ಮಧ್ಯಪ್ರದೇಶ:ಪೋರ್ನ್ ಸ್ಟಾರ್ ರಿಮ್ಜಿಮ್ ದಾಸ್ ಎಂಬಾಕೆ ಅಕ್ರಮ ಸಂಬಂಧದ ಹೆಸರಿನಲ್ಲಿ ಉಜ್ಜಯಿನಿ ಜಿಲ್ಲೆಯ ನಿವಾಸಿ ಆಶಿ ಖಾನ್ ಎಂಬಾತನಿಗೆ ಬೆದರಿಕೆ ಹಾಕಿ ಹಣ ನೀಡುವಂತೆ ಒತ್ತಾಯಿಸಿದ್ದಾಳೆ. ಅಸ್ಸಾಂ ಮೂಲದವಳಾದ ರಿಮ್ಜಿಮ್ ದಾಸ್ ಮುಂಬೈನಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದಳು. ಇದೀಗ ಪೋರ್ನ್​ ಸ್ಟಾರ್​​ನ ನಿರಂತರ ಬೆದರಿಕೆಯಿಂದ ಆಶಿ ಖಾನ್ ತನ್ನ ಕುಟುಂಬಸ್ಥರೊಂದಿಗೆ ವಿಷ ಸೇವಿಸಿದ್ದಾನೆ.
ಆಶಿ ಖಾನ್ ತನ್ನ ತಾಯಿ ಹಾಗೂ ಪತ್ನಿಯೊಂದಿಗೆ ವಿಷ ಸೇವಿಸಿದ್ದಾನೆ. ಸದ್ಯ ಮೂವರ ಸ್ಥಿತಿಯೂ ಚಿಂತಾಜನಕವಾಗಿದ್ದು, ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂಬೈನಲ್ಲಿ ಬಟ್ಟೆ ವ್ಯಾಪಾರಿಯಾಗಿದ್ದಾಗ ಆಶಿ ಖಾನ್​ಗೆ ಪೋರ್ನ್​ ಸ್ಟಾರ್ ರಿಮ್ಜಿಮ್ ದಾಸ್ ಪರಿಚಯವಾಗಿತ್ತು ಎನ್ನಲಾಗಿದೆ.
In a Shocking incident A family of three consumed poison in Ujjain after getting blackmailed by a Guwahati Girl working in Mumbai as an Air hostess and Porn Actress. She framed Cloth Marchant Ashi Khan in a false RAPE case and was extorting money from himpic.twitter.com/JW6TjNKvG4— NCMIndia Council For Men Affairs (@NCMIndiaa)December 23, 2022
In a Shocking incident A family of three consumed poison in Ujjain after getting blackmailed by a Guwahati Girl working in Mumbai as an Air hostess and Porn Actress. She framed Cloth Marchant Ashi Khan in a false RAPE case and was extorting money from himpic.twitter.com/JW6TjNKvG4
ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಆಶಿ ಖಾನ್ ಕುಟುಂಬ ವಿಡಿಯೋ ಮಾಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ‘ನನ್ನ ಹೆಸರು ಆಶಿ ಖಾನ್. ಉಜ್ಜಯಿನಿಯ ಲೋಹೆ ಪುಲ್ ನಿವಾಸಿ. ವಿಡಿಯೋದಲ್ಲಿ ನನ್ನ ಜತೆಗೆ ಇರುವವರು ತಾಯಿ ಮತ್ತು ಪತ್ನಿ. ಮುಂಬೈನ ರಿಮ್ಜಿಮ್ ದಾಸ್ ಎಂಬ ಪೋರ್ನ್ ಸ್ಟಾರ್ ನನಗೆ ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದಾಳೆ. ಕೇಳಿದಷ್ಟು ಹಣ ನೀಡದೇ ಇದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದಾಳೆ. ಈ ಹಿಂದೆ ನನ್ನ ಮದುವೆಯ ಸಂದರ್ಭದಲ್ಲಿ ಹಣ ನೀಡಿದ್ದೆ. ಇದೀಗ ಮತ್ತೆ ಹಣಕ್ಕಾಗಿ ನಿರಂತರ ಕಿರುಕುಳ ನೀಡುತ್ತಿದ್ದಾಳೆ’ ಎಂದು ಆಶಿ ಖಾನ್ ಹೇಳಿಕೊಂಡಿದ್ದಾನೆ.
ಮುಂಬೈನಲ್ಲಿದ್ದಾಗ ಅತ್ಯಾಚಾರದ ಪ್ರಕರಣದಲ್ಲಿ ನನ್ನನ್ನು ಜೈಲಿಗೆ ಕಳುಹಿಸಿದ್ದಳು. ಈಗ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕಿರುಕುಳ ನೀಡುತ್ತಿದ್ದಾಳೆ. ಆಕೆಗೆ ಹಣ ಕೊಡಲು ನನ್ನಿಂದ ಸಾಧ್ಯವಿಲ್ಲ. ಹೀಗಾಗಿ ಕುಟುಂಬ ಸಮೇತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ವಿಡಿಯೋದಲ್ಲಿ ಆಶಿ ಖಾನ್ ಹೇಳಿಕೊಂಡಿದ್ದಾನೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
