ಅಹಮದಾಬಾದ್​:ಆಂಧ್ರಪ್ರದೇಶ ವಿಶಾಖಪಟ್ಟಣದ ಎಲ್​ಜಿ ಪಾಲಿಮರ್ಸ್​ ಕಾರ್ಖಾನೆಯಲ್ಲಿ ಸಂಭವಿಸಿದ ವಿಷಾನಿಲ ದುರಂತದ ನೆನಪು ಮಾಸುವ ಮುನ್ನವೇ, ಗುಜರಾತ್​ನ ರಾಸಾಯನಿಕ ಕಾರ್ಖಾನೆಯಲ್ಲಿ ಭಾರಿ ಸ್ಫೋಟ ಸಂಭವಿಸಿದೆ.
ಸ್ಫೋಟದಿಂದಾಗಿ ಭಾರಿ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಲ್ವತ್ತಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಎರಡು ಹಳ್ಳಿಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಇದನ್ನೂ ಓದಿ;ಕರೊನಾ ಹರಡುವುದರಲ್ಲಷ್ಟೇ ಅಲ್ಲ, ದೆಹಲಿ ಗಲಭೆಯಲ್ಲೂ ತಬ್ಲಿಘಿಗಳ ಕೈವಾಡ…!
ದಹೇಜ್​ನ ಕೈಗಾರಿಕಾ ಪ್ರದೇಶದಲ್ಲಿರುವ ಯಶಸ್ವಿ ರಾಸಾಯನ ಪ್ರೈವೇಟ್​ ಲಿಮಿಟೆಡ್​ನ ಕಾರ್ಖಾನೆಯ ಬಾಯ್ಲರ್​ ಸ್ಫೋಟದಿಂದಾಗಿ ಈ ದುರಂತ ಸಂಭವಿಸಿದೆ.ಕೃಷಿ ರಾಸಾಯನಿಕಗಳ ಕಾರ್ಖಾನೆ ಇದಾಗಿದ್ದು, ಮಧ್ಯಾಹ್ನದ ವೇಳೆ ಅವಘಡ ಸಂಭವಿಸಿದೆ. ಘಟನೆಯಲ್ಲಿ ಕನಿಷ್ಠ 40 ಜನರಿಗೆ ಸುಟ್ಟಗಾಯಗಳಾಗಿದ್ದು, ಭರೂಚ್​ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ;‘ಯಾವುದಕ್ಕೂ ಜತೆಗೊಂದು ಸುತ್ತಿಗೆಯಿರಲಿ…’ ಜನರಿಗೆ ಮುಂಬೈ ಪಾಲಿಕೆ ಸಲಹೆ…..!
ರಾಸಾಯನಿಕ ಸ್ಫೋಟದಿಂದಾಗಿ ಸುತ್ತಲಿನ ಪ್ರದೇಶದಲ್ಲಿ ಅಸಹನೀಯ ವಾಸನೆ ಹರಡಿದೆ. ಈ ರಾಸಾಯನಿಕಗಳು ವಿಷಕಾರಿಯಾಗಿದ್ದು, ಲಖಿ ಮತತ್ಉ ಲುವಾರಾ ಗ್ರಾಮಗಳ ಜನರನ್ನು ದೂರದ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಡಿ. ಮೋದಿಯಾ ತಿಳಿಸಿದ್ದಾರೆ.
https://www.vijayavani.net/talks-on-to-privatise-state-run-banks-punjab-sind-indian-overseas-bank-of-maharrashtra-possible-names/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + fifteen =
Remember me
