ಮುಂಬೈ:ಭಾರೀ ವಿದೇಶಿ ನಿಧಿಯ ಹೊರಹರಿವು ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್, ಲಾರ್ಸೆನ್ ಮತ್ತು ಟೂಬ್ರೊ ಮತ್ತು ರಿಲಯನ್ಸ್ ಇಂಡಸ್ಟ್ರೀಸ್‌ ಷೇರುಗಳ ಮಾರಾಟದ ಹಿನ್ನೆಲೆಯಲ್ಲಿ ಬೆಂಚ್‌ಮಾರ್ಕ್ ಇಕ್ವಿಟಿ ಸೂಚ್ಯಂಕಗಳಾದ ಬಿಎಸ್​ಇ ಸೆನ್ಸೆಕ್ಸ್ ಮತ್ತು ನಿಫ್ಟಿ ಗುರುವಾರ 1.5 ರಷ್ಟು ಕುಸಿತ ಕಂಡವು.
ಷೇರು ಮಾರುಕಟ್ಟೆ ಸತತ 5ನೇ ವಹಿವಾಟಿನ ದಿನ ಕುಸಿತ ಕಂಡಿದ್ದು, 30-ಷೇರುಗಳ ಬಿಎಸ್‌ಇ ಸೂಚ್ಯಂಕ 1,062.22 ಅಂಕಗಳು ಅಥವಾ ಶೇಕಡಾ 1.45ರಷ್ಟು ಕುಸಿದು 72,404.17 ಕ್ಕೆ ಸ್ಥಿರವಾಯಿತು. ದಿನದ ಅವಧಿಯಲ್ಲಿ, ಇದು 1,132.21 ಅಂಕಗಳು ಅಥವಾ ಶೇಕಡಾ 1.54ರಷ್ಟು ಕುಸಿದು 72,334.18 ಕ್ಕೆ ತಲುಪಿತ್ತು.
ಎನ್‌ಎಸ್‌ಇ ನಿಫ್ಟಿ 50 ಸೂಚ್ಯಂಕವು 345 ಅಂಕಗಳು ಅಥವಾ ಶೇಕಡಾ 1.55 ರಷ್ಟು ಕುಸಿತ ಕಂಡು 21,957.50 ಕ್ಕೆ ತಲುಪಿತು. ದಿನದ ಅವಧಿಯಲ್ಲಿ, ಇದು 370.1 ಅಂಕಗಳು ಅಥವಾ ಶೇಕಡಾ 1.65ರಷ್ಟು ಕುಸಿದು 21,932.40 ಕ್ಕೆ ಮುಟ್ಟಿತು.
ನಿಫ್ಟಿ ಬ್ಯಾಂಕ್ ಸೂಚ್ಯಂಕವು ಕಳೆದ ಸತತ ಏಳು ದಿನಗಳಿಂದ ಕುಸಿತ ಕಂಡಿದ್ದು, ಸೂಚ್ಯಂಕ 1900 ಅಂಕಗಳಷ್ಟು ನಷ್ಟವಾಗಿದೆ. ಸ್ಟಾಕ್ ಮಾರುಕಟ್ಟೆ ತಜ್ಞರ ಸೂಕ್ಷ್ಮ ಅವಲೋಕನಗಳ ಪ್ರಕಾರ, ಪ್ರಸ್ತುತ ಲೋಕಸಭಾ ಚುನಾವಣೆಗಳು, ಎಫ್‌ಐಐಗಳ (ವಿದೇಶಿ ಸಾಂಸ್ಥಿಕ ಹೂಡಿಕೆದಾರರು) ಮಾರಾಟ, ಅಮೆರಿಕ ಡಾಲರ್ ದರಗಳಿಗೆ ಬೇಡಿಕೆ, ಅಮೆರಿಕದ ಕೇಂದ್ರೀಯ ಬ್ಯಾಂಕ್​ ಬಡ್ಡಿ ದರದ ಕಟ್ಟುನಿಟ್ಟಿನ ನೀತಿ, ನಾಲ್ಕನೇ ತ್ರೈಮಾಸಿಕದಲ್ಲಿ ಪ್ರಭಾವಶಾಲಿಯಲ್ಲದ ಕಂಪನಿ ಫಲಿತಾಂಶಗಳು ಭಾರತೀಯ ಷೇರು ಮಾರುಕಟ್ಟೆಯನ್ನು ಕೆಳಮುಖವಾಗಿ ಎಳೆಯಲು ಪ್ರಾಥಮಿಕ ಕಾರಣಗಳಾಗಿವೆ
