ನವದೆಹಲಿ:ಸರ್ಕಾರದ ಒಪ್ಪಿಗೆಯನ್ನು ಪಡೆಯದೆ ದೆಹಲಿ ಮುನ್ಸಿಪಲ್​ ಕಾರ್ಪೊರೇಷನ್​ (ಎಂಸಿಡಿ)ಗೆ ಸದಸ್ಯರನ್ನು ನಾಮನಿರ್ದೇಶನ ಮಾಡುವ ಅಧಿಕಾರವನ್ನು ದೆಹಲಿಯ ಲೆಫ್ಟಿನೆಂಟ್​ ಗವರ್ನರ್​ ಹೊಂದಿದ್ದಾರೆ ಎಂದು ಸುಪ್ರೀಂಕೋರ್ಟ್​ ಸೋಮವಾರ (ಆ.05) ಮಹತ್ವದ ತೀರ್ಪು ಹೊರಡಿಸಿದೆ.
ದೆಹಲಿ ಮುನ್ಸಿಪಲ್​ ಕಾರ್ಪೊರೇಷನ್​ ಕಾಯ್ದೆ ಅಡಿಯಲ್ಲಿ ಈ ಅಧಿಕಾರ ಬಂದಿದೆ. ಹೀಗಾಗಿ ಸದಸ್ಯರ ನಾಮನಿರ್ದೇಶನ ಮಾಡಲು ಲೆಫ್ಟಿನೆಂಟ್​ ಗವರ್ನರ್​ ಅವರು ದೆಹಲಿ ಸರ್ಕಾರದ ಸಲಹೆಯನ್ನು ಪಾಲಿಸಬೇಕಿಲ್ಲ. ಇದು ಶಾಸನಬದ್ಧ ಅಧಿಕಾರವಾಗಿರುವುದರಿಂದ ಲೆಫ್ಟಿನೆಂಟ್ ಗವರ್ನರ್ ದೆಹಲಿ ಸರ್ಕಾರದ ಸಲಹೆ ಅಲ್ಲ, ಶಾಸನಬದ್ಧ ಆದೇಶವನ್ನು ಅನುಸರಿಸುತ್ತಾರೆ ಎಂದು ಕೋರ್ಟ್​ ಹೇಳಿದೆ.
ದೆಹಲಿ ಲೆಫ್ಟಿನೆಂಟ್ ಗವರ್ನರ್ ಅಧಿಕಾರವು ಲಾಟರಿ ಎಂದು ಸೂಚಿಸುವುದು ಸರಿಯಲ್ಲ. ಇದು ಸಂಸತ್ತಿನಿಂದ ಮಾಡಲ್ಪಟ್ಟ ಕಾನೂನಾಗಿದೆ. ಲೆಫ್ಟಿನೆಂಟ್ ಗವರ್ನರ್ ಅವರು ಚಲಾಯಿಸುವ ಅಧಿಕಾರ ಅವರ ವಿವೇಚನೆಗೆ ಬಿಡಲಾಗಿದೆ. 1993 ರ ಎಂಸಿಡಿ ಕಾಯಿದೆಯು ಲೆಫ್ಟಿನೆಂಟ್ ಗವರ್ನರ್​ಗೆ ನಾಮನಿರ್ದೇಶನ ಮಾಡುವ ಅಧಿಕಾರವನ್ನು ನೀಡಿದೆ ಎಂದು ನ್ಯಾಯಾಲಯ ಹೇಳಿದೆ.
ಲೆಫ್ಟಿನೆಂಟ್​ ಗವರ್ನರ್​ ವಿಕೆ ಸಕ್ಸೇನಾ ಅವರು ಎಂಸಿಡಿಗೆ 10 ಮಂದಿ ಪದಾಧಿಕಾರಿಗಳನ್ನು ನಾಮನಿರ್ದೇಶನ ಮಾಡಿದ್ದರು. ಇದು ಭಾರಿ ವಿವಾದಕ್ಕೀಡಾಗಿ ಗವರ್ನರ್​ ವಿರುದ್ಧ ದೆಹಲಿ ಸರ್ಕಾರ ಸುಪ್ರೀಂಕೋರ್ಟ್​ ಮೆಟ್ಟಿಲೇರಿತ್ತು. ಸಚಿವರ ಸಲಹೆಯನ್ನು ಸ್ವೀಕರಿಸದೇ ನಾಮನಿರ್ದೇಶನ ಮಾಡಿದ್ದಾರೆ, ಗವರ್ನರ್​ ಅಧಿಸೂಚನೆ ರದ್ದುಗೊಳಿಸುವಂತೆ ಕೋರಿತ್ತು. ವಿಚಾರಣೆ ನಡೆಸಿದ ಸಿಜೆಐ ಚಂದ್ರಚೂಡ್, ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಮತ್ತು ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಅವರನ್ನೊಳಗೊಂಡ ಪೀಠವು 2023ರ ಮೇ 17 ಎಂದು ತೀರ್ಪನ್ನು ಕಾಯ್ದಿರಿಸಿತ್ತು.
Woman Molested in Bengaluru: ಮನೆ ಮುಂದೆ ವಾಕಿಂಗ್ ಮಾಡುತ್ತಿದ್ದ ಮಹಿಳೆ ಮೇಲೆ ಕಾಮುಕನ ಅಟ್ಟಹಾಸ, Video Viral!https://t.co/ERP0ZYphCM#Bengaluru#MolestationCase#KarnatakaPolice#Sexualharassment#SexualAssault#ಬೆಂಗಳೂರು#ದೌರ್ಜನ್ಯಪ್ರಕರಣ#ಕರ್ನಾಟಕಪೊಲೀಸ್#ಲೈಂಗಿಕಕಿರುಕುಳ#ಲೈಂಗಿಕದೌರ್ಜನ್ಯ@CPBlr…pic.twitter.com/Y3jan5UbiW
— kannadaprabha (@KannadaPrabha)August 5, 2024

