ಉತ್ತರಪ್ರದೇಶ: ದೀಪಾವಳಿ ಹತ್ತಿರ ಇರುತ್ತಿರುವಂತೆ ಪಟಾಕಿ ಸಿಡಿತದ ಅನಾಹುತದ ಸುದ್ದಿಗಳು ಒಂದರ ಬೆನ್ನ ಹಿಂದೊಂದರಂತೆ ವರದಿ ಆಗುತ್ತಿವೆ. ಆ ಪೈಕಿ ದೇಶದ ಎರಡು ಕಡೆ ಬುಧವಾರ ಒಂದೇ ದಿನ ಒಟ್ಟು ಎರಡು ಅಗ್ನಿ ಆಕಸ್ಮಿಕಗಳು ವರದಿ ಆಗಿವೆ.
ಉತ್ತರ ಪ್ರದೇಶದ ಖುಷಿ ನಗರದಲ್ಲಿ ಪರವಾನಗಿ ರಹಿತ ಪಟಾಕಿ ಗೋದಾಮಿನಲ್ಲಿ ಬುಧವಾರ ಬೆಳಗ್ಗೆ ಸ್ಫೋಟ ಸಂಭವಿಸಿದೆ. ಕಪ್ತಾನ್​ಗಂಜ್​ನ ಆರ್ಯ ಸಮಾಜ ದೇವಸ್ಥಾನ ವಾರ್ಡ್​ನ ಮನೆಯೊಂದರ ಗೋದಾಮಲ್ಲಿ ಅಕ್ರಮವಾಗಿ ಪಟಾಕಿ ಸಂಗ್ರಹಿಸಡಲಾಗಿತ್ತು. ಅಲ್ಲಿದ್ದ ಸಿಲಿಂಡರ್​ನಲ್ಲಿ ಗ್ಯಾಸ್ ಸೋರಿಕೆಯ ಆಗಿ ಸ್ಫೋಟ ಸಂಭವಿಸಿದ್ದು, ಜತೆಗೆ ಪಟಾಕಿ ದಾಸ್ತಾನು ಕೂಡ ಸಿಡಿದಿತ್ತು. ಈ ಸಂದರ್ಭ ನಾಲ್ವರು ಮೃತಪಟ್ಟಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ.
ಮತ್ತೊಂದೆಡೆ ಕೋಲ್ಕತದ ಚಂಪಾಹತ್​ನಲ್ಲಿನ ಪಟಾಕಿ ಕಾರ್ಖಾನೆಯೊಂದರಲ್ಲಿ ಬುಧವಾರ ಮಧ್ಯಾಹ್ನ ಸ್ಫೋಟ ಸಂಭವಿಸಿದೆ. ಭಾರಿ ಸದ್ದಿನೊಂದಿಗೆ ಸ್ಫೋಟ ಸಂಭವಿಸಿದೆ. ಬೆಂಕಿಯ ಕೆನ್ನಾಲಿಗೆ ಆವರಿಸಿದ್ದು, ಪರಿಸ್ಥಿತಿ ಇನ್ನಷ್ಟೇ ಹತೋಟಿಗೆ ಬರಬೇಕಿದೆ. ಸಾವು-ನೋವಿನ ಬಗ್ಗೆ ಸದ್ಯಕ್ಕೆ ಮಾಹಿತಿ ಹೊರಬಿದ್ದಿಲ್ಲ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
