ಉತ್ತರಾಖಂಡ:​ಏಮ್ಸ್​ ರಿಷಿಕೇಶ್​ನಿಂದ ಉತ್ತರಾಖಂಡದ ಕೋಟ್‌ದ್ವಾರ ಆಸ್ಪತ್ರೆಗೆ ರಕ್ತದ ಮಾದರಿಗಳನ್ನು ಹೊತ್ತೊಯ್ಯುತ್ತಿದ್ದ ಡ್ರೋನ್ ಸೋಮವಾರ ರಾಜ್ಯದ ಪೌರಿ ಜಿಲ್ಲೆಯ ಕಾಡಿನಲ್ಲಿ ಮರಕ್ಕೆ ಡಿಕ್ಕಿ ಹೊಡೆದು ಪತನಗೊಂಡಿದೆ.
ಇದನ್ನೂ ಓದಿ:Sharath Lohitashwa On Spandana Vijay Raghavendra Demise | ಸ್ಪಂದನಾ ವಿಜಯರಾಘವೇಂದ್ರ ಕುಟುಂಬಕ್ಕೆ ಧೈರ್ಯ ತುಂಬಿದ ನಟ ಶರತ್​​ ಲೋಹಿತಾಶ್ವ!
ಏಮ್ಸ್ ರಿಷಿಕೇಶ್ ನಿರ್ದೇಶಕ ಡಾ.ಮೀನು ಸಿಂಗ್ ಅವರ ನೇತೃತ್ವದಲ್ಲಿ, ದೂರದ ಪ್ರದೇಶಗಳಲ್ಲಿ ವಾಸವಿರುವವರಿಗೆ ರಕ್ತದ ಮಾದರಿಗಳು ಮತ್ತು ಅಗತ್ಯ ಔಷಧಿಗಳನ್ನು ತಲುಪಿಸುವ ಪ್ರಯೋಗದ ಭಾಗವಾಗಿ ಡ್ರೋನ್‌ನ ಪ್ರಯೋಗವನ್ನು ನಡೆಸಲಾಗಿತ್ತು. ಅದರಂತೆ ಇಂದಿನ ಪ್ರಯೋಗದಲ್ಲಿ ಬ್ಲಡ್​ ಸ್ಯಾಂಪಲ್​ಗಳನ್ನು ಹೊತ್ತ ಡ್ರೋನ್ ಏಮ್ಸ್ ರಿಷಿಕೇಶದಿಂದ ಹೊರಟು ಕೋಟ್‌ದ್ವಾರದ ಮೂಲ ಆಸ್ಪತ್ರೆಯತ್ತ ಹೊರಟಿತ್ತು. ಈ ವೇಳೆ ಮಾರ್ಗ ಮಧ್ಯೆ ಸಿದ್ಕುಲ್ ಪ್ರದೇಶದಲ್ಲಿ ಡ್ರೋನ್ ಮರಕ್ಕೆ ಡಿಕ್ಕಿ ಹೊಡೆದಿದ್ದು, ಪತನಗೊಂಡು ಸಂಪೂರ್ಣ ಜಖಂಗೊಂಡಿದೆ.
ಡ್ರೋನ್​ನ ಹಾರಿಬಿಟ್ಟ ವ್ಯಕ್ತಿ, ಕೋಟ್‌ದ್ವಾರದ ಆಸ್ಪತ್ರೆಯ ಮೇಲೆ ಅದರ ಆಗಮನಕ್ಕಾಗಿ ಕಾಯುತ್ತಿದ್ದರು. ಈ ಮಧ್ಯೆ ಡ್ರೋನ್ ಪತನಗೊಂಡ ಬಗ್ಗೆ ಸಂದೇಶದ ಮೂಲಕ ಮಾಹಿತಿ ತಿಳಿಯುತ್ತಿದ್ದಂತೆ, ಅವರು ಸ್ಥಳಕ್ಕೆ ಧಾವಿಸಿದ್ದಾರೆ. ಡ್ರೋನ್​ ಬಿದ್ದ ಜಾಗದಲ್ಲಿ ಪರಿಶೀಲನೆ ನಡೆಸಿದಾಗ ಅದು ಸಂಪೂರ್ಣ ಹಾನಿಗೊಂಡಿರುವುದು ತಿಳಿದುಬಂದಿದೆ.
ಇದನ್ನೂ ಓದಿ:ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿ ರೈತ ಮೋರ್ಚಾದಿಂದ ಪ್ರತಿಭಟನೆ
ಈ ಬಗ್ಗೆ ಮಾತನಾಡಿದ ಡ್ರೋನ್ ಪೈಲಟ್ ಸ್ನೇಹ್, ರಕ್ತದ ಮಾದರಿಗಳನ್ನು ಸಾಗಿಸುವ ಡ್ರೋನ್ ಪ್ರಾಯೋಗಿಕ ಹಾರಾಟದಲ್ಲಿತ್ತು. ಬಹುಶಃ ತಾಂತ್ರಿಕ ಅಡಚಣೆ ಅಥವಾ ಹವಾಮಾನ ಪರಿಸ್ಥಿತಿಗಳಿಂದ ಮರಕ್ಕೆ ಅಪ್ಪಳಿಸಿ ಪತನಗೊಂಡಿದೆ. ಡ್ರೋನ್ 400 ಅಡಿ ಎತ್ತರದವರೆಗೆ ಹಾರುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದರು,(ಏಜೆನ್ಸೀಸ್).
ಫಹದ್ ಫಾಸಿಲ್ ಜನ್ಮದಿನಕ್ಕೆ ರಿಲೀಸ್ ಆಯ್ತು ಅವರ ಫಸ್ಟ್​ ಲುಕ್; ಶುಭಾಶಯ ತಿಳಿಸಿದ ‘ಪುಷ್ಪಾ 2’ ಚಿತ್ರತಂಡ​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
