ಮುಂಬೈ:ಮಹಾರಾಷ್ಟ್ರದ ಪಲ್ಗಾರ್​ನಲ್ಲಿರುವ ತಾರಾಪುರ ರಾಸಾಯನಿಕ ವಲಯದಲ್ಲಿ ಸೋಮವಾರ ಸಂಭವಿಸಿದ ಭಾರಿ ಸ್ಫೋಟದಲ್ಲಿ ಇಬ್ಬರು ಮೃತಪಟ್ಟಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸೋಪು, ಡಿಟರ್ಜೆಂಟ್​ ಮತ್ತು ಸ್ಯಾನಿಟೈಸರ್​ ತಯಾರಿಸುವ ಕಾರ್ಖಾನೆಯಲ್ಲಿ 105 ಕೆಲಸಗಾರರು ಮತ್ತು ಆಡಳಿತ ವರ್ಗದ ಅಧಿಕಾರಿಗಳು ಸೋಮವಾರ ಎಂದಿನಂತೆ ಕೆಲಸಕ್ಕೆ ಹಾಜರಾಗಿದ್ದರು. ಸ್ಯಾನಿಟೈಸರ್​ ಉತ್ಪಾದನಾ ಘಟಕದಲ್ಲಿ ಮಧ್ಯಾಹ್ನ ಹಠಾತ್​ ಸ್ಫೋಟ ಸಂಭವಿಸಿತು ಎನ್ನಲಾಗಿದೆ.
ಅಗತ್ಯ ಸೇವೆಗಳ ಕಾರ್ಖಾನೆಗಳು ಕಾರ್ಯನಿರ್ವಹಿಸಲು ಸರ್ಕಾರ ಅನುಮತಿ ಕೊಟ್ಟ ಹಿನ್ನೆಲೆಯಲ್ಲಿ ಈ ಘಟಕದಲ್ಲಿ ಉದ್ಯೋಗಿಗಳು ಎಂದಿನಂತೆ ಕೆಲಸಕ್ಕೆ ಹಾಜರಾಗಿದ್ದರು ಎಂದು ಹೇಳಲಾಗಿದೆ.
ತಾರಾಪುರ ರಾಸಾಯನಿಕ ವಲಯದ ಇನ್ನೊಂದು ರಾಸಾಯನಿಕ ಕಾರ್ಖಾನೆಯಲ್ಲಿ ಜನವರಿಯಲ್ಲಿ ಸ್ಫೋಟ ಸಂಭವಿಸಿತ್ತು. ಈ ಘಟನೆಯಲ್ಲಿ ಆರು ಜನ ಮೃತಪಟ್ಟಿದ್ದರು.
ಕಚೇರಿಗಳಿಗೆ ಮರಳಿದ ಕೇಂದ್ರ ಸಚಿವರು, ಅಧಿಕಾರಿಗಳು, ಹಂತಹಂತವಾಗಿ ಲಾಕ್​ಡೌನ್​ ತೆರವುಗೊಳಿಸುವ ಸೂಚನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − eight =
Remember me