ತನ್ನ ಮನವಿಯಲ್ಲಿ ದೆಹಲಿ ಸರ್ಕಾರ ಲೆಫ್ಟಿನೆಂಟ್ ಗವರ್ನರ್ ಚುನಾಯಿತ ಸರ್ಕಾರವನ್ನು ನಿರ್ಲಕ್ಷಿಸಿ, ಎಂಸಿಡಿಗೆ ನೇಮಕಾತಿಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ಆದರೆ, ದೆಹಲಿ ಸರ್ಕಾರದ ಮನವಿಯನ್ನು ತಿರಸ್ಕರಿಸಿರುವ ನ್ಯಾಯಾಲಯ ಲೆಫ್ಟಿನೆಂಟ್​ ಗವರ್ನರ್​ಗೆ ಅಧಿಕಾರವಿದೆ ಎಂದು ತೀರ್ಪು ನೀಡಿದೆ. ಈ ತೀರ್ಪಿನಿಂದ ಸಿಎಂ ಅರವಿಂದ್​ ಕೇಜ್ರಿವಾಲ್​ ನೇತೃತ್ವದ ದೆಹಲಿ ಸರ್ಕಾರಕ್ಕೆ ಭಾರಿ ಹಿನ್ನೆಡೆಯಾದಂತಾಗಿದೆ.(ಏಜೆನ್ಸೀಸ್​)
ವಯನಾಡು ದುರಂತಕ್ಕೆ ಗರ್ಭಿಣಿ ಆನೆ ಶಾಪ ಕಾರಣ?! ಇಲ್ಲಿದೆ ಸತ್ಯಾಂಶ, 4 ವರ್ಷದ ಹಿಂದಿನ ಘಟನೆ ಕಣ್ಣೀರು ತರಿಸುತ್ತೆ

ಕೀರ್ತಿ ಸುರೇಶ್​ ಹೊಸ ಅವತಾರಕ್ಕೆ ಫ್ಯಾನ್ಸ್​ ಫಿದಾ! ಗ್ಲಾಮರಸ್​ ಲುಕ್​ನಿಂದಲೇ ಟ್ರೆಂಡ್ ಆದ ಸೌತ್​ ಬ್ಯೂಟಿ​

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:14 + eleven =
Remember me