ಪ್ರಮುಖ ಷೇರುಗಳ ಪೈಕಿ, ಲಾರ್ಸನ್ ಆ್ಯಂಡ್​ ಟೂಬ್ರೊ ಸ್ಟಾಕ್​ ಬೆಲೆ ಶೇಕಡಾ 5 ಕ್ಕಿಂತ ಕಡಿಮೆಯಾಗಿದೆ. ಏಷ್ಯನ್ ಪೇಂಟ್ಸ್, ಜೆಎಸ್‌ಡಬ್ಲ್ಯೂ ಸ್ಟೀಲ್, ಐಟಿಸಿ, ಬಜಾಜ್ ಫೈನಾನ್ಸ್, ಇಂಡಸ್‌ಇಂಡ್ ಬ್ಯಾಂಕ್, ಟಾಟಾ ಸ್ಟೀಲ್, ಎನ್‌ಟಿಪಿಸಿ, ಬಜಾಜ್ ಫಿನ್‌ಸರ್ವ್, ಎಚ್‌ಡಿಎಫ್‌ಸಿ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಪವರ್ ಗ್ರಿಡ್ ಷೇರುಗಳ ಬೆಲೆ ಕುಸಿತ ಕಂಡಿದೆ. ಟಾಟಾ ಮೋಟಾರ್ಸ್, ಮಹೀಂದ್ರಾ ಮತ್ತು ಮಹೀಂದ್ರಾ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇನ್ಫೋಸಿಸ್ ಮತ್ತು ಎಚ್‌ಸಿಎಲ್ ಟೆಕ್ ಷೇರುಗಳು ಲಾಭ ಗಳಿಸಿದವು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಬುಧವಾರ 6,669.10 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಏಷ್ಯಾದ ಮಾರುಕಟ್ಟೆಗಳ ಪೈಕಿ, ಶಾಂಘೈ ಮತ್ತು ಹಾಂಗ್ ಕಾಂಗ್ ಲಾಭ ಗಳಿಸಿದರೆ, ಸಿಯೋಲ್ ಮತ್ತು ಟೋಕಿಯೊ ಕುಸಿತ ಕಂಡವು. ಐರೋಪ್ಯ ಮಾರುಕಟ್ಟೆಗಳಲ್ಲಿ ಮಿಶ್ರ ವಹಿವಾಟು ನಡೆಯಿತು. ಬುಧವಾರ ರಾತ್ರಿಯ ವ್ಯಾಪಾರದಲ್ಲಿ ವಾಲ್ ಸ್ಟ್ರೀಟ್​ನಲ್ಲಿ ಮಿಶ್ರ ಪರಿಸ್ಥಿತಿ ಇತ್ತು.
30-ಷೇರುಗಳ ಬಿಎಸ್‌ಇ ಸೂಚ್ಯಂಕ ಬುಧವಾರ 45.46 ಅಂಕಗಳು ಅಥವಾ ಶೇಕಡಾ 0.06 ರಷ್ಟು ಕುಸಿದು 73,466.39 ಕ್ಕೆ ಸ್ಥಿರವಾಗಿತ್ತು. ಎನ್‌ಎಸ್‌ಇ ನಿಫ್ಟಿ 22,302.50ರಲ್ಲಿ ಬದಲಾಗದೆ ಉಳಿದಿತ್ತು.

ಸಲ್ಮಾನ್ ಖಾನ್​ಗೆ ಗುಂಡು ಹಾರಿಸಿದರೆ ಸಿಗುತ್ತದೆ ಪುಣ್ಯ: ಐದನೇ ಆರೋಪಿ ಬಂಧನದ ನಂತರ ಸ್ಫೋಟಕ ಮಾಹಿತಿ ಬಹಿರಂಗ

ಈ ಬಾಲಿವುಡ್ ನಟಿ ಸಿಖ್ ಆಗಿ ಬೆಳೆದಳು… ಪ್ರೇಮ ವಿವಾಹಕ್ಕಾಗಿ ಇಸ್ಲಾಂಗೆ ಮತಾಂತರಗೊಂಡಳು..

ಅನನ್ಯಾ ಪಾಂಡೆ ಜತೆ ಬ್ರೇಕಪ್: ಆದಿತ್ಯಾ ರಾಯ್ ಕಪೂರ್ ಡೇಟಿಂಗ್ ಈಗ ಯಾರೊಂದಿಗೆ?

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:20 − 9 =
Remember me
