಯಾವಾಗಲೂ 20 ಕಪ್ಪು ಕಮಾಂಡೋಗಳು ಇರುತ್ತಾರೆ. ನಾರಾಯಣ ಸೇನೆಯ 50 ಸದಸ್ಯರು ಮತ್ತು ಹರಿ ವಾಖ್‌ನ 25 ಸದಸ್ಯರು ಸಹ ಇರುತ್ತಾರೆ.
ರಾಜ್ಯಗಳಿಗೆ ಬಿಗ್ ಅಲರ್ಟ್.. ಬರುತ್ತಿದೆ ಮತ್ತೊಂದು ವೈರಸ್​! ಮಹಾರಾಷ್ಟ್ರದಲ್ಲಿ 8 ಪ್ರಕರಣ ವರದಿ!

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಟ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:fourteen − 10 =
Remember me
